ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಒಂದನೇ ಜೆಎಂಎಫ್‌ಸಿ ನ್ಯಾಯಾಲಯದಿಂದ ಸಿಆರ್‌ಪಿಎಫ್ ಯೋಧ ಸಚಿನ್ ಸಾವಂತ್‌ಗೆ ಜಾಮೀನು ಮಂಜೂರು ಆಗಿದೆ ಎಂದು ವಕೀಲ ಬಿ.ಡಿ. ಪಾಟೀಲ್ ಹೇಳಿದರು.
ಚಿಕ್ಕೋಡಿ ಪಟ್ಟಣದ ಕೋರ್ಟ್ ಆವರಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯೋಧ ಸಚಿನ್ ಸಾವಂತ್‌ಗೆ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ. ಇನ್ನು ಅರ್ಧ ಗಂಟೆಯಲ್ಲಿ ಇಂಟಿಮೇಷನ್ ಸಿಗುತ್ತದೆ. ಅದನ್ನು ತೆಗೆದುಕೊಂಡು ಬೆಳಗಾವಿ ಇಂಡಲಗಾ ಜೈಲಿಗೆ ಹೋಗಿ ಸಲ್ಲಿಸಿದ ತಕ್ಷಣ ಯೋಧ ಸಚಿನ್ ಅವರನ್ನು ಬಿಡುಗಡೆ ಮಾಡುತ್ತಾರೆ. ಇನ್ನೇನು 2-3 ಗಂಟೆಯಲ್ಲಿ ರಿಲೀಸ್ ಆಗುತ್ತಾರೆ ಎಂದು ಹೇಳಿದರು.
ಏನಿದು ಪ್ರಕರಣ?
ಏ.23 ರಂದು ಯಕ್ಸಂಬಾ ಪಟ್ಟಣದಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಸಿಆರ್‌ಪಿಎಫ್ ಯೋಧ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಯೋಧ ಸಚಿನ್ ಸಾವಂತ್ ಅವರನ್ನು ಬಂಧಿಸಲಾಗಿತ್ತು.