ETV Bharat / city

ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿದ ಕತ್ತಿಗೆ 10 ಪ್ರಶ್ನೆ ಕೇಳಿದ ಕ್ರಿಯಾ ಸಮಿತಿ ಅಧ್ಯಕ್ಷ - Ashok asking 10 questions to umesh kathi

ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿದ ಶಾಸಕ ಉಮೇಶ್​​ ಕತ್ತಿ ಅವರಿಗೆ 10ಪ್ರಶ್ನೆ ಕೇಳಿ ಉತ್ತರಿಸುವಂತೆ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಸವಾಲು ಹಾಕಿದ್ದಾರೆ.

ashok-asking-10-questions-to-umesh-kathi
author img

By

Published : Oct 19, 2019, 10:09 PM IST

ಚಿಕ್ಕೋಡಿ: ಶಾಸಕ ಉಮೇಶ ಕತ್ತಿ ಏನು ಹೇಳಲು ಹೊರಟಿದ್ದಾರೆ? ಅವರಿಗೆ ಬೇಕಾಗಿದ್ದು, ಉತ್ತರ ಕರ್ನಾಟಕವೋ ಅಥವಾ ರಾಜ್ಯ ಪುನರ್​​ ವಿಂಗಡಣೆಯೋ? ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಸಾಮಾಜಿಕ ಜಾಲತಾಣದಲ್ಲಿ ಕತ್ತಿಗೆ 10 ಪ್ರಶ್ನೆಗಳನ್ನು ಕೇಳಿದ್ದಾರೆ. ದಯವಿಟ್ಟು ಉತ್ತರಿಸಿರಿ. ಸಾಧ್ಯವಾಗದಿದ್ದರೆ ಅನವಶ್ಯಕ ಹೇಳಿಕೆಗಳನ್ನು ನೀಡಬೇಡಿ ಎಂದೂ ಕೋರಿದ್ದಾರೆ.

  1. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲು ಒತ್ತಾಯಿಸಿದ್ದೀರಿ, 1956 ರಲ್ಲಿ ರಾಜ್ಯಗಳ ಪುನರ್ ವಿಂಗಡಣೆಯಾದಂತೆ ಈಗ ಮತ್ತೊಮ್ಮೆ ಬಯಸುತ್ತೀರಾ?
  2. ಭಾಷಾವಾರು ಪ್ರಾಂತಗಳ ರಚನೆಗಾಗಿ ನ್ಯಾಯಮೂರ್ತಿ ಫಜಲ್ ಅಲಿ ಆಯೋಗದಂತೆ ಮತ್ತೊಂದನ್ನು ರಚಿಸಲು ಕೇಂದ್ರಕ್ಕೆ ಒತ್ತಾಯಿಸಲು ಸಿದ್ದರಿದ್ದೀರಾ?
  3. ಕರ್ನಾಟಕದ ಬೆಳಗಾವಿ ಹಾಗೂ ಇತರ 864 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಸುಪ್ರೀಂಕೋರ್ಟ್​​ನಲ್ಲಿ ಮಹಾರಾಷ್ಟ್ರ ಮೊಕದ್ದಮೆ ದಾಖಲಿದೆ. 1956ನೇ ಎಸ್ಆರ್​ಸಿ ಕಾನೂನನ್ನು ಪ್ರಶ್ನಿಸಿದೆ. ಈ ಬಗ್ಗೆ ನಿಮ್ಮ ನಿಲುವೇನು?
  4. ಪ್ರತ್ಯೇಕ ರಾಜ್ಯವಾಗಬೇಕೆಂಬ ತಮ್ಮ ನಿಲುವನ್ನು ಬೆಂಬಲಿಸಲು ಕನಿಷ್ಠ ಹತ್ತು ಶಾಸಕರಾದರೂ ತಮ್ಮೊಂದಿಗೆ ಇದ್ದಾರೆಯೆ?
  5. ನೀವು ಮತ್ತು ಹತ್ತು ಶಾಸಕರು ಪ್ರತ್ಯೇಕ ರಾಜ್ಯ ಬೆಂಬಲಿಸಿ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ. ಇದರ ಆಧಾರದ ಮೇಲೆ ಚುನಾವಣೆಗೆ ಸ್ಪರ್ಧಿಸಲು ಸಿದ್ದರಿದ್ದೀರಾ?
  6. ಪ್ರತ್ಯೇಕ ರಾಜ್ಯವಾದರೆ ನಮ್ಮ ಆದಾಯದ ಮೂಲದಿಂದಲೇ ರಾಜ್ಯ ನಡೆಸುವಷ್ಟು ನಾವು ಆರ್ಥಿಕವಾಗಿ ಸಶಕ್ತವಾಗಿದ್ದೇವೆಯೇ?
  7. ಪ್ರತ್ಯೇಕ ರಾಜ್ಯಕ್ಕೆ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೀರಾ?
  8. ಕಲ್ಯಾಣ ಕರ್ನಾಟಕದವರು ನಿಮ್ಮೊಂದಿಗೆ ಕೈಜೋಡಿಸಲು ಬರುತ್ತಾರಾ?
  9. ಎಲ್ಲಾ ಪಕ್ಷಗಳ ಶಾಸಕರು ನಿಮ್ಮನ್ನು ಬೆಂಬಲಿಸುತ್ತಾರೆಯೇ?
  10. ಅಧಿಕಾರ ಕೈತಪ್ಪಿದಾಗ ನೀಡುವ ಹತಾಶೆಯ ಹೇಳಿಕೆ ಎಂದು ಜನರು ಭಾವಿಸಿದರೆ ತಪ್ಪೇನು?

