ಬೆಳಗಾವಿ\ ಬಳ್ಳಾರಿ: ರಾಜ್ಯಾದ್ಯಂತ ಇಂದು ನಡೆದ ಕ್ರಿಸ್ ಮಸ್ ಹಬ್ಬದಲ್ಲಿ ಕ್ರೈಸ್ತ ಬಾಂಧವರು ಚರ್ಚ್ಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಪರಸ್ಪರ ಶುಭಾಶಯ ಕೋರಿ ಸಂಭ್ರಮಿಸಿದ್ದಾರೆ.
ಚಿಕ್ಕೋಡಿಯ ಮೆಥೋಡಿಸ್ಟ್ ಚರ್ಚ್ನಲ್ಲಿ ಕ್ರಿಸ್ ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ನಿಮಿತ್ತ ಚರ್ಚ್ ಅಲಂಕರಿಸಿ ಕ್ರೈಸ್ತ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದರು. ಅದೇ ರೀತಿ ಅಥಣಿ ನಗರದಲ್ಲಿಯು ಸಹ ಇನಪೆಂಟ್ ಜೀಸಸ್ ಚರ್ಚ್ ನಲ್ಲಿ ಸಂಭ್ರಮದಿಂದ ಕ್ರಿಸ್ ಮಸ್ ಆಚರಿಸಲಾಯಿತು. ಇದೆ ಸಂದರ್ಭದಲ್ಲಿ ಯೇಸುವಿನ ಆರಾಧನೆ ಪ್ರಾರ್ಥನೆ ಗೀತೆಗಳನ್ನು ಹಾಡಿದರು.
ಹೊಸಪೇಟೆ ನಗರದಲ್ಲಿ ಇಂದು ಇಸಿಐ ಚರ್ಚ್ನಲ್ಲಿ ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಣೆಯನ್ನು ಮಾಡಲಾಯಿತು. ಯೇಸು ಕ್ರಿಸ್ತನು ಸುಖ ಶಾಂತಿ ನೆಮ್ಮದಿಯಿಂದ ಇರುವಂತೆ ಮಾಡುತ್ತಾನೆ. ಯೇಸು ಒಂದೇ ಧರ್ಮದವರಿಗೆ ಸೀಮಿತವಾಗಿಲ್ಲ. ಯೇಸು ಸ್ವಾಮಿಯ ಮೇಲೆ ನಂಬಿಕೆಯಿಂದ ಪ್ರಾರ್ಥನೆ ಮಾಡಿದರೆ ಭಕ್ತರ ನೋವು ದೂರವಾಗುತ್ತದೆ ಎಂದು ಫಾದರ್ ರವಿಕುಮಾರ ಅಂದ್ಲಿ ತಿಳಿಸಿದರು.