ETV Bharat / city

ಚಿಕ್ಕೋಡಿಯಲ್ಲೊಂದು ಅಪರೂಪದ ಮದುವೆ; ಮೂಗ-ಕಿವುಡ ಜೋಡಿ ಒಂದಾಗಿಸಿದ್ದು ಮತ್ತೊಬ್ಬ ಮೂಗ! - ಬೆಳಗಾವಿ ಮದುವೆ ಸುದ್ದಿ

ವಧುಗೆ ಮಾತು ಬರಲ್ಲ, ವರನಿಗೆ ಕಿವಿ ಕೇಳಿಸಲ್ಲ- ಮಾತಿಗಿಂತ ಹೃದಯದ ಭಾಷೆ ಸೇರಿಸಿತು ವಿಶೇಷ ಜೋಡಿಯನ್ನು- ಸಹಸ್ರಾರು ಜನರಿಂದ ಶುಭ ಹಾರೈಕೆ

deaf and dumb couple got married in Belagavi, Different marriage in Chikkodi, Belagavi marriage news, deaf and dumb couple marriage news, ಬೆಳಗಾವಿಯಲ್ಲಿ ಕಿವುಡ ಮತ್ತು ಮೂಗ ಜೋಡಿ ಮದುವೆ, ಚಿಕ್ಕೋಡಿಯಲ್ಲಿ ಅಪರೂಪದ ಮದುವೆ, ಬೆಳಗಾವಿ ಮದುವೆ ಸುದ್ದಿ, ಕಿವುಡ ಮತ್ತು ಮೂಗ ಜೋಡಿ ಮದುವೆ ಸುದ್ದಿ,
ಚಿಕ್ಕೋಡಿಯಲ್ಲೊಂದು ಅಪರೂಪದ ಮದುವೆ
author img

By

Published : Jul 25, 2022, 2:30 PM IST

ಬೆಳಗಾವಿ: ವಧುವಿಗೆ ಮಾತು ಬರಲ್ಲ, ವರನಿಗೆ ಕಿವಿ ಕೇಳಿಸಲ್ಲ. ಮೂಗ-ಕಿವುಡ ದಂಪತಿ ಮದುವೆಗೆ ಆಗಮಿಸಿದ ಸಹಸ್ರಾರು ಜನರು ನವಜೋಡಿಗೆ ಶುಭಹಾರೈಸಿದರು. ಜು. 21 ರಂದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದಲ್ಲಿ ಈ ಅಪರೂಪದ ವಿವಾಹ ನೆರವೇರಿದೆ.

ಹಾರೂಗೇರಿ ಗ್ರಾಮದ ನಿವಾಸಿ ಜ್ಯೋತೆಪ್ಪ ಮತ್ತು ಪಾರ್ವತಿ ದಂಪತಿಯ ನೆಚ್ಚಿನ ಮಗಳಾದ ವಧು ಸ್ವಾತಿ ಉಮರಾಣಿ ಮತ್ತು ಮುಗಳಖೋಡ ಗ್ರಾಮದ ನಿವಾಸಿ ಸಿದ್ದು‌ ಮುಧೋಳ ಎಂಬುವರ ಜೊತೆ ಮದುವೆ ಮಾಡಿಕೊಡಲಾಗಿದೆ. ಈ ಅಪರೂಪದ ಮದುವೆಗೆ ಸಾವಿರಾರು ಜನರು ಸಾಕ್ಷಿಯಾಗಿದ್ದಲ್ಲದೆ ನವಜೋಡಿಗೆ ಶುಭ ಹಾರೈಸಿದ್ದಾರೆ.

ಚಿಕ್ಕೋಡಿಯಲ್ಲೊಂದು ಅಪರೂಪದ ಮದುವೆ

ಸುಂದರವಾಗಿರುವ ಸ್ವಾತಿಗೆ ಹುಟ್ಟಿನಿಂದ ಮಾತು ಬರಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಎಲ್ಲರ ಹಾಗೇ ಅದ್ಧೂರಿಯಾಗಿ ಮಗಳ ಮದುವೆ ಮಾಡಬೇಕೆಂದು ತಂದೆ ಜ್ಯೋತೆಪ್ಪ, ತಾಯಿ ಪಾರ್ವತಿ ಅವರ ಕನಸು ಕಂಡು ಹಲವು ಕಡೆ ಸಂಬಂಧದ ಹುಡುಕಾಟದಲ್ಲಿ ತೊಡಗಿದ್ದರು. ಆದ್ರೆ ಮಾತು ಬರಲ್ಲ ಎಂಬ ಕಾರಣಕ್ಕೆ ಯಾರೂ ಮದುವೆಯಾಗಲು ಒಪ್ಪಿರಲಿಲ್ಲ.

