ವಾಷಿಂಗ್ಟನ್: ದಿವಾಳಿಯಾಗಿರುವುದಾಗಿ ಘೋಷಿಸಿಕೊಂಡಿರುವ ಅಮೆರಿಕದ ಬ್ಯಾಂಕ್ಗಳ ರಕ್ಷಣೆಗೆ ಸರ್ಕಾರ ಧಾವಿಸಿದ ಬೆನ್ನಲ್ಲೇ ಅವುಗಳನ್ನು ಉಳಿಸಲು ಮತ್ತು ಬ್ಯಾಂಕಿಂಗ್ ವಲಯ ಚೇತರಿಕೆಗೆ ನೆರವಾಗಲು ಅಲ್ಲಿನ ಉದ್ಯಮಿಗಳು, ಇತರ ಬ್ಯಾಂಕ್ಗಳು ಮುಂದಾಗಿವೆ. ಈ ಹಿಂದೆ ಬ್ಯಾಂಕ್ನಲ್ಲಿ ಹಣ ಠೇವಣಿ ಇಟ್ಟು ವಾಪಸ್ ಪಡೆದಿದ್ದ ಉದ್ಯಮಿದಾರರು ಮತ್ತೆ ಬ್ಯಾಂಕ್ನಲ್ಲಿ ಹಣ ಠೇವಣಿ ಮಾಡಲು ಸಜ್ಜಾಗಿದ್ದಾರೆ.
15 ವರ್ಷಗಳ ಹಿಂದೆ ಇದೇ ರೀತಿ ಕೆಲ ಬ್ಯಾಂಕ್ಗಳು ಪತನದ ಹಾದಿ ಹಿಡಿದಿದ್ದವು. ಇದೀಗ ಅದೇ ಘಟನಾವಳಿಗಳು ಮರುಕಳಿಸುತ್ತಿದ್ದು, ಬ್ಯಾಂಕಿಂಗ್ ವಲಯ ತತ್ತರಿಸುತ್ತಿದೆ. ಸ್ಯಾನ್ ಫ್ರಾನ್ಸಿಸ್ಕೋದ ಸಿಲ್ವರ್‌ಗೇಟ್ ಕ್ಯಾಪಿಟಲ್ ಮೊದಲು ಪತನಗೊಂಡು ಅಮೆರಿಕ ಸೇರಿದಂತೆ ವಿಶ್ವದಲ್ಲಿ ಭಾರಿ ಸಂಚಲನ ಉಂಟು ಮಾಡಿತು. ರಿಪಬ್ಲಿಕ್ ಬ್ಯಾಂಕ್ ಆದ ಸಿಲ್ವರ್‌ಗೇಟ್ ಕ್ಯಾಪಿಟಲ್ ಒಂದು ಕಾಲದಲ್ಲಿ ಅತ್ಯಧಿಕ ವಹಿವಾಟು ನಡೆಸುವ ಮೂಲಕ ಎಲ್ಲರ ಕಣ್ಣರಳಿಸಿತ್ತು. ಅಂತಹ ಬ್ಯಾಂಕ್ ಇದೀಗ ಹಣವಿಲ್ಲದೇ, ಪತನ ಹೊಂದಿದೆ.
ಬ್ಯಾಂಕಿಂಗ್ ಉದ್ಯಮದಲ್ಲಿನ ಇತ್ತೀಚಿನ ಪ್ರಕ್ಷುಬ್ಧತೆಯು 2007 ರಿಂದ 2009 ರಲ್ಲಿ ನಡೆದ ಮಹಾ ಆರ್ಥಿಕ ಹಿಂಜರಿತ ಹುಟ್ಟುಹಾಕಿದ ಬಿಕ್ಕಟ್ಟಿನಷ್ಟು ಪ್ರಬಲವಾಗಿಲ್ಲ. ಆದರೆ, ಸಿಲಿಕಾನ್ ವ್ಯಾಲಿ ಮತ್ತು ಸಿಗ್ನೇಚರ್ ಬ್ಯಾಂಕ್ ಪತನಗೊಂಡ ಬಳಿಕ ಅವುಗಳನ್ನು ಸರ್ಕಾರ ಬೇರೆ ಬ್ಯಾಂಕ್ನಲ್ಲಿ ವಿಲೀನ ಮಾಡಿದ್ದು, ಉದ್ಯಮಿಗಳು ಹೆಚ್ಚಿನ ಹೂಡಿಕೆಗೆ ಅನಿವಾರ್ಯ ಸೃಷ್ಟಿಸಿದೆ.
