ETV Bharat / city

ಅಮರನಾಥ ಯಾತ್ರೆ: ಬೆಳಗಾವಿಯ 50ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸುರಕ್ಷಿತ - ಬೆಳಗಾವಿಯ 50ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸುರಕ್ಷಿತ

ಬೆಳಗಾವಿ ಜಿಲ್ಲೆಯಿಂದ ಪವಿತ್ರ ಯಾತ್ರಾಸ್ಥಳ ಅಮರನಾಥ ದರ್ಶನಕ್ಕೆ ತೆರಳಿದ್ದ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.

Amarnath
ಅಮರನಾಥ
author img

By

Published : Jul 10, 2022, 9:06 AM IST

Updated : Jul 10, 2022, 9:59 AM IST

ಬೆಳಗಾವಿ: ಜಮ್ಮು ಕಾಶ್ಮೀರದಲ್ಲಿರುವ ಹಿಂದೂಗಳ ಪವಿತ್ರ ಯಾತ್ರಾಸ್ಥಳ ಅಮರನಾಥನ ದರ್ಶನಕ್ಕೆ ತೆರಳಿದ್ದ 50ಕ್ಕೂ ಹೆಚ್ಚು ಜನರು ಶೇಷನಾಗ ಎಂಬ ಪ್ರದೇಶದಲ್ಲಿ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ 'ಈಟಿವಿ ಭಾರತ'ಕ್ಕೆ ಲಭ್ಯವಾಗಿದೆ. ಶಿವಾಜಿ ನಗರ, ಕಾಮತಗಲ್ಲಿ ಸೇರಿದಂತೆ ವಿವಿಧೆಡೆಗಳಿಂದ 55-60 ಮಂದಿ ಅಮರನಾಥ ಯಾತ್ರೆ ಕೈಗೊಂಡಿದ್ದರು. ಆದರೆ, ಅಮರನಾಥ ಪರ್ವತದಲ್ಲಿ ಉಂಟಾದ ಮೇಘಸ್ಪೋಟ ಕುಟುಂಬಸ್ಥರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು.

ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯ ಶಿವಾಜಿ ಮಂಡೋಳಕರ ಅವರ ತಂಡದಲ್ಲಿ 32 ಜನರಿದ್ದು, ಅವರನ್ನು ಹೊರತುಪಡಿಸಿ 20ಕ್ಕೂ ಹೆಚ್ಚು ಬೆಳಗಾವಿಗರು ದರ್ಶನ ಪಡೆದುಕೊಂಡು ವಾಪಸ್ ಬರುವಾಗ ಮೇಘ ಸ್ಫೋಟದಿಂದಾಗಿ ಅಮರನಾಥ ದೇವಸ್ಥಾನದಿಂದ 20ಕಿ.ಮೀ. ದೂರದಲ್ಲಿರುವ ಶೇಷನಾಗ ಎಂಬಲ್ಲಿ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಈ ತಂಡದ ಸದಸ್ಯರು ಮೊದಲಿಗೆ ಜಮ್ಮು-ಕಾಶ್ಮೀರದಿಂದ ಚಂದನವಾಡಿ, ಪೆಹಲಗಾಮ್‌ಗೆ ಬಂದು ಅಲ್ಲಿಂದ ಪಾದಯಾತ್ರೆ ಆರಂಭಿಸಿದ್ದರು. ಧಾರಾಕಾರ ಮಳೆಯಿಂದ ಸಂಭವಿಸಿದ ದುರ್ಘಟನೆಯಿಂದ ಶೇಷನಾಗದಲ್ಲಿ ಅವರು ಉಳಿದುಕೊಂಡಿದ್ದಾರೆ. ಶುಕ್ರವಾರ ದರ್ಶನ ಪಡೆದುಕೊಂಡಿರುವ ಅವರು ವಾಪಸ್ ಬರುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲು ಬೆಳಗಾವಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ: ಅಮರನಾಥ ಯಾತ್ರೆ: ಬಂಟ್ವಾಳದ 30 ಜನರ ತಂಡ ಸುರಕ್ಷಿತ

Last Updated : Jul 10, 2022, 9:59 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.