Intro:ಶಾಸಕ ಕತ್ತಿಗೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷರಿಂದ ಹತ್ತು ಪ್ರಶ್ನೆಗಳುBody:

ಚಿಕ್ಕೋಡಿ :

ಮಾಜಿ ಸಚಿವ, ಹುಕ್ಕೇರಿಯ ಹಿರಿಯ ಶಾಸಕ ಉಮೇಶ ಕತ್ತಿ ಏನು ಹೇಳಲು ಹೊರಟಿದ್ದಾರೆ? ಅವರಿಗೆ ಬೇಕಾಗಿದ್ದು ಉತ್ತರ ಕರ್ನಾಟಕವೊ ಅಥವಾ ರಾಜ್ಯಗಳ ಪುನರ್ವಿಂಗಡಣೆಯೊ? ಎಂದು ಕತ್ತಿಗೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರಿಂದ ನೇರವಾಗಿ ಸಾಮಾಜಿಕ ಜಾಲತಾಣದಲ್ಲಿ ಹತ್ತು ಪ್ರಶ್ನೆಗಳನ್ನು ಕೇಳಿದ್ದಾರೆ ಅವು ಈ ಕೆಳಗಿನಂತಿವೆ.

1) ಮಹಾರಾಷ್ಟ್ರದ ನಾಲ್ಕು ಕನ್ನಡ ಜಿಲ್ಲೆಗಳನ್ನು ಒಳಗೊಂಡು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂದು ಹೇಳಿದ್ದೀರಿ.
ನೆರೆಯ ರಾಜ್ಯದ ಜಿಲ್ಲೆಗಳನ್ನು ಕರ್ನಾಟಕ ಸೇರಿಸಿಕೊಳ್ಳಬೇಕಾದರೆ ರಾಜ್ಯಗಳ ಪುನರ್ ವಿಂಗಡಣೆಯಾಗಬೇಕು. ಹಾಗಾದರೆ ನೀವು 1956 ರಲ್ಲಾದ ರಾಜ್ಯಗಳ ಪುನರ್ ವಿಂಗಡಣೆಯಂತೆ ಮತ್ತೊಮ್ಮೆ ರಾಜ್ಯಗಳ ಪುನರ್ ವಿಂಗಡಣೆಯಾಗಬೇಕೆಂದು ಬಯಸುತ್ತೀರಾ?

