ಆಗ್ರಾ( ಉತ್ತರಪ್ರದೇಶ): ಕೋವಿಡ್ ಲಾಕ್ಡೌನ್ನಲ್ಲಿ ಕೆಲಸ ಕಳೆದುಕೊಂಡವರ ಸಾಲಿನಲ್ಲಿ ಉತ್ತರ ಪ್ರದೇಶದ ಆಗ್ರಾದ ಯುವ ಸಹೋದರರು ಕೂಡ ಇದ್ದಾರೆ. ಫುಡ್ ಪ್ರೊಸೆಸಿಂಗ್ ಮತ್ತು ಡೈರಿ ಟೆಕ್ನಾಲಾಜಿಯಲ್ಲಿ ಪದವಿ ಪಡೆದ ಅವರು, ತಮ್ಮದೇ ಆದ ಐಸ್ ಕ್ರೀಂ ಸ್ಟಾರ್ಟ್ಅಪ್ ಸ್ಥಾಪಿಸಿದ್ದು, ಇದೀಗ ಜನಮೆಚ್ಚುಗೆ ಪಡೆದಿದ್ದಾರೆ. ತಮ್ಮ ವಿಭಿನ್ನ ಶೈಲಿಯ ಆಲೋಚನೆ ಜೊತೆಗೆ ಶ್ರಮದಾಯಕದ ಬದಕು ಅವರಿಗೆ ಯಶಸ್ಸು ತಂದು ಕೊಟ್ಟಿದೆ.
ಅದರಲ್ಲೂ ಕೇಂದ್ರ ಸರ್ಕಾರ ಸಿರಿಧಾನ್ಯಗಳಿಗೆ ಬಜೆಟ್ನಲ್ಲಿ ಒತ್ತು ನೀಡಿ ಶ್ರೀ ಅನ್ನ ಯೋಜನೆ ಘೋಷಿಸುತ್ತಿದ್ದಂತೆ, ಸ್ಪೂರ್ತಿಗೊಂಡ ಇವರು ಬಂಜ್ರಾ ಬಳಕೆಯನ್ನು ಮಾಡುವ ಮೂಲಕ ಹೊಸ ರುಚಿಯ ಆರೋಗ್ಯಕರ ಬಂಜ್ರಾ ಕುಲ್ಫಿಯನ್ನು ತಯಾರಿಸಿ, ಎಲ್ಲರಿಂದ ಮೆಚ್ಚುಗೆ ಪಡೆದಿದ್ದಾರೆ.
ಸಿರಿಧಾನ್ಯದಲ್ಲಿ ಕುಲ್ಫಿ: ಮಿಲೆಟ್ನ ಮಹತ್ವ ಅರಿತ ಇವರು ಇದರಲ್ಲೇ ಕುಲ್ಫಿ ತಯಾರಿಸಲು ಈ ಯೋಜನೆ ರೂಪಿಸಿದ್ದರಂತೆ, ಇದರ ಪರಿಣಾಮ ಅವರು ರಾಗಿ ಮತ್ತು ಸಿರಿಧಾನ್ಯದಲ್ಲಿ ಕುಲ್ಫಿ ತಯಾರಿಸಲು ಮುಂದಾದರಂತೆ. ಇದರಿಂದಾಗಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಐಸ್ಕ್ರೀಂ ಮತ್ತು ಕಲ್ಫಿಯನ್ನು ಜನರಿಗೆ ನೀಡಲಾಗುತ್ತಿದೆ ಎನ್ನುತ್ತಾರೆ ಈ ಸಹೋದರರು.
ಸದ್ಯ ಈ ಸಿರಿಧಾನ್ಯದ ಕುಲ್ಫಿ ತಯಾರಿಸಿದ ಕೀರ್ತಿ ಆಗ್ರಾದ ಕುಂದೌಲ್ ಗ್ರಾಮದ ವಿವೇಕ್ ಉಪಾದ್ಯಾಯ ಮತ್ತು ಗಗನ್ ಉಪಾಧ್ಯಾಯಗೆ ಸಲ್ಲುತ್ತದೆ. ಆಹಾರ ಪ್ರಕ್ರಿಯೆ ಮತ್ತು ಡೈರಿ ತಂತ್ರಜ್ಞಾನದಲ್ಲಿ ಪದವಿ ಪಡೆದ ಅವರು, ಐಸ್ಕ್ರೀಂ ಕಂಪನಿಯಲ್ಲಿ ಕೆಲಸ ಆರಂಭಿಸಿದರು. ಎಲ್ಲವೂ ಸರಿಯಿದೆ ಎನ್ನುವಾಗ 2020ರಲ್ಲಿ ಕೋವಿಡ್ ಮೊದಲ ಲಾಕ್ಡೌನ್ನಲ್ಲಿ ಕೆಲಸ ಕಳೆದುಕೊಂಡು ಗ್ರಾಮಕ್ಕೆ ಮರಳಿದರು. ಈ ವೇಳೆ ಅವರು 2020ರ ವರ್ಷಾಂತ್ಯದಲ್ಲಿ ಐಸ್ಕ್ರೀಂ ಮತ್ತು ಕುಲ್ಫಿ ಉದ್ಯಮ ಆರಂಭಿಸಿದರು. ಇದಾದ ಬಳಿಕ ಎರಡನೇ ಕೋವಿಡ್ ಲಾಕ್ಡೌನ್ ನಿಂದ ಇವರ ಉದ್ಯಮಕ್ಕೆ ಹೊಡೆತ ಬಿದ್ದಿದ್ದು ಸುಳ್ಳಲ್ಲ. ಆದರೂ ದೃತಿಗೆಡದ ಅವರು, ಈ ಸಮಯದಲ್ಲಿ ಕುಲ್ಫಿಗಳ ಸ್ವಾದ ಹೆಚ್ಚಿಸಲು ಗಮನ ನೀಡಿ, ಮತ್ತೆ ಜನರ ಮುಂದೆ ಬಂದಿದ್ದಾರೆ.