ಮೂಗ ಯುವಕರು ಸಹ ತಾವು ಮೂಗ ಯುವತಿಯನ್ನೇ ಮದುವೆಯಾದ್ರೆ ಕಷ್ಟ ಆಗುತ್ತೆ ಅಂತಾ ಹಿಂದೇಟು ಹಾಕಿದ್ರಂತೆ. ಇದೇ ಕೊರಗಿನಲ್ಲಿದ್ದ ಇವರ ನೆರವಿಗೆ ಬಂದಿದ್ದು, ಮತ್ತೋರ್ವ ಮೂಗ ಯೋಗೇಶ್ ಉಮರಾಣಿ. ಹೌದು, ಈ ಯೋಗೇಶ್ ಉಮರಾಣಿ ಅವರು ತನ್ನ ಸ್ನೇಹಿತ ಮುಗಳಖೋಡ ಗ್ರಾಮದ ನಿವಾಸಿ ಸಿದ್ದುಗೆ ವಾಟ್ಸಪ್ ಮೂಲಕ ಫೋಟೋ ಮತ್ತು ಬಯೋಡೇಟಾ ಕಳಿಸಿದ್ದರು. ಬಳಿಕ ಇಬ್ಬರ ಕುಟುಂಬಗಳು ಪರಸ್ಪರ ಒಪ್ಪಿ ಹಾರೂಗೇರಿಯಲ್ಲಿ ಅದ್ಧೂರಿಯಾಗಿ ವಿವಾಹ ನೆರವೇರಿಸಿದರು.

ಓದಿ: ಭಾರತೀಯ ವರನ ಕೈ ಹಿಡಿದ ರಷ್ಯಾ ಬೆಡಗಿ.. ಅದ್ಧೂರಿ ಮದುವೆಯಲ್ಲಿ ನಾಲ್ಕು ದೇಶಗಳು ಭಾಗಿ!

ಇದೇ ವೇಳೆ ಮಾತನಾಡಿದ ವಧುವಿನ ತಂದೆ ಜ್ಯೋತೆಪ್ಪಗೌಡ, ಮಗಳ ಮದುವೆ ತಡವಾಗ್ತಿದೆ ಅಂತಾ ದುಃಖ ಆಗುತ್ತಿತ್ತು. ಮಗಳನ್ನು ಮದುವೆ ಮಾಡಿಕೊಡಬೇಕೆಂದು ತೋರಿಸಿದಾಗ ಯಾರೂ ಮುಂದೆ ಬಂದಿರಲಿಲ್ಲ. ಈಗ ಮದುವೆಯಾಗುತ್ತಿರುವುದು ಖುಷಿ ತಂದಿದೆ ಎಂದರು‌‌. ವಧುವಿನ ತಾಯಿ ಮಾತನಾಡಿ, ಮದುವೆ ಆಗಿದ್ದು ಬಹಳ ಸಂತೋಷ ತಂದಿದೆ. ಮಾತನಾಡಲು ಬರದವರು ಬಂದು ಸಹಾಯ ಮಾಡಿ ಮದುವೆ ಮಾಡಿಸಿದ್ದಾರೆ ಎಂದರು. ವಧುವಿನ ಸಹೋದರ ರಮೇಶ್ ಮಾತನಾಡಿ, ಮಾತನಾಡಲು ಬರದವನೇ ಈ ಸಂಬಂಧ ಕೂಡಿಸಿದ್ದಾರೆ. ಇಂತಹ ಮದುವೆ ನಾನು ಜೀವನದಲ್ಲಿಯೇ ನೋಡಿಲ್ಲ. ವರನ ಸ್ನೇಹಿತ ಮೂಗನಿದ್ದಾರೆ. ಅವರೇ ಈ ಸಂಬಂಧ ಕೂಡಿಸಿದ್ದು, ಇಬ್ಬರು ಚೆನ್ನಾಗಿರಲಿ ಅಂತಾ ಭಾವುಕರಾದರು.

