ETV Bharat / city

ಲಾಕ್ ಡೌನ್ ಸಮಯದಲ್ಲಿ ಬಿಳಿ ಜೋಳಕ್ಕೆ ಬಂಗಾರದ ಬೆಲೆ, ರೈತರು ಫುಲ್ ಖುಷ್..!

ಲಾಕ್ ಡೌನ್ ನಿಂದ ರೈತರ ಬೆಳೆಗಳಿಗೆ ಸರಿಯಾದ ಬೆಲೆ ಹಾಗೂ ಮಾರುಕಟ್ಟೆಗಳಿಲ್ಲದೇ ಕಂಗಾಲಾಗಿದ್ದಾರೆ. ಆದರೆ, ಜಿಲ್ಲೆಯಲ್ಲಿ ಜೋಳದಬೆಳೆ ರಾಶಿ ಮಾಡಿದ ರೈತರಿಗೆ ಬಂಗಾರದ ಬೆಲೆ ಬಂದಿದ್ದು ಸ್ವಲ್ಪಮಟ್ಟಿಗೆ ಸುಧಾರಿಸಿಕೊಳ್ಳುತ್ತಿದ್ದಾರೆ.

Belgaum: Gold price for white corn even at lockdown
ಬೆಳಗಾವಿ: ಲಾಕ್ ಡೌನ್ ಸಮಯದಲ್ಲೂ ಬಿಳಿ ಜೋಳಕ್ಕೆ ಬಂಗಾರದ ಬೆಲೆ, ರೈತರು ಫುಲ್ ಖುಷ್..!
author img

By

Published : Apr 25, 2020, 5:17 PM IST

ಬೆಳಗಾವಿ: ಲಾಕ್ ಡೌನ್ ನಿಂದ ರೈತರ ಬೆಳೆಗಳಿಗೆ ಸರಿಯಾದ ಬೆಲೆ ಹಾಗೂ ಮಾರುಕಟ್ಟೆಗಳಿಲ್ಲದೇ ಕಂಗಾಲಾಗಿದ್ದಾರೆ. ಆದರೆ ಜಿಲ್ಲೆಯಲ್ಲಿ ಜೋಳದಬೆಳೆ ರಾಶಿ ಮಾಡಿದ ರೈತರಿಗೆ ಬಂಗಾರದ ಬೆಲೆ ಬಂದಿದ್ದು ಸ್ವಲ್ಪಮಟ್ಟಿಗೆ ಸುಧಾರಿಸಿಕೊಳ್ಳುತ್ತಿದ್ದಾರೆ.

ಕಳೆದ ಮೂರ್ನಾಲ್ಕು ತಿಂಗಳುಗಳ ಹಿಂದೆ ಕ್ವಿಂಟಲ್ ಜೋಳಕ್ಕೆ 2,500 ರಿಂದ 3,000 ರೂ ಇತ್ತು. ಆದರೆ ಈಗ ಬೆಲೆಯಲ್ಲಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್ ಬಿಳಿ ಜೋಳಕ್ಕೆ 4,500 ರಿಂದ 5,000 ರೂ ದರದಲ್ಲಿ ಮಾರಾಟವಾಗುತ್ತಿವೆ. ಮಾರುಕಟ್ಟೆಯಲ್ಲಿ ಜೋಳದ ದರ ಗಗನಕ್ಕೆರಿರುವುದರಿಂದ ಬಡ ಹಾಗೂ ಮದ್ಯಮ ವರ್ಗದವರಿಗೆ ತೊಂದರೆ ಉಂಟಾಗಿದೆ.

ಕಳೆದ ವರ್ಷ ಅಲ್ಪಸ್ವಲ್ಪ ಮಳೆಯಲ್ಲಿ ಬೆಳೆದ ಜೋಳವನ್ನು ರೈತರು ತಮ್ಮ ತಮ್ಮ ಮನೆಗಳಲ್ಲಿ ಕೂಡಿಟ್ಟಿದ್ದರು. ಆದರೆ, ಆಗಷ್ಟ್ ತಿಂಗಳಲ್ಲಿ ಭಾರಿ ಪ್ರಮಾಣದ ಮಳೆ ಸುರಿದಿದ್ದರಿಂದ ಪ್ರವಾಹ ಬಂದು ಗ್ರಾಮಗಳಿಗೆ ನೀರು ನುಗ್ಗಿ ಜೋಳ ಸೇರಿದಂತೆ ಅಪಾರ ಪ್ರಮಾಣದ ದವಸ ಧಾನ್ಯಗಳು ನಾಶವಾಗಿದ್ದವು.

ಈ ಎಲ್ಲ ತೊಂದರೆಗಳಿಂದ ಜೋಳದ ಬೇಡಿಕೆ ಹೆಚ್ಚಾಗಿದ್ದರಿಂದ ಈಗ ಜೋಳಕ್ಕೆ ಬಂಗಾರದ ಬೆಲೆ ಬಂದಿದೆ. ಲಾಕ್ ಡೌನ್ ಸಮಯದಲ್ಲೂ ಜೋಳ ಬೆಳೆದ ರೈತ ಈಗ ಪುಲ್ ಖುಷಿಯಾಗಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.