ETV Bharat / business

ಪ್ರಯಾಣ ವಿಮೆ ನಿಮ್ಮ ಲ್ಯಾಪ್​ಟಾಪ್​​, ಮೊಬೈಲ್​​​​​ ನಷ್ಟವನ್ನು ಒಳಗೊಂಡಿದೆ.. ಟ್ರಾವೆಲ್​​​​​​​ ಇನ್ಶೂರೆನ್ಸ್​ ಏಕೆ ಬೇಕು?

ವಿದೇಶಿ ಪ್ರಯಾಣದ ವೇಳೆ, ವೈದ್ಯಕೀಯ ತುರ್ತುಸ್ಥಿತಿ, ವಿಮಾನ ವಿಳಂಬ, ಸಲಕರಣೆಗಳ ನಷ್ಟ, ಪಾಸ್‌ಪೋರ್ಟ್, ಸಾಹಸ ಕ್ರೀಡೆಗಳು ಮತ್ತು ಮುಂತಾದವುಗಳ ಬಗ್ಗೆ ವಿಮೆ ಮಾಡಿಕೊಳ್ಳುವುದು ಅತ್ಯಂತ ಸುರಕ್ಷಿತ. ನೀವು ಲ್ಯಾಪ್​​ಟಾಪ್​, ಮೊಬೈಲ್ ಮತ್ತು ಮೌಲ್ಯಯುತ ದಾಖಲೆಗಳಿಗೂ ವಿಮೆ ಮಾಡಬಹುದು. ಕೆಲವು ದೇಶಗಳಿಗೆ ಪ್ರಯಾಣ ಬೆಳೆಸಬೇಕಾದರೆ ವಿಮೆ ಮಾಡಿಸುವುದು ಕಡ್ಡಾಯ.

Travel insurance makes your foreign trip smooth and memorable
ಪ್ರಯಾಣ ವಿಮೆ ನಿಮ್ಮ ಲ್ಯಾಪ್​ಟಾಪ್​​, ಮೊಬೈಲ್​​​​​ ನಷ್ಟವನ್ನು ಒಳಗೊಂಡಿದೆ.. ಟ್ರಾವೆಲ್ಸ್​​​​ ಇನ್ಶೂರೆನ್ಸ್​ ಏಕೆ ಬೇಕು?
author img

By

Published : Feb 24, 2023, 8:58 AM IST

Updated : Feb 24, 2023, 9:58 AM IST

ಹೈದರಾಬಾದ್: ಸಮಸ್ಯೆ ಮುಕ್ತ ವಿದೇಶ ಪ್ರವಾಸಕ್ಕಾಗಿ ನೀವು ಮುಂಚಿತವಾಗಿ ಯೋಜಿಸಬೇಕು. ವಿದೇಶ ಪ್ರವಾಸವು ಹೊಸ ಸಂಸ್ಕೃತಿ ಮತ್ತು ಅಲ್ಲಿನ ಆಹಾರ ಪದ್ಧತಿಗಳನ್ನು ಅನ್ವೇಷಿಸಲು ನಿಮಗೆ ಸಹಾಯ ಮಾಡುತ್ತದೆ. ಅನೇಕ ಅನುಭವಗಳನ್ನು ಹೊಂದುವುದರ ಜೊತೆಗೆ ಹೊಸ ದೃಷ್ಟಿಕೋನವನ್ನು ನೀಡುತ್ತದೆ. ನೀವು ವಿದೇಶಕ್ಕೆ ಹೋಗಲು ಬಯಸಿದಾಗ, ವೀಸಾ, ಟಿಕೆಟ್‌ಗಳು, ವಸತಿ ಹೀಗೆ ಪ್ರತಿಯೊಂದು ಅಂಶದಲ್ಲೂ ಯೋಜನೆ ಮಾಡಬೇಕಾಗುತ್ತದೆ. ಮತ್ತೊಂದು ಪ್ರಮುಖ ವಿಷಯವೆಂದರೆ ಪ್ರಯಾಣ ವಿಮೆ. ಹೌದು ಎಲ್ಲ ಪ್ರವಾಸಿಗರು ವಿದೇಶ ಪ್ರವಾಸವನ್ನು ಕೈಗೊಳ್ಳುವ ಮೊದಲು ಸಂಪೂರ್ಣ ವಿಮೆ ಮಾಡಿಸಿಕೊಳ್ಳುವುದು ಹೆಚ್ಚು ಸುರಕ್ಷಿತ.

