ETV Bharat / city

ರಂಗೋಲಿಯಲ್ಲಿ ಅರಳಿದ ಸಿಂಧುತಾಯಿ ಸಪ್ಕಾಲ್: ವಿಶೇಷವಾಗಿ ಶ್ರದ್ಧಾಂಜಲಿ ಅರ್ಪಿಸಿದ ಬೆಳಗಾವಿ ಕಲಾವಿದ

author img

By

Published : Jan 6, 2022, 12:58 PM IST

ಅನಾಥ ಮಕ್ಕಳ ಪಾಲಿನ ಮಹಾತಾಯಿ, ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ಅವರ ಭಾವಚಿತ್ರವನ್ನ ರಂಗೋಲಿಯಲ್ಲಿ ಬಿಡಿಸುವ ಮೂಲಕ ಬೆಳಗಾವಿಯ ಕಲಾವಿದರೊಬ್ಬರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ರಂಗೋಲಿಯಲ್ಲಿ ಅರಳಿದ ಸಿಂಧುತಾಯಿ ಸಪ್ಕಾಲ್
ರಂಗೋಲಿಯಲ್ಲಿ ಅರಳಿದ ಸಿಂಧುತಾಯಿ ಸಪ್ಕಾಲ್

ಬೆಳಗಾವಿ: ಮಹಾರಾಷ್ಟ್ರದ ಸಾವಿರಾರು ಅನಾಥ ಮಕ್ಕಳ ಪಾಲಿನ ಮಹಾತಾಯಿ, ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ಅವರ ಭಾವಚಿತ್ರವನ್ನ ರಂಗೋಲಿಯಲ್ಲಿ ಬಿಡಿಸುವ ಮೂಲಕ ಬೆಳಗಾವಿಯ ಕಲಾವಿದರೊಬ್ಬರು ವಿಶೇಷ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ.

ನಗರದ ವಡಗಾಂವ್​ ನಿವಾಸಿ ಹಾಗೂ ರಂಗೋಲಿ ಕಲಾವಿದ ಅಜಿತ್ ಔರ್ವಾಡಕರ್ ಎಂಬುವರು ಸಮಾಜ ಸೇವಕಿ, ಅನಾಥ ಮಕ್ಕಳ ತಾಯಿ, ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ಅವರ ಚಿತ್ರಬಿಡಿಸಿದ್ದಾರೆ. ಈ ಭಾವಚಿತ್ರ ಬಿಡಿಸಲು ಅಜಿತ್, ಸುಮಾರು 7 ಗಂಟೆಗಳ ಸಮಯ ತೆಗೆದುಕೊಂಡಿದ್ದಾರೆ.

ರಂಗೋಲಿಯಲ್ಲಿ ಅರಳಿದ ಸಿಂಧುತಾಯಿ ಸಪ್ಕಾಲ್

ಓದಿ: ಶಬರಿಮಲೆ ದೇಗುಲ ಪ್ರವೇಶಿಸಿದ ಕಾರ್ಯಕರ್ತೆ ಮೇಲೆ ಮತ್ತೆ ದಾಳಿ, ಹಲ್ಲೆ

ಮಹಾರಾಷ್ಟ್ರ ಮೂಲದ ಸಿಂಧುತಾಯಿ ಸಪ್ಕಾಲ್ ಅವರು ವಯೋಸಹಜ ಕಾಯಿಲೆಯಿಂದ ಪುಣೆಯ ಗ್ಯಾಲಾಕ್ಸಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದರು‌. ತಂದೆ-ತಾಯಿ ಇಲ್ಲದ ಮಕ್ಕಳಿಗೆ ನೆರಳಾಗಿ, ಇಡೀ ಜಗತ್ತೇ ಮೆಚ್ಚುವಂತ ಅದ್ಭುತ ಸಾಧನೆ ಮಾಡಿದ್ದಾರೆ. ಇವರ ಸಾಧನೆ ಗುರುತಿಸಿ ಗೌರವ ಡಾಕ್ಟರೇಟ್, ಪದ್ಮಶ್ರೀ ಸೇರಿದಂತೆ ಒಟ್ಟು 700ಕ್ಕೂ ಅಧಿಕ ಪ್ರಶಸ್ತಿಗಳನ್ನು ನೀಡಲಾಗಿದೆ.

ಸಿಂಧುತಾಯಿ ಸಪ್ಕಾಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.