ETV Bharat / city

ಬೆಳಗಾವಿಯಲ್ಲಿ ಮಕ್ಕಳ ಮುದ್ದಿನ ಬೆಕ್ಕು ರಕ್ಷಿಸಿದ ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ - ಬೆಕ್ಕನ್ನು ರಕ್ಷಿಸಿದ ಪೊಲೀಸ್​ ಹಾಗೂ ಅಗ್ನಿಶಾಮಕದಳ ಸಿಬ್ಬಂದಿ

ಮನೆಯ ಬಾಲ್ಕನಿಯಲ್ಲಿ ಸಿಲುಕಿದ್ದ ಬೆಕ್ಕನ್ನು ರಕ್ಷಿಸಲು ಮನೆಯವರು ಹರಸಾಹಸ ಪಟ್ಟಿದ್ದಾರೆ. ಇದು ಫಲಿಸದೇ ಇದ್ದುದಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸ್​ ಸಿಬ್ಬಂದಿ ದೂರು ನೀಡಲಾಗಿತ್ತು.

The cat and firmen belagavi
ಬೆಕ್ಕು ಹಾಗೂ ಬೆಕ್ಕನ್ನು ರಕ್ಷಿಸಿದಿ ಅಗ್ನಿಶಾಮಕ ಸಿಬ್ಬಂದಿ
author img

By

Published : Jul 24, 2022, 1:19 PM IST

ಬೆಳಗಾವಿ: ಇಲ್ಲಿನ ಖಡೇಬಜಾರ್‌ ರಸ್ತೆಯಲ್ಲಿರುವ ಕಟ್ಟಡದ ಬಾಲ್ಕನಿಯಲ್ಲಿ ಸಿಲುಕಿ ನೇತಾಡುತ್ತಿದ್ದ ಮನೆಯ ಮಕ್ಕಳ ಮುದ್ದಿನ ಬೆಕ್ಕನ್ನು ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಎರಡು ಘಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ನಡೆಯಿತು. ಕಟ್ಟಡದ ಮೂರಂತಸ್ತಿನ ತುದಿಗೆ ಇಳಿದಿದ್ದ ಬೆಕ್ಕು ಮರಳಿ ಬಾಲ್ಕನಿ ಕಿಟಕಿಗೆ ನೆಗೆಯಲಾಗದೆ ಪ್ರಾಣಭಯದಲ್ಲಿ ಒದ್ದಾಡುತ್ತಿತ್ತು. ಇದನ್ನು ಕಂಡು, ಬೆಕ್ಕನ್ನು ರಕ್ಷಿಸುವಂತೆ ಪಾಲಕರ ಬಳಿ ಮಕ್ಕಳು ಹಠ ಹಿಡಿದಿದ್ದರು.

ಆಪರೇಷನ್‌ ಕ್ಯಾಟ್!

ಈ ವೇಳೆ ಪೋಷಕರು ಬೆಕ್ಕನ್ನು ರಕ್ಷಣೆ ಮಾಡಲು ಹರಸಾಹಸಪಟ್ಟಿದ್ದಾರೆ. ಆದರೆ, ಅದು ಸಾಧ್ಯವಾಗದೇ ಇದ್ದಾಗ ಅನಿಮಲ್ ವೆಲ್ಫೇರ್​ ಅಸೋಸಿಯೇಷನ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಈ ತಂಡದವರ ಪ್ರಯತ್ನವೂ ‌ಫಲ ನೀಡಲಿಲ್ಲ. ಆ ಬಳಿಕ ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ವಾಹನ, ಏಣಿಯ ಸಹಾಯದಿಂದ ಬಾಲ್ಕನಿ ಏರಿ ಬೆಕ್ಕನ್ನು ರಕ್ಷಣೆ ಮಾಡಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಯ ದೃಶ್ಯವನ್ನು ನೋಡಿ ಸುತ್ತ ನೆರೆದಿದ್ದ ಜ‌ನರು ಚಪ್ಪಾಳೆ ತಟ್ಟಿ ಖುಷಿಪಟ್ಟರು.

ಇದನ್ನೂ ಓದಿ: ಅಪಾಯದಲ್ಲಿದ್ದ ತಾಯಿ - ಮಗು ಆನೆಯನ್ನು ರಕ್ಷಿಸಿದ ಸಿಬ್ಬಂದಿ: ರಣರೋಚಕ ಕಾರ್ಯಾಚರಣೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.