2)ಭಾಷಾವಾರು ಪ್ರಾಂತಗಳ ರಚನೆಗಾಗಿ ಕೇಂದ್ರವು ನ್ಯಾ.ಮೂ.ಫಜಲ್ ಅಲಿ ಆಯೋಗವನ್ನು ರಚಿಸಿದಂತೆ ಮತ್ತೊಂದು ಆಯೋಗವನ್ನು ರಚಿಸಲು ನಿಮ್ಮ ಪಕ್ಷದೇ ಆಡಳಿತವಿರುವ ಕೇಂದ್ರವನ್ನು ಒತ್ತಾಯಿಸಲು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಲು ದಿಲ್ಲಿಗೆ ನಿಯೋಗ ಒಯ್ಯಲು ಸಿದ್ಧರಿದ್ದೀರಾ?

3) ಕರ್ನಾಟಕದ ಬೆಳಗಾವಿ ಹಾಗೂ ಇತರ 864 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಕೋರಿ ಸುಪ್ರೀಮ್ ಕೋರ್ಟಿನಲ್ಲಿ ಮೊಕದ್ದಮೆ ದಾಖಲಿಸಿರುವ ಮಹಾರಾಷ್ಟ್ರ ಸರಕಾರವು 1956 ನೇ ಎಸ್.ಆರ್.ಸಿ.ಕಾನೂನನ್ನು ಪ್ರಶ್ನಿಸಿದೆ. ಈ ಸಂಬಂಧ ತಮ್ಮ ನಿಲುವೇನು?ನಿಮ್ಮ ಹೇಳಿಕೆಯನ್ನು ನೋಡಿದರೆ ತಾವೂ ಸಹ 1956 ರ ಪ್ರಾಂತ ರಚನೆಯನ್ನು ವಿರೋಧಿಸುತ್ತಿರುವಂತೆ ತೋರುತ್ತಿದೆ. ಈ ಬಗ್ಗೆ ನಿಮ್ಮ ಸ್ಪಷ್ಟ ನಿಲುವೇನು?

4) ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ತಮ್ಮ ನಿಲುವನ್ನು ಬೆಂಬಲಿಸುವ ಕನಿಷ್ಟ ಹತ್ತು ಶಾಸಕರಾದರೂ ತಮ್ಮೊಂದಿಗೆ ಇದ್ದಾರೆಯೆ?

5) ಕಳೆದ ಕೆಲವು ವರ್ಷಗಳಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ರಚನೆಯನ್ನು ಪ್ರತಿಪಾದಿಸುತ್ತಿರುವ ತಾವು ಹಾಗೂ ಕನಿಷ್ಠ ಹತ್ತು ಶಾಸಕರು ಇದೇ ವಿಷಯವನ್ನು ಬೆಂಬಲಿಸಿ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ,ಇದೇ ವಿಷಯದ ಆಧಾರದ ಮೇಲೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಿದ್ದೀರಾ?

6) ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ನಮ್ಮ ಆದಾಯದ ಮೂಲದಿಂದಲೇ ರಾಜ್ಯ ನಡೆಸುವಷ್ಟು ನಾವು ಆರ್ಥಿಕವಾಗಿ ಸಶಕ್ತವಾಗಿದ್ದೇವೆಯೆ? ಉತ್ತರ ಕರ್ನಾಟಕವು ಆರ್ಥಿಕವಾಗಿ ಸಶಕ್ತಗೊಳ್ಳಲು ಎಂಟು ಸಲ ಶಾಸಕರಾಗಿ ಆಯ್ಕೆಯಾಗಿ, ಅನೇಕ ಬಾರಿ ಸಚಿವರಾದ ತಮ್ಮ ಕೊಡುಗೆಯೇನು?

7)ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಹೋರಾಟ ಮಾಡುವುದಾಗಿ ತಾವು ಹೇಳುತ್ತಿದ್ದು ಇದು ಕೇವಲ ಮಾಧ್ಯಮಕ್ಕೆ ಮಾತ್ರ ಸೀಮಿತವಾಗಿದ್ದು ಎಂದಾದರೂ ಜನಾಭಿಪ್ರಾಯ ಸಂಗ್ರಹದಂಥ ಕಾರ್ಯ ಕೈಕೊಂಡಿದ್ದೀರಾ?

