ETV Bharat / city

ರಾಮನಗರದಲ್ಲಿ ಬಾಂಬ್​ ವದಂತಿ​... ಪೊಲೀಸರು ಪರಿಶೀಲಿಸಿದಾಗ ಸಿಕ್ಕಿದ್ದೇನು?

ನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ರಾಮಘಡ್ ಹೋಟೆಲ್ ಸಮೀಪ ಎರಡು ಬಾಂಬ್ ಬಿಸಾಡಲಾಗಿದೆ ಎಂಬ ಹಿನ್ನೆಲೆಯಲ್ಲಿ ಶ್ವಾನದಳ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಆದರೆ ಎರಡು ಆಟಂ ಬಾಂಬ್ ಪಟಾಕಿಗಳು ಸಿಕ್ಕಿದ್ದು ಜನರು ನಿರಾಳರಾಗಿದ್ದಾರೆ.

ಬಾಂಬ್​ ಗಾಸಿಪ್
author img

By

Published : Sep 16, 2019, 11:41 PM IST

ರಾಮನಗರ: ಸೋಮವಾರ ಬೆಳಗ್ಗೆ ನಗರದ ಜನತೆ ಬೆಚ್ಚಿಬೆಚ್ಚಿದ್ದಿದ್ದರು. ಬಾಂಬ್ ವದಂತಿ ಮತ್ತು ಹುಸಿ ಕರೆಯಿಂದಾಗಿ ಸಾರ್ವಜನಿಕರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.

ರೇಷ್ಮೆನಗರಿಯಲ್ಲಿ ಬಾಂಬ್​ ಗಾಸಿಪ್

ನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಖಾಸಗಿ ಹೋಟೆಲ್‌ ಬಳಿ ಬೆಳಗ್ಗೆ ಕೆಲ ಅನುಮಾನಾಸ್ಪದವಾಗಿ ಬಿದ್ದಿದ್ದ ವಸ್ತುವನ್ನು ಕಂಡು ಭಯಭೀತರಾಗಿದ್ದ ಹೊಟೇಲ್ ಸಿಬ್ಬಂದಿ ಪೊಲೀಸರಿಗೆ ಕೂಡಲೇ ಮಾಹಿತಿ ನೀಡಿದ್ದರು. ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯದಳದ ಸಮೇತ ಸ್ಥಳಕ್ಕೆ ದೌಡಾಯಿಸಿದ ಐಜೂರು ಪೊಲೀಸರು ಅದು ದೊಡ್ಡ ಗಾತ್ರದ ಪಟಾಕಿ ಎಂದು ಖಾತ್ರಿಪಡಿಸಿದ ಮೇಲೆ ನಗರದ ಜನರ ಭೀತಿ ದೂರವಾಗಿದೆ.

ಬೆಂಗಳೂರು ಸೇರಿದಂತೆ ದೇಶದ 11 ಪ್ರಮುಖ ರೈಲು ನಿಲ್ದಾಣ ಮತ್ತು ದೇಗುಲಗಳ ಮೇಲೆ ಬಾಂಬ್ ದಾಳಿ ನಡೆಸುತ್ತೇವೆ ಎಂದು ಜೈಷ್​-ಎ- ಮೊಹಮ್ಮದ್ ಉಗ್ರ ಸಂಘಟನೆ ಬೆದರಿಕೆ ಹಾಕಿರುವುದರಿಂದ ರಾಜ್ಯದಲ್ಲಿ ಆತಂಕದ ಛಾಯೆ ಇದೆ. ಈ ಹಿನ್ನೆಲೆಯಲ್ಲಿ ರಾಮನಗರದ ಜನರಲ್ಲಿ ಹೆಚ್ಚಿನ ಭೀತಿ ಮೂಡಿದೆ.

ಪ್ರಕರಣ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿ ಡಾ. ಅನೂಪ್​ ಎ ಶೆಟ್ಟಿ, ಅಲ್ಲಿ ಪತ್ತೆಯಾಗಿದ್ದು ಬಾಂಬ್ ಅಲ್ಲ. ಅದು ಪಟಾಕಿ ಎಂದು ಸ್ಪಷ್ಟಪಡಿಸಿದ್ದಾರೆ. ದುಷ್ಕರ್ಮಿಗಳು ಯಾಕೆ ಈ ರೀತಿ ಮಾಡಿದ್ದಾರೆ ಎಂಬುದರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆ ರಾಮನಗರದ ಟಿಪ್ಪು ನಗರದಲ್ಲಿ ಈ ಹಿಂದೆ ಉಗ್ರ ಸೆರೆಯಾದ ದಿನದಿಂದಲೂ ಅಲ್ಲಿನ ಜನರ ಮನಸ್ಸಲ್ಲಿ ಒಂದು ರೀತಿಯ ಆತಂಕವಿದೆ. ಜನರಲ್ಲಿ ಭಯ ಹುಟ್ಟಿಸಲು ಕಿಡಿಗೇಡಿಗಳು ಆಟಂ ಬಾಂಬ್ ಮಾದರಿಯ ದೊಡ್ಡ ಗಾತ್ರದ ಪಟಾಕಿ ಎಸೆದು ಆತಂಕ ಸೃಷ್ಟಿಸಿದ್ದಾರೆ. ಈಗ ಅದು ಬಾಂಬ್​ ಅಲ್ಲ, ಪಟಾಕಿ ಎಂದು ಗೊತ್ತಾದ ಮೇಲೆ ನಿಟ್ಟುಸಿರು ಬಿಟ್ಟಿದ್ದಾರೆ.