ಅಮೆರಿಕ ಸರ್ಕಾರದ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಅವರು, ಪತನಗೊಂಡ ಬ್ಯಾಂಕ್ಗಳನ್ನು ಬೆಂಬಲಿಸುವುದಕ್ಕಾಗಿ ಇತರ ಬ್ಯಾಂಕ್ ನಿಯಂತ್ರಕರಾದ ಫೆಡರಲ್ ರಿಸರ್ವ್, ಫೆಡರಲ್ ಡಿಪಾಸಿಟ್ ಇನ್ಶುರೆನ್ಸ್ ಕಾರ್ಪೊರೇಷನ್ಗಳ ಅಧಿಕಾರಿಳೊಂದಿಗೆ ಚರ್ಚಿಸಿದರು. ಬಿಕ್ಕಟ್ಟು ಉಲ್ಬಣಗೊಳ್ಳದಂತೆ ತಡೆಯಲು ಖಾಸಗಿ ಕಂಪನಿಗಳು ಪ್ಯಾಕೇಜ್ ಘೋಷಿಸುವ ಅಗತ್ಯವಿದೆ ಎಂಬ ತೀರ್ಮಾನಕ್ಕೆ ಬರಲಾಗಿದೆ.
ನಾಲ್ಕು ಬ್ಯಾಂಕ್ಗಳ ಪತನ: ಅಮೆರಿಕದಲ್ಲಿ ಒಟ್ಟಾರೆ ನಾಲ್ಕು ಬ್ಯಾಂಕ್ಗಳ ಪತನಗೊಂಡಿವೆ. ಮೊದಲು ರಿಪಬ್ಲಿಕ್ ಬ್ಯಾಂಕ್ ಆದ ಸಿಲ್ವರ್‌ಗೇಟ್ ಕ್ಯಾಪಿಟಲ್ ಪತನವಾದ ಬಳಿಕ 15 ದಿನಗಳ ಅಂತರದಲ್ಲಿ ಮತ್ತೆ ಮೂರು ಬ್ಯಾಂಕ್ಗಳು ಪತನಗೊಂಡಿವೆ. ಕಳೆದ ವಾರ ಸಿಲ್ವರ್‌ಗೇಟ್ ಕ್ಯಾಪಿಟಲ್ ಬ್ಯಾಂಕ್ ಹಾಗೂ ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನಗೊಂಡಿದ್ದವು. ಇದಾದ ಬಳಿಕ ಸಿಗ್ನೇಚರ್ ಬ್ಯಾಂಕ್ ಕೂಡ ಬಾಗಿಲು ಮುಚ್ಚಿದೆ. ಇದು ಅಮೆರಿಕದ ಬ್ಯಾಂಕಿಂಗ್ ಕ್ಷೇತ್ರದ ಇತಿಹಾಸದಲ್ಲಿಯೇ ದೊಡ್ಡ ಬ್ಯಾಂಕಿಂಗ್ ಪತನ ಎಂದು ಹೇಳಲಾಗಿದೆ.
ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನದ ಬಳಿಕ ವಾರದಲ್ಲಿ ಸಿಗ್ನೇಚರ್ ಬ್ಯಾಂಕ್ ಬ್ಯಾಂಕ್ ಪತನಗೊಂಡಿದ್ದು, ದೇಶದ ಬ್ಯಾಂಕಿಂಗ್ ವಲಯವನ್ನೇ ತಲ್ಲಣಗೊಳಿಸಬಹುದಾದ ಈ ಬೆಳವಣಿಗೆ ತಡೆಯಲು ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾರ್ಪೊರೇಷನ್ (ಎಫ್‌ಡಿಐಸಿ) ಈ ಬ್ಯಾಂಕ್ ವಶಕ್ಕೆ ಪಡೆದಿದೆ. ಜೊತೆಗೆ ಸಿಗ್ನೇಚರ್ ಬ್ರಿಡ್ಜ್ ಬ್ಯಾಂಕ್ ಎಂಬ ಹೊಸ ಬ್ಯಾಂಕ್ ಸ್ಥಾಪಿಸಿ ಹಳೆಯ ಬ್ಯಾಂಕ್‌ನ ಎಲ್ಲ ಆಸ್ತಿ, ಠೇವಣಿಯನ್ನು ಅದಕ್ಕೆ ವರ್ಗಾಯಿಸಿದೆ. ಎಲ್ಲ ಠೇವಣಿದಾರರಿಗೆ ಅವರ ಸಂಪೂರ್ಣ ಹಣವನ್ನು ಮರಳಿ ನೀಡುವುದಾಗಿ ಎಫ್‌ಡಿಐಸಿ ಭರವಸೆ ನೀಡಿದೆ.
ಓದಿ: ವಾಲ್ಮಾರ್ಟ್ನಿಂದ 200 ಮಿಲಿಯನ್ ಡಾಲರ್ ಬಂಡವಾಳ ನಿಧಿ ಪಡೆದ ಫೋನ್ಪೇ