ಬೆಳಗಾವಿ: ವೈದ್ಯರು ಹಾಕುವ ಏಪ್ರಾನ್ ಧರಿಸಿ ಬಂದು ನಾನು ಡಾಕ್ಟರ್ ಇದೀನಿ, ನನಗೆ ರೂಲ್ಸ್ ಹೇಳ್ತಿಯಾ ಎಂದ ಫಾರ್ಮಸಿಸ್ಟ್ನನ್ನು ಡಿಸಿಪಿ ವಿಕ್ರಮ್ ಆಮಟೆ ತರಾಟೆಗೆ ತೆಗೆದುಕೊಂಡರು.
ಎರಡನೇ ದಿನದ ಲಾಕ್ಡೌನ್ ಪರಿಶೀಲನೆಗಾಗಿ ಖುದ್ದು ಫೀಲ್ಡ್‌ಗಿಳಿದ ಡಿಸಿಪಿ, ನಗರದ ಅಶೋಕ ವೃತ್ತದಲ್ಲಿ ಪ್ರತಿಯೊಂದು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಜೊತೆಗೆ ಅನಗತ್ಯವಾಗಿ ರಸ್ತೆಗಿಳಿದ ಬೈಕ್‌ಗಳು, ಕಾರುಗಳನ್ನು ಜಪ್ತಿ ಮಾಡುತ್ತಿದ್ದಾರೆ.
ತಪಾಸಣೆ ವೇಳೆ ವ್ಯಕ್ತಿಯೋರ್ವ ನಾನು ಡಾಕ್ಟರ್ ಇದೀನಿ, ನನಗೆ ರೂಲ್ಸ್ ಹೇಳ್ತಿಯಾ ಎಂದು ಡಿಸಿಪಿಯವರಿಗೆ ಹೇಳಿದ್ದಾನೆ. ಜೊತೆಗೆ ಔಷಧ ಅಂಗಡಿ ಲೈಸೆನ್ಸ್ ತೋರಿಸಿದ್ದಾನೆ. ಆಗ ಆತನನ್ನು ತರಾಟೆಗೆ ತೆಗೆದುಕೊಂಡ ವಿಕ್ರಮ್ ಆಮಟೆ, ವೈದ್ಯರು ಹಾಕುವ ಏಪ್ರಾನ್ ಹಾಕೋಬೇಡ. ಏಪ್ರಾನ್ ಬಿಚ್ಚಿ ಬೈಕ್ ತೆಗೆದುಕೊಂಡು ಹೋಗು ಎಂದರು. ಬಳಿಕ ಏಪ್ರಾನ್ ಬಿಚ್ಚಿ ಬ್ಯಾಗ್‌ನಲ್ಲಿಟ್ಟುಕೊಂಡು ಫಾರ್ಮಸಿಸ್ಟ್ ಮನೆಗೆ ತೆರಳಿದ್ದಾನೆ.
ಓದಿ: ಲಾಕ್ಡೌನ್ ಸಮಯದಲ್ಲಿ ತಿರುಗಾಡಲು ನಕಲಿ ಐಡಿ ಕಾರ್ಡ್ ಮಾಡಿಕೊಡುತ್ತಿದ್ದವರ ಬಂಧನ