ವಾಷಿಂಗ್ಟನ್: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಯುರೋಪಿಯನ್ ಒಕ್ಕೂಟದ ಆರ್ಥಿಕ ಆಯುಕ್ತ ಪಾವೊಲೊ ಜೆಂಟಿಲೋನಿ ಅವರನ್ನು ಭೇಟಿ ಮಾಡಿದರು. ಈ ಭೇಟಿ ವೇಳೆ, ಉಭಯ ನಾಯಕರು ಪ್ರಸ್ತುತ ಜಾಗತಿಕ ಆರ್ಥಿಕ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಗಳಲ್ಲಿ ಪಾಲ್ಗೊಳ್ಳಲು ಹಣಕಾಸು ಸಚಿವೆ ಸೀತಾರಾಮನ್ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಐಎಂಎಫ್ ಭೇಟಿ ಅಲ್ಲದೇ ಹಲವಾರು ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಭೆಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಡೆಸುತ್ತಿದ್ದಾರೆ.
ಸೀತಾರಾಮನ್ ಮತ್ತು ಜೆಂಟಿಲೋನಿ ಅವರು ಜಾಗತಿಕ ಆರ್ಥಿಕತೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿದರು. ಈ ವೇಳೆ ಉಭಯ ನಾಯಕರು ಅಗತ್ಯವಿರುವ ದೇಶಗಳಿಗೆ ಸಹಾಯ ಮಾಡಲು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯದ ಬಗ್ಗೆ ಸಮಾಲೋಚಿಸಿದರು ಎಂದು ವಿತ್ತ ಸಚಿವಾಲಯ ಹೇಳಿದೆ.
ಸೀತಾರಾಮನ್ ಅವರ ಅಮೆರಿಕ ಭೇಟಿ ವೇಳೆ, ಪ್ರಮುಖ ದೇಶಗಳ ಮತ್ತು ನೆರೆಹೊರೆಯವರೊಂದಿಗೆ ತಮ್ಮ ಸಹವರ್ತಿಗಳೊಂದಿಗೆ ಸುಮಾರು ಹನ್ನೆರಡು ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದಾರೆ ಎಂದು ಹಣಕಾಸು ಸಚಿವಾಲಯ ವರದಿಗಳು ತಿಳಿಸಿವೆ.
ಇದನ್ನು ಓದಿ:ಜಾಗತಿಕ ಆರ್ಥಿಕ ಹಿಂಜರಿತ ಭಾರತದ ಸದೃಢತೆಯನ್ನು ಅಷ್ಟೊಂದು ಘಾಸಿಗೊಳಿಸಲ್ಲ: ಎಸ್ಬಿಐ ಚೇರ್ಮನ್ ವಿಶ್ವಾಸ