ETV Bharat / business

ಷೇರು ಮಾರುಕಟ್ಟೆ: ಸೆನ್ಸೆಕ್ಸ್ 233 ಪಾಯಿಂಟ್ ಕುಸಿತ, ಟೈಟಾನ್, ಟೆಕ್​​ಮಹಿಂದ್ರಾಗೆ ನಷ್ಟ

ಅಮೆರಿಕದ ಕರೆನ್ಸಿಯು ಜಾಗತಿಕ ಮಾರುಕಟ್ಟೆಯಲ್ಲಿ ದುರ್ಬಲಗೊಂಡಿದೆ. ಶುಕ್ರವಾರ ಅಮೆರಿಕನ್​ ಡಾಲರ್ ವಿರುದ್ಧ ರೂಪಾಯಿ 11 ಪೈಸೆಗಳಷ್ಟು ಏರಿಕೆಯಾಗಿ 76.22 ರೂಪಾಯಿಗೆ ತಲುಪಿದೆ.

Sensex closes 233 points down in choppy day; Titan, Tech Mahindra dip
ಸೆನ್ಸೆಕ್ಸ್ 233 ಪಾಯಿಂಟ್​ಗಳ ಕುಸಿತ: ಟೈಟಾನ್ ಮತ್ತು ಟೆಕ್​​ಮಹಿಂದ್ರಾಗೆ ನಷ್ಟ
author img

By

Published : Mar 25, 2022, 5:43 PM IST

ಮುಂಬೈ(ಮಹಾರಾಷ್ಟ್ರ): ಜಾಗತಿಕ ಮಾರುಕಟ್ಟೆಗಳ ಏರಿಳಿತಗಳ ನಡುವೆ ಭಾರತೀಯ ಷೇರು ಮಾರುಕಟ್ಟೆಗಳ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಶುಕ್ರವಾರದ 233 ಪಾಯಿಂಟ್‌ಗಳ ಕುಸಿತ ಕಂಡಿದೆ. 30 ಸ್ಟಾಕ್​​ಗಳ ಸ್ಟಾಂಡರ್ಡ್ ಆ್ಯಂಡ್ ಪೂರ್ ಬಿಎಸ್​ಇ ಸೆನ್ಸೆಕ್ಸ್ 233.48 ಪಾಯಿಂಟ್‌ಗಳು ಅಥವಾ ಶೇಕಡಾ 0.41 ರಷ್ಟು ಕುಸಿದು 57,362.20 ಪಾಯಿಂಟ್‌ಗಳಿಗೆ ತಲುಪಿದೆ. ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಬಿಎಸ್​ಇ ಸೆನ್ಸೆಕ್ಸ್ 57,595.68 ಪಾಯಿಂಟ್​​ಗಳಷ್ಟಿತ್ತು.

ದಿನದ ಆರಂಭದಲ್ಲಿ 57,801.72 ಪಾಯಿಂಟ್‌ಗಳಲ್ಲಿ ಆರಂಭವಾಗಿದ್ದ ವಹಿವಾಟು, ಧನಾತ್ಮಕವಾಗಿ ಮುಂದುವರೆದು ಗರಿಷ್ಠ 57,845.37 ಪಾಯಿಂಟ್‌ಗಳಿಗೆ ಏರಿಕೆಯಾಗಿತ್ತು. ಆದರೆ, ಧನಾತ್ಮಕ ವಹಿವಾಟು ನಡೆದ ಕೆಲವೇ ನಿಮಿಷಗಳಲ್ಲಿ ಸೆನ್ಸೆಕ್ಸ್ ಸೂಚ್ಯಂಕ ಇಳಿಕೆ ಕಂಡಿತು. ಅಂದಿನ ದಿನವೇ ಷೇರುಗಳನ್ನು ಕೊಂಡು ಅಂದಿನ ದಿನವೇ ಷೇರುಗಳನ್ನು ಮಾರುವ ಇಂಟ್ರಾ-ಡೇ ವಹಿವಾಟಿನಲ್ಲಿ 57,100.24 ಪಾಯಿಂಟ್‌ಗಳ ಕನಿಷ್ಠ ಮಟ್ಟಕ್ಕೆ ಸೆನ್ಸೆಕ್ಸ್ ಕುಸಿದಿದೆ.