Intro:ಜನಪ್ರತಿನಿಧಿಗಳ ಹೆಸರಿನಲ್ಲಿ ಚಪ್ಪಲಿ ಹರಾಜು ಹಾಕಿ : ಪ್ರವಾಹ ಸಂತ್ರಸ್ತರಿಗೆ ಹಣ ಸಂಗ್ರಹಿಸಿದ ರೈತರು

ಬೆಳಗಾವಿ:‌ ಪ್ರಚಂಡ ‌ಪ್ರವಾಹಕ್ಕೆ ಉತ್ತರ ‌ಕರ್ನಾಟಕ‌ ತತ್ತರಿಸಿದರೂ ನೈಯಾಪೈಸೆ ಬಿಡುಗಡೆ ಮಾಡದ ಕೇಂದ್ರ ಸರ್ಕಾರದ ವಿರುದ್ಧ ರೈತರ ಆಕ್ರೋಶ ತಾರಕಕ್ಕೇರಿದೆ.
ಬೆಳಗಾವಿ ಡಿಸಿ‌ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ರೈತರು ತಾವು ಹಾಕಿಕೊಂಡ ಚಪ್ಪಳಿಯನ್ನೇ ಜನಪ್ರತಿನಿಧಿಗಳ ಹೆಸರೇಳಿ ಹರಾಜು ಹಾಕಿ ವಿನೂತನವಾಗಿ ಆಕ್ರೋಶ ‌ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ರೈತನ‌ ಬೂಟು 1 ರೂಪಾಯಿ ಐದು ಪೈಸೆಗೆ ಹರಾಜಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮೋದಿ ‌ಹೆಸರಿನಲ್ಲಿ‌ ನಡೆದ ಬೂಟಿನ ಸವಾಲು ಪಡೆದರು.

Body:ಇನ್ನುಳಿದಂತೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸುರೇಶ ಅಂಗಡಿ, ಮಾಜಿ ಸಚಿವ ಅನಂತಕುಮಾರ ಹೆಗಡೆ, ಸಂಸದೆ ಶೋಭಾ ಕರಂದ್ಲಾಜೆಗೆ. ರೈತರು ಹಾಕಿಕೊಂಡು ಬಂದ ಚಪ್ಪಲಿಗಳಿಗೆ ಹೆಸರಿಟ್ಟು ಹರಾಜುಹಾಕಲಾಯಿತು.
ಮಾಜಿ ಸಿಎಂ ಎಚ್ಡಿಕೆ, ಮಾಜಿ ಸಚಿವ ರೇವಣ್ಣ ಹಾಗೂ ಅನರ್ಹ ಶಾಸಕರಿಗೂ ಚೆಪ್ಪಳಿ ಹೆಸರಲ್ಲಿ ಕೂಡ ಚೆಪ್ಪಳಿ ಹರಾಜು ನಡೆಯಿತು.
ಒಂದು ಪೈಸೆಯಿಂದ ಮೂರು ರೂಪಾಯಿ ವರೆಗೂ ಸವಾಲ್ ನಡೆಯಿತು. ರೈತ ಮಹಿಳೆ ಜಯಶ್ರೀ ಕೈಯಲ್ಲಿ ಚೆಪ್ಪಳಿ ಹಿಡಿದು ಜನಪ್ರತಿನಿಧಿಗಳ ಹೆಸರು‌ಕೂಗಿ ಸವಾಲು ಹಾಕಿದರು.

Conclusion:ಕೊನೆಯಲ್ಲಿ ಹರಾಜು ಮಾಡಲಾದ ಎಲ್ಲಾ ಸಂಸದರ ಹೆಸರಿನ ಚಪ್ಪಲಿಯಿಂದ 69 ರೂ. ಕೂಡಿಸಿ. ರಾಜ್ಯದ ಪ್ರವಾಹ ಪೀಡಿತ ಪ್ರದೇಶದ ನಿರಾಶ್ರಿತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ. ಕೇಂದ್ರ ಸರ್ಕಾರಕ್ಕೆ ಈ ಹಣ ಕಳುಹಿಸಲಾಗುತ್ತದೆ ಎಂದು ರೈತರು ವಿನೂತನ ಪ್ರತಿಭಟನೆ ಮಾಡಿದರು.

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.