ವೈದ್ಯಕೀಯ ತುರ್ತುಸ್ಥಿತಿ: ವಿದೇಶ ಪ್ರವಾಸದ ಸಂದರ್ಭದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾಗುವ ವಿಚಾರ ಸ್ವಲ್ಪ ಆತಂಕಕಾರಿಯೂ ಹೌದು. ನಮಗೆ ಅರಿವಿಲ್ಲದ ಸ್ಥಳದಲ್ಲಿ ಅನಾರೋಗ್ಯಕ್ಕೆ ಒಳಗಾದರೆ ಅದು ನಿಮ್ಮ ಮನಸ್ಥಿತಿಯನ್ನು ಹಾಳುಮಾಡುತ್ತದೆ. ಮಾತ್ರವಲ್ಲದೇ ನಿಮ್ಮ ಜೇಬಿನ ಮೇಲೆ ಹೊರೆಯನ್ನೂ ಹಾಕುತ್ತದೆ. ಅಂತಹ ಸಮಯದಲ್ಲಿ ಪ್ರಯಾಣ ವಿಮೆ ಸಹಾಯ ಮಾಡಬಹುದು. ಅನಾರೋಗ್ಯದ ಸಂದರ್ಭದಲ್ಲಿ ವಿಮೆ ಇದ್ದರೆ ವೈದ್ಯಕೀಯ ವೆಚ್ಚವನ್ನು ಭರಿಸಲು ಸಹಾಯ ಮಾಡುತ್ತದೆ. ತುರ್ತು ಶಸ್ತ್ರಚಿಕಿತ್ಸೆಗಳು ಮತ್ತು ಇತರ ವೈದ್ಯಕೀಯ ಅಗತ್ಯಗಳ ಜೊತೆಗೆ ಅಪಘಾತಗಳಿಗೆ ಪರಿಹಾರವನ್ನು ಈ ನೀತಿಯೂ ಒದಗಿಸುತ್ತದೆ.

ವಿಮಾನ ವಿಳಂಬ: ಯಾವುದೇ ಕಾರಣದಿಂದ ವಿಮೆಯಲ್ಲಿ ನಿರ್ದಿಷ್ಟಪಡಿಸಿದ ಕನಿಷ್ಟ ನಿಗದಿತ ಮೀರಿ ವಿಮಾನ ಪ್ರಯಾಣವು ವಿಳಂಬವಾದಾಗ ವಿವಿಧ ವೆಚ್ಚಗಳಿಗಾಗಿ ವಿಮೆ ನಿಮಗೆ ನಿರ್ದಿಷ್ಟ ಮೊತ್ತವನ್ನು ಪಾವತಿಸುತ್ತದೆ. ಇದು ಊಟ ಮತ್ತು ಇತರ ಅಗತ್ಯ ವೆಚ್ಚಗಳನ್ನು ಒಳಗೊಂಡಿರುತ್ತದೆ. ಈ ವೆಚ್ಚಗಳನ್ನು ಪಾಲಿಸಿದಾರರು ಮುಂಗಡವಾಗಿ ಭರಿಸಬೇಕಾಗುತ್ತದೆ. ನಂತರ ಸಂಬಂಧಿತ ಬಿಲ್‌ಗಳನ್ನು ವಿಮಾ ಕಂಪನಿಗೆ ಸಲ್ಲಿಸಬಹುದು ಮತ್ತು ವೆಚ್ಚವನ್ನು ಮರು ಪಡೆಯಬಹುದು.

ಸಲಕರಣೆ: ಪ್ರಯಾಣ ಮಾಡುವಾಗ ಬ್ಯಾಗ್​ ಮರೆಯುವುದು, ಇತರ ವಸ್ತುಗಳನ್ನು ಕಳೆದುಕೊಳ್ಳುವುದು ಸಮಾನ್ಯವಾಗಿ ಕಂಡು ಬರುತ್ತದೆ. ಇದು ನಿಮ್ಮ ಯೋಜನೆಗಳಿಗೆ ಅಡ್ಡಿಯಾಗುವುದಲ್ಲದೇ, ಬಜೆಟ್‌ನ ಮೇಲೂ ಪರಿಣಾಮ ಬೀರುತ್ತದೆ. ಹೊಸ ನಗರಕ್ಕೆ ಕಾಲಿಟ್ಟರು. ಹೊಸ ವಿಷಯಗಳನ್ನು ಕಲಿಯಲು ಹೋದರು. ಆದರೆ, ನಿಮ್ಮ ಉಪಕರಣಗಳು ಇನ್ನೂ ಬಂದಿಲ್ಲ ಎಂದು ಭಾವಿಸೋಣ. ಇದು ಒಂದು ಸಮಸ್ಯೆ ಅಲ್ಲವೇ? ಅಂತಹ ಸಂದರ್ಭಗಳಲ್ಲಿ ಪಾಲಿಸಿಯು ಖರೀದಿಯ ಮೇಲೆ ಈ ಮೊತ್ತವನ್ನು ನಿಮಗೆ ಮರುಪಾವತಿ ಮಾಡುತ್ತದೆ.

