ETV Bharat / business

Startup Funding ಕುಸಿತ; ಜಾಗತಿಕವಾಗಿ ಹೊಸ Unicorn ಸಂಖ್ಯೆ ಶೇ 80ರಷ್ಟು ಇಳಿಕೆ

author img

By

Published : Jul 31, 2023, 6:33 PM IST

Startup Funding: ಜಾಗತಿಕವಾಗಿ ಆರಂಭವಾಗುತ್ತಿರುವ ಯುನಿಕಾರ್ನ್​ ಸ್ಟಾರ್ಟಪ್​ಗಳ ಸಂಖ್ಯೆ ಗಣನೀಯವಾಗಿ ಕುಸಿತವಾಗಿದೆ. ವೆಂಚರ್​ ಕ್ಯಾಪಿಟಲಿಸ್ಟ್​ಗಳು ಸ್ಟಾರ್ಟಪ್​ಗಳತ್ತ ಒಲವು ಕಡಿಮೆ ಮಾಡಿರುವುದೇ ಇದಕ್ಕೆ ಕಾರಣವಾಗಿದೆ.

New unicorns dry up globally
New unicorns dry up globally

ನವದೆಹಲಿ : 2021 ರಲ್ಲಿ ಜಾಗತಿಕವಾಗಿ ಹೊಸದಾಗಿ ಆರಂಭವಾದ ಸ್ಟಾರ್ಟಪ್​ ಅಥವಾ ಯುನಿಕಾರ್ನ್‌ ಕಂಪನಿಗಳ ಸಂಖ್ಯೆಯಲ್ಲಿ ಶೇಕಡಾ 80 ರಷ್ಟು ಕುಸಿತವಾಗಿದೆ ಎಂದು ಹೊಸ ವರದಿಯು ಬಹಿರಂಗಪಡಿಸಿದೆ. ಸ್ಟಾರ್ಟಪ್​ಗಳಿಗೆ ಫಂಡಿಂಗ್ ಪ್ರಮಾಣ ಕಡಿಮೆಯಾಗಿರುವುದು ಇದಕ್ಕೆ ಕಾರಣವಾಗಿದೆ. $ 1 ಬಿಲಿಯನ್ ಡಾಲರ್​ ಮತ್ತು ಅದಕ್ಕೂ ಹೆಚ್ಚಿನ ಮೂಲ ಬಂಡವಾಳದೊಂದಿಗೆ ಆರಂಭವಾಗುವ ಸ್ಟಾರ್ಟಪ್​ಗಳನ್ನು ಯುನಿಕಾರ್ನ್ ಎಂದು ಕರೆಯಲಾಗುತ್ತದೆ.

ಸ್ಟಾರ್ಟಪ್​ಗಳ ಬಗ್ಗೆ ಅಂಕಿ ಅಂಶ ನೀಡುವ ವಿಶ್ಲೇಷಕ ಸಂಸ್ಥೆ ಪಿಚ್‌ಬುಕ್ ಪ್ರಕಾರ, ವರ್ಷದ ಮೊದಲಾರ್ಧದಲ್ಲಿ ಹೊಸ ಯುನಿಕಾರ್ನ್‌ಗಳ ಸರಾಸರಿ ಮಾಸಿಕ ಸಂಖ್ಯೆ 7.3 ಕಂಪನಿಗಳಿಗೆ ಇಳಿದಿದೆ. ಇದು 2021 ರಲ್ಲಿ ದಾಖಲಾದ 50.5 ಕಂಪನಿಗಳ ಗರಿಷ್ಠದಿಂದ ಸುಮಾರು 80 ಪ್ರತಿಶತದಷ್ಟು ಕಡಿಮೆಯಾಗಿದೆ.

"ಯುಎಸ್‌ನಲ್ಲಿ ವೆಂಚರ್ ಕ್ಯಾಪಿಟಲಿಸ್ಟ್‌ಗಳು ತ್ವರಿತ ಲಾಭಕ್ಕಾಗಿ ಹೂಡಿಕೆ ಅವಕಾಶಗಳನ್ನು ಹುಡುಕುವ ಬದಲು ಭರವಸೆಯ ಕಂಪನಿಗಳನ್ನು ಕಂಡುಹಿಡಿಯುವ ಮತ್ತು ಪೋಷಿಸುವತ್ತ ಗಮನ ಹರಿಸಲು ಪ್ರಾರಂಭಿಸಿದ್ದಾರೆ" ಎಂದು ವರದಿ ಉಲ್ಲೇಖಿಸಿದೆ. ವೆಂಚರ್ ಕ್ಯಾಪಿಟಲಿಸ್ಟ್​ಗಳು ತ್ವರಿತ ಆದಾಯಕ್ಕಾಗಿ ಅವಕಾಶಗಳಿಗಾಗಿ ಕಾಯುವ ಬದಲು ಭರವಸೆಯ ಕಂಪನಿಗಳಲ್ಲಿ ಹೂಡಿಕೆ ಮಾಡಲು ತಮ್ಮ ಗಮನವನ್ನು ಬದಲಾಯಿಸಿದ್ದಾರೆ.

