ETV Bharat / business

ಚೀನಾ ಮಣಿಸಲು, ಆರ್ಥಿಕ ಸದೃಢತೆ ಹೊಂದುತ್ತಿರುವ ಭಾರತದ ಜೊತೆ ಅಮೆರಿಕ ನಿಕಟ ಸ್ನೇಹ: ವರದಿ

ಚೀನಾ ವಿರುದ್ಧದ ತನ್ನ ಹೋರಾಟದಲ್ಲಿ ಭಾರತವನ್ನು ಮಿತ್ರರಾಷ್ಟ್ರವನ್ನಾಗಿ ಅಮೆರಿಕ ಪರಿಗಣಿಸಿದೆ. ಅಲ್ಲದೇ, ಭಾರತದ ಆರ್ಥಿಕ ಬೆಳವಣಿಗೆಯೂ ಇತರ ರಾಷ್ಟ್ರಗಳಿಗೆ ವರದಾನವಾಗಿದೆ ಎಂದು ಬ್ರಿಟನ್​ ಪತ್ರಿಕೆಯ ವರದಿ ಹೇಳಿದೆ.

ಭಾರತದ ಜೊತೆ ಅಮೆರಿಕ ನಿಕಟ ಸ್ನೇಹ
ಭಾರತದ ಜೊತೆ ಅಮೆರಿಕ ನಿಕಟ ಸ್ನೇಹ
author img

By

Published : Jun 19, 2023, 10:07 AM IST

ನವದೆಹಲಿ: ವಿಶ್ವದ ಐದನೇ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿರುವ ಹಾಗೂ ಬೆಳೆಯುತ್ತಿರುವ ಭಾರತದ ಆರ್ಥಿಕತೆಯನ್ನು ಅಮೆರಿಕ ಶ್ಲಾಘಿಸಿದ್ದು, ಚೀನಾದೊಂದಿಗೆ ಅಮೆರಿಕ ನಡೆಸುತ್ತಿರುವ ಪೈಪೋಟಿಯಲ್ಲಿ ಭಾರತವನ್ನು ಅಗತ್ಯ ಸಹಚರನಾಗಿ ಪರಿಗಣಿಸುತ್ತಿದೆ ಎಂದು ಬ್ರಿಟನ್​ ಪತ್ರಿಕೆಯೊಂದು ವರದಿ ಮಾಡಿದೆ.

ಭಾರತದ ವಿದೇಶಾಂಗ ನೀತಿ ಚೀನಾಕ್ಕೆ ಪ್ರತಿಕೂಲವಾಗಿದೆ. ಇದು ಅಮೆರಿಕಕ್ಕೆ ಹೆಚ್ಚು ನೆರವಾಗಲಿದೆ. ಹೀಗಾಗಿ ಭಾರತದ ವಲಸೆಯನ್ನು ಅದು ಹೆಚ್ಚಾಗಿ ಬೆಂಬಲಿಸುತ್ತದೆ. ಇದರ ಲಾಭವನ್ನು ಪಡೆಯಲು ಅಮೆರಿಕ ಮುಂದಾಗಿದೆ ಎಂದು ಅದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಚರ್ಚಿಲ್​ ಬಳಿಕ ಮೋದಿಗೆ ಅವಕಾಶ: ಭಾರತದ ಬೆಳೆಯುತ್ತಿರುವ ಆರ್ಥಿಕತೆಯೇ ಅದರ ಪ್ಲಸ್​ ಪಾಯಿಂಟ್​. ಹೀಗಾಗಿ ಅಮೆರಿಕ ಆ ದೇಶದ ಜೊತೆಗೆ ನಿಕಟ ಸಂಪರ್ಕ ಸಾಧಿಸಲು ಹವಣಿಸುತ್ತಿದೆ. ಹೀಗಾಗಿಯೇ ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕಕ್ಕೆ ಆಹ್ವಾನಿಸಲಾಗಿದೆ. ಅಧ್ಯಕ್ಷ ಜೋ ಬೈಡನ್ ಶ್ವೇತಭವನದಲ್ಲಿ ಔಪಚಾರಿಕ ಔತಣಕೂಟವನ್ನು ಏರ್ಪಡಿಸುತ್ತಿದ್ದಾರೆ. ಎರಡನೇ ಬಾರಿಗೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ಮೋದಿ ಅವರನ್ನು ಆಹ್ವಾನಿಸಲಾಗಿದೆ. ಈ ಹಿಂದೆ ಇಂಗ್ಲೆಂಡ್​ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರಂತಹ ಗಣ್ಯ ನಾಯಕರಿಗೆ ಮಾತ್ರ ಈ ಗೌರವ ನೀಡಲಾಗಿತ್ತು ಎಂದು ವರದಿ ಹೇಳಿದೆ.

