ಬೆಳಗಾವಿ: ಬ್ರೇಕ್ ಫೇಲ್ ಆಗಿ ಸರ್ಕಾರಿ ಬಸ್ ಹರಿದು ಇಬ್ಬರು ಭಕ್ತರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಸವದತ್ತಿಯ ಯಲ್ಲಮ್ಮ ಗುಡ್ಡದ ಜೋಗುಳಬಾವಿ ರಸ್ತೆಯಲ್ಲಿ ನಡೆದಿದೆ.
ನಗರದ ಶಹಾಪುರ ನಿವಾಸಿ ನಿಕಿತಾ ರಮೇಶ್ ಹದಗಲ್(25), ಚಿಂಚಕಂಡಿ ನಿವಾಸಿ ಬಸಪ್ಪ ವೆಂಕಪ್ಪ ಹಳೇಮನಿ(34) ಮೃತ ದುರ್ದೈವಿಗಳು. ಸವದತ್ತಿ ಯಲ್ಲಮ್ಮ ದೇವಿಯ ಜಾತ್ರೆ ಮುಗಿಸಿ ಊರಿಗೆ ತೆರಳುವಾಗ ಈ ಘಟನೆ ನಡೆದಿದೆ.
ಯಲ್ಲಮ್ಮ ದೇವಸ್ಥಾನದಿಂದ ಧಾರವಾಡ ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್ ಬ್ರೇಕ್ ಫೆಲ್ ಆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.