2023 ರ ಮೊದಲಾರ್ಧದಲ್ಲಿ ದೇಶದಲ್ಲಿ ಯಾವುದೇ ಹೊಸ ಯುನಿಕಾರ್ನ್ ಆರಂಭವಾಗದಿರುವುದು ಶೋಚನೀಯವಾಗಿದೆ. ಸ್ಟಾರ್ಟಪ್​​ ನಿಧಿಯು ಒಂದು ವರ್ಷದ ಹಿಂದಿಗೆ ಹೋಲಿಸಿದರೆ ಈ ವರ್ಷದ ಜನವರಿ-ಜೂನ್ ಅವಧಿಯಲ್ಲಿ ಶೇಕಡಾ 70 ಕ್ಕಿಂತ ಹೆಚ್ಚು ಕುಸಿದಿದೆ. ಮೊದಲ ಆರು ತಿಂಗಳುಗಳಲ್ಲಿ ಭಾರತೀಯ ಸ್ಟಾರ್ಟ್‌ಅಪ್‌ಗಳು ಕೇವಲ $5.48 ಶತಕೋಟಿ ಸಂಗ್ರಹಿಸಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸ್ಟಾರ್ಟಪ್​ಗಳು $19.5 ಶತಕೋಟಿ ಸಂಗ್ರಹಿಸಿದ್ದವು.

ಈ ವರ್ಷದ ಮೊದಲಾರ್ಧದಲ್ಲಿ ಸ್ಟಾರ್ಟ್‌ಅಪ್ ಇಕೊಸಿಸ್ಟಮ್ 546 ಡೀಲ್ ರೌಂಡ್ಸ್​ಗಳನ್ನು ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಒಟ್ಟು 1,570 ಡೀಲ್​ ರೌಂಡ್ಸ್​ಗೆ ಹೋಲಿಸಿದರೆ ಇದು ಗಮನಾರ್ಹ ಕುಸಿತವಾಗಿದೆ.

ಹಣಕಾಸು ವರ್ಷ 2016-17 ರವರೆಗೆ ಭಾರತದಲ್ಲಿ ಪ್ರತಿ ವರ್ಷ ಸುಮಾರು ಒಂದಾದರೂ ಭಾರತೀಯ ಯುನಿಕಾರ್ನ್ ಆರಂಭವಾಗಿವೆ. ಕಳೆದ ನಾಲ್ಕು ವರ್ಷಗಳಲ್ಲಿ (FY2017-18 ರಿಂದ), ಈ ಸಂಖ್ಯೆಯು ಗಮನಾರ್ಹವಾಗಿ ಹೆಚ್ಚುತ್ತಿದೆ. ಮೇ 31, 2023 ರಂತೆ ಭಾರತವು 108 ಯುನಿಕಾರ್ನ್‌ಗಳಿಗೆ ನೆಲೆಯಾಗಿದೆ ಮತ್ತು ಒಟ್ಟು $340.80 ಶತಕೋಟಿ ಮೌಲ್ಯವನ್ನು ಹೊಂದಿದೆ.

ಕೌಬಾಯ್ ವೆಂಚರ್ಸ್‌ನ ಸಂಸ್ಥಾಪಕ ಮತ್ತು ಸ್ವತಃ ವೆಂಚರ್ ಕ್ಯಾಪಿಟಲಿಸ್ಟ್​ ಆಗಿದ್ದ ಐಲೀನ್ ಲೀ ಅವರು 2013 ರಲ್ಲಿ 'ಯೂನಿಕಾರ್ನ್' ಪದವನ್ನು ಸೃಷ್ಟಿಸಿದರು. ಲೀ ಮೊದಲ ಬಾರಿಗೆ 'ಯುನಿಕಾರ್ನ್' ಪದವನ್ನು ಬ್ಲಾಗ್ ಪೋಸ್ಟ್‌ನಲ್ಲಿ ಬಳಸಿದರು. ಈ ಪದವು ಜನಪ್ರಿಯವಾಗಿ ವ್ಯಾಪಾರ ಮತ್ತು ಹಣಕಾಸು ಜಗತ್ತಿನಲ್ಲಿ ಅಂದಿನಿಂದಲೂ ಬಳಕೆಯಲ್ಲಿದೆ. ಇಂದು ಭಾರತ ಯುನಿಕಾರ್ನ್‌ಗಳ ದೇಶವಾಗಿ ಹೊರಹೊಮ್ಮುತ್ತಿದೆ. ವರದಿಗಳ ಪ್ರಕಾರ, ದೇಶವು 2025 ರ ವೇಳೆಗೆ 150 ಕ್ಕೂ ಹೆಚ್ಚು ಹೆಚ್ಚಿನ ಮೌಲ್ಯದ ಸ್ಟಾರ್ಟ್‌ಅಪ್‌ಗಳನ್ನು ಹೊಂದಬಹುದು.

ಇದನ್ನೂ ಓದಿ : Interest Rate: ಆ.8ರಿಂದ ಆರ್​ಬಿಐ ಎಂಪಿಸಿ ಸಭೆ; ಬಡ್ಡಿದರ ಯಥಾಸ್ಥಿತಿ ನಿರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.