ವರನ ತಂದೆ ಗಿರಿಮಲ್ಲಪ್ಪ ಮುಧೋಳ ಮಾತನಾಡಿ, ಉಮರಾಣಿ ಕುಟುಂಬದವರು ಬಡವರಿಗೆ ಕನ್ಯಾ ದಾನ ಮಾಡಿದ್ದಕ್ಕೆ ಹೆಮ್ಮೆ ಅನಿಸುತ್ತೆ. ಬಾಯಿ ಇದ್ದವಳ‌ನ್ನು ಮದುವೆ ಮಾಡಿದರೆ ಅನುಕೂಲ ಆಗುತ್ತೆ ಅಂತಾ ನೋಡಿದ್ವಿ. ಆದರೆ ಸಕ್ಸಸ್ ಆಗಲಿಲ್ಲ. ಆದರೆ ಈಗ ಮಾತನಾಡಲು ಬರದವರು ಸಹಾಯ ಮಾಡಿದ್ದಾರೆ ಎಂದರು.

ಈ ಅಪರೂಪದ ಮದುವೆ ಸಮಾರಂಭಕ್ಕೆ ಆಗಮಿಸಿದ್ದ ಶಾಸಕ ಪಿ.ರಾಜೀವ್ ನವಜೋಡಿಗೆ ಶುಭ ಕೋರಿದರು. ಇದೇ ವೇಳೆ ಮಾತನಾಡುತ್ತ, ಹೃದಯದ ಅಂತರಾಳದಿಂದ ಭಾಗವಹಿಸಿದ ಮದುವೆ ಇದು. ಮಾತುಗಳು ಒಂದು ಹಂತಕ್ಕೆ ನಿಶಬ್ಧ ಆಗುತ್ತೆ. ಬದುಕಿನ ಗುರಿ ಮೌನದ ಕಡೆ ಸಾಗುವಂತದ್ದು. ಹಾಗಾಗಿ ಮಾತಿಗಿಂತ ಮೌನಕ್ಕೆ ಬಹಳ ದೊಡ್ಡ ಶಕ್ತಿ, ಅರ್ಥ ಇದೆ. ಮೌನ ಎಲ್ಲವನ್ನೂ ಹೇಳುತ್ತೆ. ನಿಸರ್ಗ ಇವರಿಬ್ಬರನ್ನೂ ಆ ಹಂತದಲ್ಲಿಟ್ಟಿದೆ ಅಂತಾ ನಾನು ನೋಡ್ತೇನೆ. ಹೃದಯಗಳು ಮಾತನಾಡಲು ಪ್ರಾರಂಭವಾದಾಗ ಆಗ ಮನುಷ್ಯನಿಗೆ ಬಾಯಿಯ ಅವಶ್ಯಕತೆ ಬಹಳ ಕಡಿಮೆ ಆಗುತ್ತೆ. ನಾವು ಎಲ್ಲಾ ಕುಟುಂಬಗಳಲ್ಲಿ ಬಾಯಿಯ ಮಾತು ಕೇಳಬಹುದು. ಹೃದಯದ ಮಾತು ಕೇಳಬೇಕೆನಿಸಿದ್ರೆ ಇವರ ಜೊತೆ ಭಾಗಿಯಾಬೇಕು. ಇವರ ಬದುಕು ಮಾದರಿಯಾಗಲಿ. ನಮಗೆಲ್ಲ ಆದರ್ಶವಾಗಿರಲಿ. ನೂರು ಕಾಲ ಸುಖ ಜೀವನ ಇವರಿಗೆ ಸಿಗಲಿ ಎಂದು ಶುಭಹಾರೈಸಿದರು.

ತಮ್ಮ ಮಕ್ಕಳು ಮೂಗ, ಕಿವುಡರಿದ್ದಾರೆ ಅಂತಾ ಕಣ್ಣೀರಿಡುತ್ತಿದ್ದ ತಂದೆ ತಾಯಂದಿರಿಗೆ ಆಪತ್ಬಾಂಧವನಾಗಿ ಬಂದು ಮದುವೆ ಮಾಡಿಸಿದ ಮತ್ತೋರ್ವ ಮೂಗ ಯೋಗೇಶ್ ಉಮರಾಣಿಗೆ ಎರಡು ಕುಟುಂಬದವರು ಧನ್ಯವಾದ ತಿಳಿಸಿದ್ದಾರೆ.

ಓದಿ: ಮಳೆ ಬರಲೆಂದು ಪ್ರಾರ್ಥಿಸಿ ಮೈಯೆಲ್ಲಾ ಮಣ್ಣು ಮೆತ್ತಿಕೊಂಡ ಮಕ್ಕಳು! ವೈರಲ್ ಆಗ್ತಿದೆ ಈ ಚಿತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.