ಚಿಕ್ಕೋಡಿ (ಬೆಳಗಾವಿ): ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ವಿಧೇಯಕವನ್ನು ಮಂಡಿಸಿದ ಹಿನ್ನೆಲೆ, ಶ್ರೀರಾಮ ಸೇನೆ ವತಿಯಿಂದ ಹುಕ್ಕೇರಿ ಪಟ್ಟಣದಲ್ಲಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.
ಹುಕ್ಕೇರಿ ಪಟ್ಟಣದ ಸಾಯಿ ಮಂದಿರದ ಎದುರು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗೋಪೂಜೆ ಮಾಡಿದರು.
ಬಳಿಕ ಮಾತನಾಡಿದ ಅವರು, ಭಾರತ ದೇಶದಲ್ಲಿ ಗೋವನ್ನು ತಾಯಿಯ ಸಮಾನವಾಗಿ ನೋಡುತ್ತೇವೆ. ಹಿಂದೂ ಸಮಾಜದವರು ಗೋವನ್ನು ದೇವರೆಂದು ಪೂಜಿಸುತ್ತಾರೆ. ಗೋಹತ್ಯೆ ನಿಷೇಧವಾಗಬೇಕೆಂಬುದು ದೇಶದ ಕೋಟ್ಯಂತರ ಜನರ ಆಶಯವಾಗಿತ್ತು. ಈಗ ಅವರ ಆಸೆ ಈಡೇರಿದೆ. ಇದಕ್ಕಾಗಿ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಓದಿ: ರೈತ ನಾಯಕರು ಎನಿಸಿಕೊಂಡ ಕೆಲವರ ಹಿಂದೆ ಕಾಂಗ್ರೆಸ್ ಅಡಗಿ ಕುಳಿತಿದೆ: ಹೆಚ್‌ಡಿಕೆ
ಕಳೆದ 70 ವರ್ಷಗಳಿಂದ ಮುಸ್ಲಿಮರ ಓಟಿಗಾಗಿ ಕಾಂಗ್ರೆಸ್ ಸರ್ಕಾರ ಗೋಹತ್ಯೆ ನಿಷೇಧ ಮಾಡಲು ಮುಂದಾಗಲಿಲ್ಲ ಎಂದು ಮುತಾಲಿಕ್ ದೂರಿದರು.