ETV Bharat / business

ಶಂಶಾಬಾದ್​​ಗೆ ಬಂದಿಳಿದ ಪ್ರಪಂಚದ ಅತಿದೊಡ್ಡ ಕಾರ್ಗೊ ವಿಮಾನ

author img

By

Published : Dec 6, 2022, 11:36 AM IST

ತಿಮಿಂಗಲ​ ರೀತಿಯಲ್ಲಿಯೇ ಇರುವ ಈ ವಿಮಾನ ಹಲವು ವಿಶೇಷತೆಗಳನ್ನು ಒಳಗೊಂಡಿದೆ.

ಶಂಶಾಬಾದ್​​ಗೆ ಬಂದಿಳಿದ ಪ್ರಪಂಚದ ಅತಿದೊಡ್ಡ ಕಾರ್ಗೊ ವಿಮಾನ
worlds-largest-cargo-plane-lands-at-shamshabad

ಹೈದರಾಬಾದ್​: ಜಗತ್ತಿನ ಅತಿದೊಡ್ಡ ಕಾರ್ಗೊ ವಿಮಾನವಾದ ಏರ್​ಬಸ್​​ ಬೆಲುಗ ಶಂಶಾಬಾದ್​ಗೆ ಬಂದಿಳಿದಿದೆ. ವೇಲ್​ನಷ್ಟೆ ದೈತ್ಯವಾಗಿರುವ ಈ ವಿಮಾನ ದುಬೈನ ಅಲ್​ ಮಕಟೂಮ್​ನಿಂದ ಥಾಯ್ಲೆಂಡ್​ಗೆ ಪ್ರಯಾಣಿಸುವ ಮಧ್ಯೆ ಇಂಧನವನ್ನು ತುಂಬಿಸುವ ಉದ್ದೇಶದಿಂದ ಶಂಶಾಬಾದ್​ಗೆ ಭಾನುವಾರ ರಾತ್ರಿ ಬಂದಿಳಿದಿತು.

ತಿಮಿಂಗಲ​ ರೀತಿಯಲ್ಲಿಯೇ ಇರುವ ಈ ವಿಮಾನ ಹಲವು ವಿಶೇಷತೆ ಒಳಗೊಂಡಿದೆ. ಈ ರೀತಿಯ 5 ವಿಶೇಷ ಕಾರ್ಗೋ ವಿಮಾನವನ್ನು ಏರ್​ಬಸ್​ ಕಂಪನಿ ನಿರ್ಮಾಣ ಮಾಡಿದೆ. ಸಾಮಾನ್ಯವಾಗಿ ಸಾಮಗ್ರಿಗಳನ್ನು ತುಂಬುವುದು ಮತ್ತು ಇಳಿಸುವುದು ಎಲ್ಲ ವಿಮಾನಗಳಲ್ಲಿ ಹಿಂಬದಿಯಿಂದ ನಡೆಯುತ್ತಿದೆ. ಆದರೆ, ಈ ವಿಮಾನದಲ್ಲಿ ಮುಂಭಾಗದಿಂದ ಈ ಚಟುವಟಿಕೆ ನಡೆಸಲಾಗುವುದು. ಈ ಮೊದಲು ಅನ್ಟೊವ ಎಎನ್​ 225 ಮ್ರಿಯ ಜಗತ್ತಿನ ದೊಡ್ಡ ಕಾರ್ಗೊ ವಿಮಾನವಾಗಿತ್ತು. ಆದರೆ, ರಷ್ಯಾ- ಉಕ್ರೇನ್​ ಯುದ್ಧ ಪರಿಣಾಮ ಇದರ ಹಾರಾಟವನ್ನು ರಷ್ಯಾ ನಿಲ್ಲಿಸಿದೆ. ಈ ಹಿನ್ನೆಲೆ ಈ ವಿಮಾನ ಇದೀಗ ಅತಿದೊಡ್ಡ ಕಾರ್ಗೊ ವಿಮಾನವಾಗಿದೆ.

ಇದರ ವಿಶೇಷತೆ ಗೊತ್ತೆ?

ಮೊದಲ ವಿಮಾನ ತಯಾರಾಗಿದ್ದು 1994 ಸೆಪ್ಟೆಂಬರ್​ 13

ಸೇವೆಗೆ ಸಿದ್ದವಾಗಿದ್ದು: 1996

ಇದರ ಉದ್ದ: 184.3 ಅಡಿ

ಎತ್ತರ 56.7 ಅಡಿ

ವಿಮಾನದ ಭಾರ 86.6 ಟನ್​

ಕಾರ್ಗೊ ಸಾಮರ್ಥ್ಯ: 47 ಟನ್​ಗಳಷ್ಟು

ಇದನ್ನೂ ಓದಿ: ಆ. 30 ರಂದು ಬೆಂಗಳೂರಿನಲ್ಲಿ ಲ್ಯಾಂಡ್ ಆಗಲಿದೆ ಅತಿ ದೊಡ್ಡ ಪ್ರಯಾಣಿಕರ ವಿಮಾನ ಏರ್ ಬಸ್ A 380

ETV Bharat Logo

Copyright © 2024 Ushodaya Enterprises Pvt. Ltd., All Rights Reserved.