ETV Bharat / city

ಕೊಂಬು ಸಮೇತ ಜಿಂಕೆ ತಲೆ ಮಾರಾಟಕ್ಕೆ ಯತ್ನ; ಇಬ್ಬರ ಬಂಧನ - belguam news

ಹಣದಾಸೆಗೆ ಕಾಡಿನಲ್ಲಿರುವ ಜಿಂಕೆ ಕೊಂದು ತಲೆ ಬುರುಡೆ ಸಮೇತ ಕೊಂಬನ್ನು ಮಾರಾಟಕ್ಕೆ ತೆಗೆದುಕೊಂಡು ಹೋಗಲು ಕಿತ್ತೂರ ತಾಲೂಕಿನ ದಾಸ್ತಿಕೊಪ್ಪ ಬಸ್ ನಿಲ್ದಾಣದಲ್ಲಿ ಆರೋಪಿಗಳು ನಿಂತಿದ್ದರು. ಇದರ ಮಾಹಿತಿ ಅರಿತ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

  Arrest of two accused who Deer horn trafficking

author img

By

Published : Jun 14, 2021, 5:37 PM IST

ಬೆಳಗಾವಿ: ಅಕ್ರಮವಾಗಿ ತಲೆ ಬುರುಡೆ ಸಮೇತ ಜಿಂಕೆ ಕೊಂಬು ಸಾಗಾಣಿಕೆ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಅರಣ್ಯ ಇಲಾಖೆ‌ ಸಿಬ್ಬಂದಿ ಬಂಧಿಸಿದ್ದಾರೆ.

ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ನಾಗೇಶ ಇಟಗಿ (47) ಹಾಗೂ ಅಭಿಷೇಕ ಕೊರವರ (18) ಬಂಧಿತ ಆರೋಪಿಗಳು.

ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದ ಬಾಬು ಜಮಾದಾರ (45) ಮತ್ತು ಬೆಳಗಾವಿ ತಾಲೂಕು ಸಾಂಬ್ರಾ ನಿವಾಸಿ ಶಂಕರ ಲಕ್ಷ್ಮಣ ದೇಸಾಯಿ (32) ಇವರಿಬ್ಬರು ಸಹ ಪ್ರಕರಣದಲ್ಲಿ ಭಾಗಿಯಾಗಿದ್ದು, ಸದ್ಯ ತಲೆ ಮರೆಸಿಕೊಂಡಿದ್ದಾರೆ.

ನಾಲ್ವರು ಆರೋಪಿಗಳು ಸೇರಿಕೊಂಡು ಹಣದಾಸೆಗೆ ಕಾಡಿನಲ್ಲಿರುವ ಜಿಂಕೆ ಕೊಂದು ಬುರುಡೆ ಸಮೇತ ಜಿಂಕೆ ಕೊಂಬನ್ನು ಮಾರಾಟ ಮಾಡಲು ಕಿತ್ತೂರ ತಾಲೂಕಿನ ದಾಸ್ತಿಕೊಪ್ಪ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೆಳಗಾವಿ ಅರಣ್ಯ ವಿಭಾಗ ಹಾಗೂ ಬೆಳಗಾವಿ ವಲಯ ಮತ್ತು ಗೋಲಿಹಳ್ಳಿ ವಲಯದ ಸಿಬ್ಬಂದಿ ಜಂಟಿಯಾಗಿ ಕಾರ್ಯಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ. ಅಮರನಾಥ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಬಿ. ಕುಸನಾಳ, ಸಿ.ಜಿ. ಮಿರ್ಜಿರವರ ಮಾರ್ಗದರ್ಶನದಲ್ಲಿ ಬೆಳಗಾವಿ ವಲಯ ಅರಣ್ಯ ಅಧಿಕಾರಿ ಶಿವಾನಂದ ಮಗದುಮ, ಚಂದ್ರಶೇಖರ ಪಾಟೀಲ, ಗುಜನಾಳ ವಲಯ ಅರಣ್ಯ ಅಧಿಕಾರಿ ರತ್ನಾಕರ ಓಬಣ್ಣವರ ಹಾಗೂ‌ ಗೋಲಿಹಳ್ಳಿ ವಲಯ ಅರಣ್ಯ ಅಧಿಕಾರಿ ಶ್ರೀನಾಥ ಎಂ.ಕಡೋಲ್ಕರ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.