ನವದೆಹಲಿ: ದೇಶದಲ್ಲಿ 5ಜಿ ಇಂಟರ್ನೆಟ್ಗೆ ಚಾಲನೆ ನೀಡಿರುವುದರಿಂದ 10 ಸಾವಿರ ರೂಪಾಯಿಕ್ಕಿಂತ ಹೆಚ್ಚಿನ ಬೆಲೆಯ 4ಜಿ ಫೋನ್‌ಗಳ ಉತ್ಪಾದನೆಯನ್ನು ಕ್ರಮೇಣ ಸ್ಥಗಿತಗೊಳಿಸಲಾಗುವುದು ಮತ್ತು ಈ ಮೊಬೈಲ್ಗಳನ್ನು 5ಜಿ ತಂತ್ರಜ್ಞಾನಕ್ಕೆ ಬದಲಾಯಿಸುವುದಾಗಿ ಮೊಬೈಲ್ ಫೋನ್ ತಯಾರಿಕಾ ಕಂಪನಿಗಳು ತಿಳಿಸಿವೆ.
ಇಂದು ದೂರಸಂಪರ್ಕ ಇಲಾಖೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಉನ್ನತ ಅಧಿಕಾರಿಗಳು ದೇಶದ ಮೊಬೈಲ್ ಆಪರೇಟರ್‌ಗಳು ಮತ್ತು ಸ್ಮಾರ್ಟ್‌ಫೋನ್ ತಯಾರಕರೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಮೂರು ತಿಂಗಳ ಕಾಲಮಿತಿಯೊಳಗೆ 5ಜಿ ಸ್ಮಾರ್ಟ್‌ಫೋನ್‌ನೊಂದಿಗೆ 5ಜಿ ಸೇವೆಗಳ ಸಿಗುವಂತೆ ಮಾಡಬೇಕೆಂದು ಸೂಚಿಸಲಾಯಿತು.
750 ಮಿಲಿಯನ್ ಮೊಬೈಲ್ ಫೋನ್ ಬಳಕೆದಾರರು: ಭಾರತವು ಸುಮಾರು 750 ಮಿಲಿಯನ್ ಮೊಬೈಲ್ ಫೋನ್ ಬಳಕೆದಾರರನ್ನು ಹೊಂದಿದೆ. ಸದ್ಯ 100 ಮಿಲಿಯನ್ ಜನರು 5ಜಿ ಸಿದ್ಧ ಫೋನ್‌ಗಳನ್ನು ಹೊಂದಿದ್ದಾರೆ. ಆದರೆ, 350 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು 3ಜಿ, 4ಜಿ ಹೊಂದಾಣಿಕೆಯ ಫೋನ್‌ಗಳನ್ನು ಬಳಸುತ್ತಾರೆ. ನಮ್ಮ ಕಂಪನಿ 10 ಸಾವಿರ ರೂಪಾಯಿಕ್ಕಿಂತ ಹೆಚ್ಚಿನ ಬೆಲೆಯ 3ಜಿ, 4ಜಿ ಹೊಂದಾಣಿಕೆಯ ಫೋನ್ ಅನ್ನು ಕ್ರಮೇಣ ನಿಲ್ಲಿಸುತ್ತದೆ ಎಂದು ನಾವು ಸಚಿವಾಲಯಕ್ಕೆ ತಿಳಿಸಿದ್ದೇವೆ ಎಂದು ಸ್ಮಾರ್ಟ್‌ಫೋನ್ ತಯಾರಕರು ತಿಳಿಸಿದ್ದಾರೆ.
ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಆಪಲ್ ಮತ್ತು ಸ್ಯಾಮ್‌ಸಂಗ್ ಸೇರಿದಂತೆ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳ ಉನ್ನತ ಅಧಿಕಾರಿಗಳು ಮತ್ತು ಟೆಲಿಕಾಂ ಆಪರೇಟರ್‌ಗಳು 5ಜಿ ಸುಗಮ ಸೇವೆಗಳ ಒದಗಿಸುವ ವಿಷಯಗಳ ಕುರಿತು ಚರ್ಚಿಸಿದರು. ಮೊಬೈಲ್ ಆಪರೇಟರ್‌ಗಳು ಮತ್ತು ಸ್ಮಾರ್ಟ್‌ಫೋನ್ ತಯಾರಕರ ನಡುವೆ ಉತ್ತಮ ಹೊಂದಾಣಿಕೆಗಾಗಿ ಸಭೆ ಕರೆಯಲಾಗಿತ್ತು ಎಂದು ಸ್ಮಾರ್ಟ್‌ಫೋನ್ ಕಂಪನಿ ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
5G ಸೇವೆಗಳನ್ನು ಒದಗಿಸುವ ಮೊಬೈಲ್ ಆಪರೇಟರ್‌ಗಳೊಂದಿಗೆ ತಮ್ಮ ಸಾಧನಗಳ ಪರೀಕ್ಷೆ ಪ್ರಾರಂಭಿಸಲು ಸ್ಮಾರ್ಟ್‌ಫೋನ್ ತಯಾರಕರು ಒಪ್ಪಿಕೊಂಡಿದ್ದಾರೆ. 5G ಫೋನ್ ಹೊಂದಿರುವ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆ ಅವಲೋಕನ ಮಾಡುತ್ತೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಾಫ್ಟ್‌ವೇರ್ ಅಪ್‌ಗ್ರೇಡ್‌ಗೆ ಆದ್ಯತೆ: ಭಾರ್ತಿ ಏರ್‌ಟೆಲ್ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಸಿಲಿಗುರಿ, ನಾಗ್ಪುರ ಮತ್ತು ವಾರಣಾಸಿಯ ಎಂಟು ನಗರಗಳಲ್ಲಿ 5ಜಿ ಸೇವೆ ಪ್ರಾರಂಭಿಸಿದೆ. ಆದರೆ, ಜಿಯೋ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ವಾರಣಾಸಿಯಲ್ಲಿ ತನ್ನ ಸೇವೆ ಆರಂಭಿಸಿದೆ.
ಹೀಗಾಗಿ ಎಲ್ಲ 5G ಹ್ಯಾಂಡ್‌ಸೆಟ್‌ಗಳಿಗೆ ಸಾಫ್ಟ್‌ವೇರ್ Firmware Over-The-Air (FOTA) ನವೀಕರಣಗಳನ್ನು ಬಿಡುಗಡೆ ಮಾಡಲು ಹ್ಯಾಂಡ್‌ಸೆಟ್ ತಯಾರಕರು ಮತ್ತು ಟೆಲಿಕಾಂ ಸೇವಾ ಪೂರೈಕೆದಾರರ ಸಭೆ ಸೇರಿ ಚರ್ಚಿಸಲಾಯಿತು. ಭಾರತದಲ್ಲಿ 5ಜಿ ಅಳವಡಿಕೆಗಾಗಿ ಸಾಫ್ಟ್‌ವೇರ್ ಅಪ್‌ಗ್ರೇಡ್‌ಗೆ ಆದ್ಯತೆ ನೀಡಲು ಸಹ ನಿರ್ಧರಿಸಲಾಯಿತು.