8) ಪ್ರತ್ಯೇಕ ರಾಜ್ಯವೆಂದರೆ ಕೇವಲ ಮುಂಬಯಿ ಕರ್ನಾಟಕವಲ್ಲ. ಉತ್ತರ ಕರ್ನಾಟಕವೆಂದರೆ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳೂ ಬರುತ್ತವೆ. ಈಗಾಗಲೇ ಸಂವಿಧಾನದ 371 ನೇ ವಿಧಿಯಂತೆ ವಿಶೇಷ ಸ್ಥಾನ ಮಾನ ಪಡೆದಿರುವ ಕಲ್ಯಾಣ ಕರ್ನಾಟಕದವರು ನಿಮ್ಮೊಂದಿಗೆ ಕೈಜೋಡಿಸಲು ಸಾಧ್ಯವೆ?

9) ತಾವು ಜನತಾ ದಳ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ರಾಜಕೀಯ ಮಾಡಿ ಸದ್ಯ ಬಿಜೆಪಿಯಲ್ಲಿ ಹಿರಿಯ ಶಾಸಕರಾಗಿದ್ದೀರಿ. ಈ ಪಕ್ಷಗಳ ಯಾರಾದರೊಬ್ಬರಾದರೂ ನಿಮ್ಮ ಪ್ರತ್ಯೇಕ ರಾಜ್ಯದ ಪ್ರತಿಪಾದನೆಯನ್ನು ಬೆಂಬಲಿಸುತ್ತಾರೆಯೆ?

10) ನೀವು ಮೇಲಿಂದ ಮೇಲೆ ಇಂಥ ರಾಜ್ಯದ ಹಿತಾಸಕ್ತಿಯ ವಿರುದ್ಧ ಹೇಳಿಕೆ ನೀಡುವ ಮೂಲಕ ಪ್ರಚಾರದಲ್ಲಿ ಇರುವ ಒಂದೇ ಉದ್ದೇಶವಿದ್ದರೆ ನಮ್ಮ ಅಭ್ಯಂತರವಿಲ್ಲ. ಆದರೆ, ನೀವು ಕಾಲಕ್ರಮೇಣ ಒಬ್ಬಂಟಿಯಾಗುತ್ತ, ಅಧಿಕಾರ ಕೈತಪ್ಪಿದಾಗ ನೀಡುವ ಹತಾಸೆಯ ಹೇಳಿಕೆಯೆಂದು ರಾಜ್ಯದ ಜನರು ಭಾವಿಸಿದರೆ ತಪ್ಪೇನು?

ನನ್ನ ಹಿರಿಯ ಮಿತ್ರ ಉಮೇಶ ಕತ್ತಿ ಅವರೆ ನಿಮ್ಮ ಹಿರಿತನ, ಶಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡೇ ಈ ಹತ್ತು ಪ್ರಶ್ನೆಗಳನ್ನು ಪ್ರೀತಿಯಿಂದ ಕೇಳಿದ್ದೇನೆ. ದಯವಿಟ್ಟು ಉತ್ತರಿಸಿರಿ. ಸಾಧ್ಯ ಆಗದಿದ್ದರೆ ಮುಂದೆ ಇಂಥ ಅನವಶ್ಯಕ ಹೇಳಿಕೆ ನೀಡದೇ ಅಭಿವೃದ್ಧಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿರಿ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷರು ಅಶೋಕ ಚಂದರಗಿ ಸಾಮಾಜಿಕ‌ ಜಾಲತಾಣಗಳಲ್ಲಿ ಈ ಹತ್ತು ಪ್ರಶ್ನೆಗಳಿಗೆ ಉತ್ತರಿಸುವಂತೆ ಹುಕ್ಕೇರಿ ಶಾಸಕ, ಮಾಜಿ ಸಚಿವ ಉಮೇಶ ಕತ್ತಿಗೆ ಕೋರಿದ್ದಾರೆ.

ಪೋಟೋ 1 : ಅಶೋಕ ಚಂದರಗಿ - ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷರು

ಪೋಟೋ 2 : ಉಮೇಶ ಕತ್ತಿ - ಮಾಜಿ ಸಚಿವ, ಹುಕ್ಕೇರಿ ಶಾಸಕ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.