ETV Bharat / business

ಆನ್‌ಲೈನ್ ಸ್ಟ್ರೀಮಿಂಗ್ ಸೇವೆ ವಿರುದ್ಧ ಕೆನಡಾ ನೂತನ ಆದೇಶ.. ಟ್ರುಡೊ ವಿರುದ್ಧ ಆಕ್ರೋಶ ಹೊರ ಹಾಕಿದ ಮಸ್ಕ್​

ಸ್ಪೇಸ್‌ಎಕ್ಸ್ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್ ಅವರು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಗುರಿಯಾಗಿಸಿದ್ದಾರೆ, ಅವರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Trudeau is trying to crush free speech  Musk barb at Justin Trudeau  repressive online censorship  ಸ್ಟ್ರೀಮಿಂಗ್ ಸೇವೆ ವಿರುದ್ಧ ಕೆನಡಾ ನೂತನ ಆದೇಶ  ಟ್ರುಡೊ ವಿರುದ್ಧ ಆಕ್ರೋಶ ಹೊರ ಹಾಕಿದ ಮಸ್ಕ್​ ಸ್ಪೇಸ್‌ಎಕ್ಸ್ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್  ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ  ಕೆನಡಾದ ಜಸ್ಟಿನ್ ಟ್ರುಡೊ ಸರ್ಕಾರ  ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ  ಆನ್‌ಲೈನ್ ಸ್ಟ್ರೀಮಿಂಗ್ ಸೇವೆಗಳ ನಿಯಂತ್ರಣ  ವಿಶ್ವದ ಅತ್ಯಂತ ದಮನಕಾರಿ ಆನ್‌ಲೈನ್ ಸೆನ್ಸಾರ್‌ಶಿಪ್ ಯೋಜನೆ
ಟ್ರುಡೊ ವಿರುದ್ಧ ಆಕ್ರೋಶ ಹೊರ ಹಾಕಿದ ಮಸ್ಕ್​
author img

By ETV Bharat Karnataka Team

Published : Oct 2, 2023, 9:58 AM IST

ಒಟ್ಟಾವಾ, ಕೆನಡಾ: ಕೆನಡಾದ ಜಸ್ಟಿನ್ ಟ್ರುಡೊ ಸರ್ಕಾರವು ಆದೇಶವೊಂದನ್ನು ಮಾಡಿದೆ. ಈ ಆದೇಶದ ವಿರುದ್ಧ ಎಕ್ಸ್​​​​​​​​​​​ ಮಾಲೀಕ ಮಸ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆನಡಾ ಸರ್ಕಾರದ ಆದೇಶ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂದು ಸ್ಪೇಸ್‌ಎಕ್ಸ್ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್ ಆರೋಪಿಸಿದ್ದಾರೆ. ಆನ್‌ಲೈನ್ ಸ್ಟ್ರೀಮಿಂಗ್ ಸೇವೆಗಳ ನಿಯಂತ್ರಣಕ್ಕಾಗಿ ಸರ್ಕಾರದೊಂದಿಗೆ ಔಪಚಾರಿಕವಾಗಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಕೆನಡಾ ಸರ್ಕಾರವು ಇತ್ತೀಚೆಗೆ ಆದೇಶದಲ್ಲಿ ಹೇಳಿದೆ. ಈ ಆದೇಶದ ಬಳಿಕ ಎಲೋನ್​ ಮಸ್ಕ್​ ಅವರ ಈ ಹೇಳಿಕೆ ಹೊರ ಬಿದ್ದಿದೆ.

ಟ್ರೂಡೊ ಕೆನಡಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಎಂದು ಮಸ್ಕ್ ತಮ್ಮ ಎಕ್ಸ್​ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ. ನಿಯಂತ್ರಕ ನಿಯಂತ್ರಣಕ್ಕಾಗಿ ನೋಂದಣಿ ಕುರಿತು ಕೆನಡಾದ ಸರ್ಕಾರದ ಮಾತುಗಳ ವಿರುದ್ಧ ಮಸ್ಕ್ ಆಕ್ರೋಶ ವ್ಯಕ್ತಪಡಿಸಿದ್ದು, ಈ ಆದೇಶವನ್ನು ಅವರು ವಿರೋಧಿಸಿದ್ದಾರೆ.

