ETV Bharat / city

ಸಹೋದರ, ಆತನ ಪತ್ನಿಯ ಅಕ್ಕನ ಮಗನಿಂದ ನನ್ನ ಮೇಲೆ ದಾಳಿ: ನಟ ಶಿವರಂಜನ್ - ನಟ ಶಿವರಂಜನ್ ಫೈರಿಂಗ್ ಸುದ್ದಿ

ನನ್ನ ಸಹೋದರ ಮತ್ತು ಆತನ ಹೆಂಡತಿಯ ಅಕ್ಕನ ಮಗನಿಂದಲೇ ನನ್ನ ಮೇಲೆ ಐದು ಸುತ್ತಿನ ಗುಂಡಿನ ದಾಳಿ ನಡೆದಿದೆ ಎಂದು ಚಿತ್ರನಟ ಶಿವರಂಜನ್ ಆರೋಪಿಸಿದ್ದಾರೆ.

Shivaranjan reaction about firing, Actor Shivaranjan reaction about firing in Belagavi, Actor Shivaranjan firing news, Actor Shivaranjan movies, ಗುಂಡಿನ ದಾಳಿ ಬಗ್ಗೆ ಶಿವರಂಜನ್ ಪ್ರತಿಕ್ರಿಯೆ, ಬೆಳಗಾವಿಯಲ್ಲಿ ಶೂಟೌಟ್​ ಬಗ್ಗೆ ನಟ ಶಿವರಂಜನ್ ಪ್ರತಿಕ್ರಿಯೆ, ನಟ ಶಿವರಂಜನ್ ಫೈರಿಂಗ್ ಸುದ್ದಿ, ನಟ ಶಿವರಂಜನ್ ಸಿನಿಮಾಗಳು,
ನಟ ಶಿವರಂಜನ್ ಹೇಳಿಕೆ
author img

By

Published : Jul 13, 2022, 10:44 AM IST

ಬೆಳಗಾವಿ: ನಮ್ಮ ಸಹೋದರ ಮತ್ತು ಆತನ ಪತ್ನಿಯ ಅಕ್ಕನ ಮಗನಿಂದಲೇ ನನ್ನ ಮೇಲೆ ಐದು ಸುತ್ತಿನ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಬದುಕುಳಿದಿದ್ದೇನೆ ಎಂದು ಚಿತ್ರನಟ, ಉದ್ಯಮಿ ಶಿವರಂಜನ್ ಬೋಳಣ್ಣವರ ತಿಳಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆತ್ಮೀಯ ಗುರುಹಿರಿಯರು ಹಾಗೂ ಸ್ನೇಹಿತರ ಆಶೀರ್ವಾದದಿಂದ ನಾನು ಬದುಕಿದ್ದೇನೆ. ನಿನ್ನೆ ಸಂಜೆ 7.30ರ ಸುಮಾರಿಗೆ ಸಂಬಂಧಿಕರಿಂದಲೇ ನನ್ನ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಹೇಳಿದರು.

ಇದನ್ನೂ ಓದಿ: ಬೈಲಹೊಂಗಲದಲ್ಲಿ ನಟ ಶಿವರಂಜನ್ ಮೇಲೆ ಗುಂಡಿನ ದಾಳಿ

ಅದೃಷ್ಟವಶಾತ್ ನನಗೆ ಯಾವುದೇ ಗುಂಡು ತಗುಲಿಲ್ಲ.‌ ಇಂತಹ ಘಟನೆಗಳು ಸಮಾಜದಲ್ಲಿ ನಡೆಯಬಾರದು. ಘಟನೆ ನಡೆದ ಬಳಿಕ ಇಡೀ ಪೊಲೀಸ್ ಇಲಾಖೆ ಅಲರ್ಟ್ ಆಗಿ ಕೆಲಸ ಮಾಡಿದೆ.‌ ನಿನ್ನೆಯೇ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿಯನ್ನು ಇವತ್ತು ಬಂಧಿಸುವ ಭರವಸೆಯನ್ನೂ ಪೊಲೀಸರು ನೀಡಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ನಾನು ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವಾಸಿ ಚಿತ್ರನಟ, ಉದ್ಯಮಿ ಶಿವರಂಜನ್ ಬೋಳಣ್ಣವರ 90ರ ದಶಕದಲ್ಲಿ ಅಮೃತ ಸಿಂಧು, ರಾಜಾ ರಾಣಿ ಸೇರಿ ಕೆಲವು ಚಿತ್ರಗಳಲ್ಲಿ ನಟಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.