ನವದೆಹಲಿ: ರೂಪಾಯಿಯ ರಕ್ಷಣೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯಶಸ್ವಿಯಾಗಿದೆ. 2022 ರ ಸೆಪ್ಟೆಂಬರ್ ವರೆಗೆ 33.42 ಬಿಲಿಯನ್ ಡಾಲರ್ ನಿವ್ವಳ ಮಾರಾಟಕ್ಕೂ ಕಾರಣವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಗೆ ತಿಳಿಸಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ವಿದೇಶಿ ವಿನಿಮಯ ಮಾರುಕಟ್ಟೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತದೆ ಮತ್ತು ವಿನಿಮಯ ದರದಲ್ಲಿ ಮಿತಿಮೀರಿದ ಅಸ್ಥಿರತೆ ನಿಯಂತ್ರಿಸುವ ಮೂಲಕ ಕ್ರಮಬದ್ಧ ಮಾರುಕಟ್ಟೆ ಪರಿಸ್ಥಿತಿಗಳನ್ನು ನಿರ್ವಹಿಸಲು ಮಾತ್ರ ಮಧ್ಯಪ್ರವೇಶಿಸುತ್ತದೆ. ಯಾವುದೇ ಪೂರ್ವನಿರ್ಧರಿತ ಗುರಿ ಮಟ್ಟ ಅಥವಾ ಬ್ಯಾಂಡ್ ಅನ್ನು ಉಲ್ಲೇಖಿಸದೇ. ಹಣಕಾಸು ವರ್ಷದಲ್ಲಿ ಆರ್ಬಿಐ ಸೆಪ್ಟೆಂಬರ್ 2022 ರವರೆಗೆ 33.42 ಬಿಲಿಯನ್ ಯುಎಸ್ ಡಾಲರ್ ನಿವ್ವಳ ಮಾರಾಟ ಮಾಡಿದೆ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಸಾಮಾನ್ಯವಾಗಿ ರೂಪಾಯಿಯ ತೀವ್ರ ಅಪಮೌಲ್ಯ ತಡೆಯುವ ದೃಷ್ಟಿಯಿಂದ, ಡಾಲರ್ ಗಳ ಮಾರಾಟ ಸೇರಿದಂತೆ, ಆರ್ಬಿಐ ಕಾಲಕಾಲಕ್ಕೆ ದ್ರವ್ಯತೆಯ ನಿರ್ವಹಣೆ ಮೂಲಕ ಮಾರುಕಟ್ಟೆಗಳಲ್ಲಿ ಮಧ್ಯಪ್ರವೇಶಿಸುತ್ತದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ವಿಶ್ವದಾದ್ಯಂತ ಹಣಕಾಸು ನೀತಿ ಬಿಗಿಗೊಳಿಸುವುದರಿಂದ, ಕಚ್ಚಾ ತೈಲ ಬೆಲೆಗಳ ಏರಿಕೆಯೊಂದಿಗೆ ಅಮೆರಿಕನ್ ಡಾಲರ್ ಆರ್ಥಿಕ ವರ್ಷದಲ್ಲಿ ನ30, 2022ವರೆಗೆ ಶೇಕಡಾ 7.8 ರಷ್ಟು ಬಲಗೊಂಡಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ರೂಪಾಯಿ ಮೌಲ್ಯವು ಶೇಕಡಾ 6.9 ರಷ್ಟು ಕುಸಿದಿದೆ. ಚೀನಾದ ಕರೆನ್ಸಿ ಶೇ.10.6, ಇಂಡೋನೇಷ್ಯಾದ ರೂಪಿಯಾ ಶೇ.8.7, ಫಿಲಿಪೈನ್ಸ್ ಪೆಸೊ ಶೇ.8.5, ದಕ್ಷಿಣ ಕೊರಿಯಾದ ವೋನ್ ಶೇ.8.1, ತೈವಾನ್ ಡಾಲರ್ ಶೇ.7.3 ರಷ್ಟು ಕುಸಿದಿವೆ ಏಷ್ಯಾದ ಬಹುತೇಕ ಕರೆನ್ಸಿಗಳಿಗಿಂತ ಇದು ಉತ್ತಮ ಸಾಧನೆ ಎಂದು ಸೀತಾರಾಮನ್ ತಮ್ಮ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಬಂಗಾರ ಬೆಳ್ಳಿ ದರದಲ್ಲಿ ಕೊಂಚ ಇಳಿಕೆ: ರಾಜ್ಯದ ಯಾವ ನಗರದಲ್ಲಿ ಎಷ್ಟು ಬೆಲೆ?