ಮೋದಿ ಅವರ ಈ ಭೇಟಿಯು ಉಭಯ ರಾಷ್ಟ್ರಗಳ ನಡುವಿನ ಆಳವಾದ ಮತ್ತು ನಿಕಟ ಪಾಲುದಾರಿಕೆಯನ್ನು ದೃಢೀಕರಿಸುತ್ತದೆ. ಭಾರತವು ಈಗಾಗಲೇ ಇಂಗ್ಲೆಂಡ್​ ಅನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. ಅಮೆರಿಕದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಕಂಪನಿಯಾದ ಗೋಲ್ಡ್‌ಮನ್ ಸ್ಯಾಚ್ಸ್, ಭಾರತದ ಜಿಡಿಪಿಯು 2051 ರ ವೇಳೆಗೆ ಯುರೋವನ್ನು ಮೀರಲಿದೆ. 2075 ರ ವೇಳೆಗೆ ಅಮೆರಿಕದ ಡಾಲರ್ ಅನ್ನು ಹಿಂದಿಕ್ಕಲಿದೆ ಎಂದು ಅಂದಾಜಿಸಿದೆ. ಮುಂದಿನ 5 ವರ್ಷಗಳಲ್ಲಿ ಶೇಕಡಾ 5.8 ರಷ್ಟು, 2030 ಕ್ಕೆ ಶೇ.4.6 ರಷ್ಟು ಬೆಳವಣಿಗೆ ದರವನ್ನು ಕಾಣಸಲಿದೆ.

ಮೋದಿ ಬಂದ ಬಳಿಕ ಆರ್ಥಿಕತೆ ದ್ವಿಗುಣ: ಗೋಲ್ಡ್‌ಮನ್‌ನ ಕಂಪನಿಯ ಲೆಕ್ಕಾಚಾರ ಭಾಗಶಃ ಜನಸಂಖ್ಯೆಯ ಆಧಾರದ ಮೇಲೆ ನಿಂತಿದೆ. ಏಕೆಂದರೆ ಯುರೋಪ್ ಮತ್ತು ಚೀನಾದಲ್ಲಿ ಜನಸಂಖ್ಯೆ ಕುಗ್ಗುತ್ತಿದೆ. ಇದರ ಕಾರ್ಯಪಡೆಯೂ ಕುಂಠಿತವಾಗುತ್ತಿದೆ. ಇದಕ್ಕೆ ಆಧಾರವೆಂಬಂತೆ ಇತ್ತೀಚೆಗಷ್ಟೇ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರವಾಗಿ ಹೊರಹೊಮ್ಮಿದೆ.

1993 ರಲ್ಲಿ ಭಾರತ ಅತಿ ಕನಿಷ್ಠ ಆರ್ಥಿಕ ಬಿಕ್ಕಟ್ಟನ್ನು ದಾಖಲಿಸಿತ್ತು. ಅದು ಶೇಕಡಾ 1 ರಷ್ಟನ್ನು ತಲುಪಿತ್ತು. ಅದಾದ ಬಳಿಕ ಬಳಿಕ ದೇಶ ಹಿಂತಿರುಗಿ ನೋಡದೇ ಬಲಿಷ್ಠವಾಗಿ ಬೆಳೆಯುತ್ತಿದೆ. ಅಲ್ಲಿಂದೀಚೆಗೆ ವೇಗವಾಗಿ ಬೆಳೆದಿದೆ. 2014 ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಇದು ದುಪ್ಪಟ್ಟಾಗಿದೆ. ಭಾರತವು ಜಾಗತಿಕ ಜಿಡಿಪಿ ದರದಲ್ಲಿ ಶೇಕಡಾ 3.6 ರಷ್ಟು ಹೊಂದಿದೆ. 2000 ರ ಇಸ್ವಿಯಲ್ಲಿ ಚೀನಾ ಕೂಡ ಇಷ್ಟೇ ಪ್ರಗತಿಯನ್ನು ಸಾಧಿಸಿತ್ತು.

ಐಎಂಎಫ್​ ಪ್ರಕಾರ, 2028 ರ ವೇಳೆಗೆ ಜರ್ಮನಿ ಮತ್ತು ಜಪಾನ್ ಎರಡನ್ನೂ ಹಿಂದಿಕ್ಕಿ ಶೇಕಡಾ 4.2 ರಷ್ಟು ಆರ್ಥಿಕ ಪ್ರಗತಿಯನ್ನು ಸಾಧಿಸಲಿದೆ. ಅದರ ಷೇರು ಮಾರುಕಟ್ಟೆಯು ಅಮೆರಿಕ, ಚೀನಾ ಮತ್ತು ಜಪಾನ್‌ನ ನಂತರ ನಾಲ್ಕನೇ ಅತಿ ದೊಡ್ಡದಾಗಿದೆ. ಜಿಡಿಪಿಗೆ ಸಂಬಂಧಿಸಿದಂತೆ ಅದರ ವಾರ್ಷಿಕ ಸರಕು ಮತ್ತು ಸೇವೆಗಳ ರಫ್ತು ದಾಖಲೆಯ ಮಟ್ಟದಲ್ಲಿದೆ. ಕಳೆದೊಂದು ದಶಕದಲ್ಲಿ ಇದು 73 ಪ್ರತಿಶತದಷ್ಟು ಬೆಳೆದಿದೆ. ಜಾಗತಿಕ ರಫ್ತಿನಲ್ಲಿ ಭಾರತದ ಪಾಲು 2012 ರಲ್ಲಿ ಶೇಕಡಾ 1.9 ರಷ್ಟಿದ್ದರೆ, 2022 ರಲ್ಲಿ 2.4 ಕ್ಕೆ ತಲುಪಿದೆ. ಇದು ಅದರ ಆರ್ಥಿಕ ಶಕ್ತಿಯನ್ನು ತೋರಿಸುತ್ತದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: ಬೆಂಗಳೂರು - ಧಾರವಾಡ ವಂದೇ ಭಾರತ್‌ ರೈಲು ಪ್ರಾಯೋಗಿಕ ಓಡಾಟ ಪ್ರಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.