ಪಾಸ್‌ಪೋರ್ಟ್ ಕಳೆದರೆ : ವಿದೇಶದಲ್ಲಿ ಎಲ್ಲವೂ ಸರಿಯಾಗಿದ್ದಾಗ ನಾವು ಪ್ರಯಾಣವನ್ನು ಆನಂದಿಸಬಹುದು. ನಿಮ್ಮ ವಿದೇಶಿ ಪ್ರಯಾಣದಲ್ಲಿ ಪಾಸ್‌ಪೋರ್ಟ್ ಪ್ರಮುಖ ದಾಖಲೆಯಾಗಿದೆ. ಇದನ್ನು ಯಾವಾಗಲೂ ನೆನಪಿನಲ್ಲಿಡಿ. ಅನಿವಾರ್ಯ ಸಂದರ್ಭಗಳಲ್ಲಿ ಇದು ಗೋಚರಿಸದಿದ್ದರೆ, ಅದು ಕೆಲವು ಸಮಸ್ಯೆಗಳಿಗೆ ಮತ್ತು ಹೆಚ್ಚುವರಿ ವೆಚ್ಚಗಳಿಗೆ ಕಾರಣವಾಗುತ್ತದೆ. ಟ್ರಾವೆಲ್ ಇನ್ಶೂರೆನ್ಸ್, ಪಾಸ್‌ಪೋರ್ಟ್ ಡೂಪ್ಲಿಕೇಟ್​ ಕಾಪಿ ಪಡೆಯಲು ನೀವು ಮಾಡುವ ವೆಚ್ಚವನ್ನು ಭರಿಸಬಹುದು.

ಪ್ರವಾಸ ಮೊಟಕುಗೊಳಿಸುವ ಸಂದರ್ಭ ಬಂದರೆ: ಹತ್ತಿರದ ಸಂಬಂಧಿಯ ಮರಣ, ಅಥವಾ ಅಪಘಾತ, ವೈಯಕ್ತಿಕ ಆರೋಗ್ಯ ಸಮಸ್ಯೆಗಳು ಇತ್ಯಾದಿಗಳ ಕಾರಣದಿಂದ ನಿಮ್ಮ ಪ್ರವಾಸವನ್ನು ರದ್ದುಗೊಳಿಸಬೇಕಾಗಬಹುದು ಅಥವಾ ಮೊಟಕುಗೊಳಿಸಬೇಕಾಗಬಹುದು. ಅಂತಹ ಸಂದರ್ಭಗಳಲ್ಲಿ ಪ್ರಯಾಣ ವಿಮೆಯು ಮರುಪಾವತಿ ಮಾಡದ ವೆಚ್ಚಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯವಾಗಿ, ಹೋಟೆಲ್ ಬುಕಿಂಗ್ ಮತ್ತು ಫ್ಲೈಟ್ ಟಿಕೆಟ್‌ಗಳನ್ನು ಮರುಪಾವತಿಸಲಾಗುವುದಿಲ್ಲ. ಅಂತಹ ವೆಚ್ಚಗಳನ್ನು ವಿಮಾ ಪಾಲಿಸಿಯಿಂದ ಮರುಪಡೆಯಬಹುದು. ಈ ಪ್ರಮಾಣಿತ ರಕ್ಷಣೆಗಳ ಹೊರತಾಗಿ, ಪ್ರಯಾಣ ವಿಮೆಯು ಲ್ಯಾಪ್‌ಟಾಪ್, ಮೊಬೈಲ್, ಬೆಲೆಬಾಳುವ ದಾಖಲೆಗಳು ಮತ್ತು ವಸ್ತುಗಳ ನಷ್ಟವನ್ನೂ ಒಳಗೊಂಡಿರುತ್ತದೆ. ಸಾಹಸ ಕ್ರೀಡೆಗಳಂತಹ ಕೆಲವು ಆಡ್ - ಆನ್ ಕವರ್‌ಗಳು ಸಹ ವಿಮೆಯಲ್ಲಿ ಲಭ್ಯವಿದೆ. ಕೆಲವು ದೇಶಗಳಲ್ಲಿ ಪ್ರಯಾಣಿಸಲು ಪ್ರಯಾಣ ವಿಮೆ ಕಡ್ಡಾಯವಾಗಿದೆ.

ಇದನ್ನು ಓದಿ: ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಬಂಗಾ ಹೆಸರು ಶಿಫಾರಸು ಮಾಡಿದ ಜೋ ಬೈಡನ್

Last Updated : Feb 24, 2023, 9:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.