ಇನ್ನು ನವದೆಹಲಿಯಲ್ಲಿರುವ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ನಿಫ್ಟಿ-50 ಸೂಚ್ಯಂಕ 69.75 ಪಾಯಿಂಟ್ ಅಥವಾ ಶೇಕಡಾ 0.4ರಷ್ಟು ಕುಸಿತವನ್ನು ಕಂಡಿದ್ದು, 17,153 ಪಾಯಿಂಟ್​ಗಳಿಗೆ ತಲುಪಿದೆ. ಈ ಹಿಂದಿನ ದಿನ 17,222.75 ಪಾಯಿಂಟ್​ಗಳಿಗೆ ನಿಫ್ಟಿ-50 ಅಂತ್ಯಗೊಂಡಿತ್ತು.

ಇದನ್ನೂ ಓದಿ: ರಾಜ್ಯದಲ್ಲಿ ಈ ಯುಗಾದಿಗೆ ಕರೆಂಟ್ ಶಾಕ್.. ಏಪ್ರಿಲ್ 1ರಿಂದ ವಿದ್ಯುತ್ ದರ ಹೆಚ್ಚಳ!?

ಟೈಟಾನ್ ಷೇರು ಬೆಲೆ ಶೇಕಡಾ 3.59ರಷ್ಟು ಕುಸಿದು 2524.60 ರೂಪಾಯಿಗೆ ತಲುಪಿದರೆ, ಮಾರುತಿ ಸುಜುಕಿ ಷೇರು ಬೆಲೆ ಶೇಕಡಾ 1.79ರಷ್ಟು ಕುಸಿದು 7419.45 ರೂ.ಗೆ ತಲುಪಿದೆ. ಐಟಿ ಷೇರುಗಳಲ್ಲಿ ಭಾರೀ ಮಾರಾಟದ ಒತ್ತಡ ಕಂಡುಬಂದಿದೆ. ಟೆಕ್ ಮಹೀಂದ್ರಾ ಷೇರು ಬೆಲೆ ಶೇಕಡಾ 2.35ರಷ್ಟು ಕುಸಿದು 1532 ರೂಪಾಯಿಗೆ ತಲುಪಿದೆ. ವಿಪ್ರೋ ಷೇರು ಬೆಲೆ ಶೇಕಡಾ 1.18ರಷ್ಟು ಕುಸಿದು 603.65 ರೂಪಾಯಿಗೆ ತಲುಪಿದೆ. ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಶೇಕಡಾ 0.77ರಷ್ಟು ಏರಿಕೆ ಕಂಡು 4360.90 ರೂಪಾಯಿ ತಲುಪಿದೆ. ಏಷ್ಯನ್ ಪೇಂಟ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೋಟಕ್ ಬ್ಯಾಂಕ್ ಪ್ರಮುಖ ಲಾಭ ಗಳಿಸಿವೆ.

ರೂಪಾಯಿ ಮೌಲ್ಯ 11 ಪೈಸೆ ಏರಿಕೆ: ಅಮೆರಿಕದ ಕರೆನ್ಸಿಯ ಜಾಗತಿಕ ಮಾರುಕಟ್ಟೆಯಲ್ಲಿ ದುರ್ಬಲಗೊಂಡಿದ್ದು, ಶುಕ್ರವಾರ ಅಮೆರಿಕನ್​ ಡಾಲರ್ ವಿರುದ್ಧ ರೂಪಾಯಿ 11 ಪೈಸೆಗಳಷ್ಟು ಏರಿಕೆಯಾಗಿ 76.22 ರೂಪಾಯಿಗೆ ತಲುಪಿದೆ. ಹಿಂದಿನ ಸೆಷನ್‌ನಲ್ಲಿ, ರೂಪಾಯಿ ಮೌಲ್ಯವು 6 ಪೈಸೆ ಏರಿಕೆಯಾಗಿ US ಡಾಲರ್‌ಗೆ 76.33ಕ್ಕೆ ತಲುಪಿತ್ತು. ಇಂಟರ್‌ಬ್ಯಾಂಕ್ ಫಾರೆಕ್ಸ್ ಮಾರುಕಟ್ಟೆಯಲ್ಲಿ, ಒಂದು ಡಾಲರ್​ಗೆ 76.15ರೂಪಾಯಿಯಂತೆ ವಹಿವಾಟು ಆರಂಭವಾಗಿತ್ತು. ಇಂಟ್ರಾ ಡೇ ವಹಿವಾಟಿನಲ್ಲಿ ಒಂದು ಡಾಲರ್​ಗೆ ಗರಿಷ್ಠ 76.12 ರೂಪಾಯಿ, ಕನಿಷ್ಟ 76.29 ರೂಪಾಯಿಗೆ ತಲುಪಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.