ವಿಶ್ವದ ಅತ್ಯಂತ ದಮನಕಾರಿ ಆನ್‌ಲೈನ್ ಸೆನ್ಸಾರ್‌ಶಿಪ್ ಯೋಜನೆಗಳಲ್ಲಿ ಒಂದನ್ನು ಹೊಂದಿರುವ ಕೆನಡಾ ಸರ್ಕಾರವು, ಪಾಡ್‌ಕಾಸ್ಟ್‌ಗಳನ್ನು ನೀಡುವ ಎಲ್ಲಾ ಆನ್‌ಲೈನ್ ಸ್ಟ್ರೀಮಿಂಗ್ ಸೇವೆಗಳು ನಿಯಂತ್ರಣವನ್ನು ನೀಡಲು ಸರ್ಕಾರದೊಂದಿಗೆ ಔಪಚಾರಿಕವಾಗಿ ನೋಂದಾಯಿಸಿಕೊಳ್ಳುವ ಅಗತ್ಯವಿದೆ ಎಂದು ಘೋಷಿಸಿದೆ ಅಂತಾ ಗ್ರೀನ್ವಾಲ್ಡ್ ಎಕ್ಸ್​ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಗ್ರೀನ್ವಾಲ್ಡ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಎಲೋನ್ ಮಸ್ಕ್, ಟ್ರೂಡೊ ಕೆನಡಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ರೂಡೊ ಸರ್ಕಾರವು ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಕೆಲಸ ಮಾಡುತ್ತಿದೆ ಎಂದು ಆರೋಪಿಸುತ್ತಿರುವುದು ಇದೇ ಮೊದಲಲ್ಲ. ಫೆಬ್ರವರಿ 2022 ರಲ್ಲಿ, ಟ್ರೂಡೊ ಅವರು ಟ್ರಕ್ ಚಾಲಕರ ಪ್ರತಿಭಟನೆಗಳಿಗೆ ಪ್ರತಿಕ್ರಿಯಿಸಲು ತಮ್ಮ ಸರ್ಕಾರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡಲು ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ತುರ್ತು ಅಧಿಕಾರವನ್ನು ಬಳಸಿರುವುದರ ಬಗ್ಗೆ ಗಮನಾರ್ಹ.

ಈ ಹಿಂದೆ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಕೆನಡಾದ ಪ್ರಧಾನಿ ಟ್ರುಡೊ ಆರೋಪಿಸಿದಾಗ ಕೋಲಾಹಲ ಉಂಟಾಗಿತ್ತು. ಆದ್ರೂ ಭಾರತವು ಅವರ ಹೇಳಿಕೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು ಮತ್ತು ಅವುಗಳನ್ನು 'ಅಸಂಬದ್ಧ' ಮತ್ತು 'ಪ್ರಚೋದಿತ' ಎಂದು ಕರೆಯಿತು. ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಹೇಳಿಕೆಯನ್ನು ಬೆಂಬಲಿಸಲು ಕೆನಡಾ ಇನ್ನೂ ಯಾವುದೇ ಪುರಾವೆಗಳನ್ನು ಒದಗಿಸಿಲ್ಲ. ಸಾಕ್ಷ್ಯಾಧಾರಗಳಿದ್ದರೆ ಕೆನಡಾ ಸರ್ಕಾರ ತೋರಿಸಲಿ ಎಂದು ಭಾರತ ಈಗಾಗಲೇ ಹೇಳಿದೆ.

ಸುಳ್ಳು ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಭಾರತವು ಕೆನಡಾದಲ್ಲಿ ತನ್ನ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದೆ. ಹದಗೆಟ್ಟ ಸಂಬಂಧಗಳ ಮಧ್ಯೆ ಭಾರತವು ತನ್ನ ನಾಗರಿಕರಿಗೆ, ಕೆನಡಾಕ್ಕೆ ಪ್ರಯಾಣಿಸುವ ಜನರಿಗೆ ಹೆಚ್ಚುತ್ತಿರುವ ಭಾರತ ವಿರೋಧಿ ಚಟುವಟಿಕೆಗಳು, ರಾಜಕೀಯವಾಗಿ ಬೆಂಬಲಿಸುವ ದ್ವೇಷದ ಅಪರಾಧಗಳು, ದೇಶದಲ್ಲಿ ಅಪರಾಧ ಹಿಂಸಾಚಾರದ ದೃಷ್ಟಿಯಿಂದ ತೀವ್ರ ಎಚ್ಚರಿಕೆಯನ್ನು ವಹಿಸಲು ಸಲಹೆ ನೀಡಿದೆ.

ಓದಿ: ಅಮೆರಿಕದಲ್ಲಿ ವಿಶ್ವ ಸಂಸ್ಕೃತಿ ಉತ್ಸವ: 180 ರಾಷ್ಟ್ರಗಳು, 17 ಸಾವಿರ ಕಲಾವಿದರಿಂದ ಸಾಂಸ್ಕೃತಿಕ ವೈಭವ, ಗಣ್ಯಾತಿಗಣ್ಯರು ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.