35 ಜನರಿಗೆ ಉದ್ಯೋಗ: ಕೆಲಸ ಕಳೆದುಕೊಂಡ ಇವರಿಗೆ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಆಹ್ವಾನಿಸಲಾಯಿತಂತೆ. ಇದರಿಂದ ಅವರು ತಮ್ಮ ಪದವಿ, ಅನುಭವ ಬಳಸಿಕೊಂಡು ಐಸ್ಕ್ರೀಂ ಉದ್ಯಮ ಆರಂಭಕ್ಕೆ ಚಿಂತಿಸಿದ್ದರಂತೆ. ಐಸ್ಕ್ರೀಂ ಉದ್ಯಮದ ಆರಂಭಕ್ಕೂ ಮುನ್ನ ಮಾರುಕಟ್ಟೆ ಸಂಬಂಧ ಕೂಡ ಅಧ್ಯಯನ ನಡೆಸಿದೆವು. ಸಹೋದರರಾದ ನಾವೇ ಅನೇಕ ಪ್ರಯೋಗ ನಡೆಸಿ, ಯಶಸ್ವಿಯಾದೆವು. ಇದೀಗ 35 ಮಂದಿಗೆ ಉದ್ಯೋಗ ಕೊಟ್ಟಿದ್ದೇವೆ.
45 ಲಕ್ಷ ದಾಟಿದ ವಹಿವಾಟು: ಪ್ರಧಾನ ಮಂತ್ರಿ ಅವರು ಬಜೆಟ್ನಲ್ಲಿ ಶ್ರೀ ಅನ್ನ ಯೋಜನಾ ಘೋಷಣೆಯುಂದ ಉತ್ತೇಜನ ಕೊಂಡು ಸಿರಿಧಾನ್ಯಗಳಲ್ಲೂ ನಾವು ಐಸ್ಕ್ರೀಂ, ಕುಲ್ಫಿ ಮಾಡಲು ತಯಾರಿಸಿದೆವು. ಸಿರಿಧಾನ್ಯಕ್ಕೆ ಹಾಲು ತುಪ್ಪ ಬೆರಸಿ ಐಸ್ ಕ್ರೀಂ ತಯಾರಿಸಿದ್ದೇವೆ. ಅದರಲ್ಲೂ ಬಜ್ರಾ ಕುಲ್ಫಿ ಹೆಚ್ಚು ಜನಪ್ರಿಯಗೊಂಡಿದೆ. ರುಚಿ ಮತ್ತು ಆರೋಗ್ಯದ ದೃಷ್ಟಿಯಿಂದ ಕೂಡ ಇದು ಲಾಭದಾಯಕ. ಸದ್ಯ ಈ ಕುಲ್ಫಿಗೆ ಕೇವಲ 10 ರೂ ನಿಗದಿ ಮಾಡಿದ್ದೇವೆ. ಬೇಸಿಗೆ ಹಿನ್ನೆಲೆ ರಾಗಿ, ಬಾರ್ಲಿ ಕುಲ್ಫಿ ತಯಾರಿಕೆಗೂ ಮುಂದಾಗಿದ್ದೇವೆ. 15 ಲಕ್ಷದಲ್ಲಿ ಆರಂಭಿಸಿದ ಉದ್ಯಮ ಇಂದು 45 ಲಕ್ಷ ವಹಿವಾಟು ಆಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಶೋಷಣೆಗೊಳಗಾದ ಮಹಿಳೆಯರ ಪಾಲಿಗೆ ಆಶಾಕಿರಣ: ಸ್ವಾವಲಂಬಿ ಜೀವನದ ದಾರಿ ತೋರಿದ ಹೇಮಲತಾ