ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹ ಕುಸಿತ ಗೊಂಡಿದ್ದು, ಪರಿಣಾಮವಾಗಿ ರಾಷ್ಟ್ರ ರಾಜಧಾನಿಯಲ್ಲೂ ಚಿನ್ನದ ಬೆಲೆ 345 ರೂ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ 60,065 ರೂ ಆಗಿದೆ ಎಂದು ಎಚ್ಡಿಎಫ್ಸಿ ಸೆಕ್ಯೂರಿಟಿ ದೃಢಪಡಿಸಿದೆ. ಕಳೆದ ವಹಿವಾಟಿನಲ್ಲಿ 10ಗ್ರಾಂ ಚಿನ್ನದ ದರ 60,410ಗಳೊಂದಿಗೆ ಮುಕ್ತಾಯಗೊಂಡಿದೆ. ಇನ್ನು ಬಂಗಾರದ ಬೆಲೆ ಜೊತೆಗೆ ಬೆಳ್ಳಿ ಬೆಲೆ ಕೂಡ 675 ರೂ ಇಳಿಕೆ ಕಂಡಿದ್ದು, ಕೆಜಿ ಬೆಳ್ಳಿ ದರ 74,400 ರೂ ಆಗಿದೆ.
ಇನ್ನು ಈ ಕುರಿತು ಮಾತನಾಡಿರುವ ಎಚ್ಡಿಎಫ್ಸಿ ಸೆಕ್ಯೂರಿಟಿ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ, ದೆಹಲಿಯಲ್ಲಿ ಚಿನ್ನ 345 ದರ ಇಳಿಕೆ ಕಂಡಿದ್ದು, 10 ಗ್ರಾಂಗೆ 60,065 ರೂ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಔನ್ಸ್ಗೆ 1,982 ಡಾಲರ್ ಇಳಿಕೆ ಕಂಡಿದ್ದರೆ, ಬೆಳ್ಳಿ ಔನ್ಸ್ಗೆ 24.95 ಡಾಲರ್ ತಗ್ಗಿದೆ. ಸೋಮವಾರ ಏಷಿಯನ್ ಟ್ರೇಡಿಂಗ್ ಸಮಯದಲ್ಲಿ ಬಂಗಾರದ ಬಲೆ ಇಳಿಕೆಕಂಡಿದೆ. 30 ಶೇರ್ನ ಬಿಎಸ್ಇ ಸೆನ್ಸೆಕ್ಸ್ 60,056ಕ್ಕೆ ಮುಕ್ತಾಯ ಕಂಡಿದೆ. ಷೇರು ಮಾರುಕಟ್ಟೆ ದತ್ತಾಂಶ ಪ್ರಕಾರ, ವಿದೇಶಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿ ಉಳಿದರು. 412.27 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು.
ಬಲಗೊಂಡ ರೂಪಾಯಿ : ದೇಶಿಯ ಈಕ್ವಿಟಿ ಮಾರುಕಟ್ಟೆಯಲ್ಲಿ ಡಾಲರ್ ಕುಸಿತಗೊಂಡ ಹೂಡಿಕೆದಾರರ ವ್ಯಾಪಾರವನ್ನು ಬಲಗೊಳಿಸಿದವರು. ಇದರಿಂದಾಗಿ ಸೋಮವಾರ ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ವಿರುದ್ಧ ರೂಪಾಯಿ 14 ಪೈಸೆ ಏರಿಕೆಕಂಡಿತು. ಅಂತರ ವ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕ ಡಾಲರ್ ಎದುರು ರೂಪಾಯಿ 82.08ಕ್ಕೆ ಆರಂಭ ಕಂಡಿದ್ದು, 14 ಪೈಸೆ ಏರಿಕೆ ಕಾಣುವ ಮೂಲಕ ದಿನದ ಅಂತ್ಯಕ್ಕೆ 81.92ರೊಂದಿಗೆ ಮುಕ್ತಾಯ ಕಂಡಿದೆ.
ವಹಿವಾಟಿನ ವೇಳೆ ರೂಪಾಯಿ 81.88 ಮತ್ತು ಕಡಿಮೆಯ 82.9 ನಡುವೆ ಏರಿಳಿತ ಕಂಡಿತು. ಶುಕ್ತವಾರ ರೂಪಾಯಿ 82.06 ಡಾಲರ್ ವಿರುದ್ಧ ಕೊನೆಕೊಂಡಿತು. ಶರೆಖಾನ್ ಬಿಎನ್ಪಿ ಪರಿಬಾಸ್ ಸಂಶೋಧನಾ ವಿಶ್ಲೇಷಕ ಅನೂಚ್ ಚೌದರಿ ಹೇಳುವಂತೆ, ದೇಶಿಯ ಷೇರು ಮಾರುಕಟ್ಟೆ ಬಲಗೊಂಡಿದ್ದು, ಸೋಮವಾರ ದುರ್ಬಲ ಡಾಲರ್ ರೂಪಾಯಿಯನ್ನು ಬಲಗೊಳಿಸಿದೆ. ಆದರೆ, ಕಚ್ಛಾ ತೈಲದ ದರಗಳ ದುರ್ಬಲ ಪ್ರವೃತ್ತಿ ರೂಪಾಯಿಯಲ್ಲಿ ಏರಿಕೆ ಸೀಮಿತಗೊಳಿಸಿತು.
ಬ್ರೆಂಟ್ ಕಚ್ಚಾ ತೈಲ: ಜಾಗತಿಕ ಕಚ್ಛಾ ಬೆಲೆಗಳು ಮತ್ತು ಬಲವಾದ ಸ್ಥಳೀಯ ಇಕ್ವಿಟಿ ಮಾರುಕಟ್ಟೆಯ ವಹಿವಾಟಿಯಲ್ಲಿ ರೂಪಾಯಿ ಬಲಪಡಿಸಿತು. ಡಾಲರ್ ದುರ್ಬಲವಾಗಿದ್ದು, ಆರ್ಥಿಕ ಹಿಂಜರಿತದ ಬಗ್ಗೆ ಆತಂಕ ಹೆಚ್ಚಿಸಿದೆ. ವಿಶ್ವದ ಆರು ಪ್ರಮುಖ ಕರೆನ್ಸಿ ವಿರುದ್ಧ ಅಮೆರಿಕ ಡಾಲರ್ ಸೂಚ್ಯಂಕ 0.35ರಷ್ಟು ಕುಸಿತ ಕಂಡಿದ್ದು, 101.47ಕ್ಕೆ ತಲುಪಿದೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕ್ರೂಡ್ ಪ್ಯೂಚರ್ಸ್ ಪ್ರತಿ ಬ್ಯಾರೆಲ್ಗೆ 0.60 ರೊಂದಿಗೆ 82.15 ಡಾಲರ್ಗೆ ಇಳಿಕೆ ಕಂಡಿದೆ.
ಇದನ್ನೂ ಓದಿ: ಕ್ರಿಪ್ಟೊಕರೆನ್ಸಿ ನಿರ್ಬಂಧಕ್ಕೆ ಜಾಗತಿಕ ಒಮ್ಮತ ಅಗತ್ಯ: ಸಚಿವೆ ಸೀತಾರಾಮನ್