ಚೆನ್ನೈ (ತಮಿಳುನಾಡು): ಸಹಕಾರಿ ಸಚಿವ ಪೆರಿಯಗರುಪ್ಪನ್ ಅವರು ಇಂದು ಸೋಮವಾರ, ಚೆನ್ನೈ ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಮಾತನಾಡಿ, ನಾಳೆಯಿಂದ ಪಡಿತರ ಅಂಗಡಿ, ಕೃಷಿ ಹಸಿರು ಕೇಂದ್ರ (ಸಹಕಾರಿ ಸಂಘದ ಅಂಗಡಿ) ಸೇರಿದಂತೆ 111 ಕೇಂದ್ರಗಳಲ್ಲಿ ಟೊಮೆಟೊ 60 ರೂ.ಗೆ ಲಭ್ಯವಿದ್ದು, ಟೊಮೆಟೊ ಬೆಲೆ ಮತ್ತಷ್ಟು ಏರಿಕೆಯಾಗದಂತೆ ಸಮಾಲೋಚನೆ ನಡೆಸಿದ್ದೇವೆ ಎಂದು ಹೇಳಿದರು.
ನಾವು ತಮಿಳುನಾಡಿನಲ್ಲಿ ಕೃಷಿ ಹಸಿರು ಅಂಗಡಿಗಳ (ಸಹಕಾರಿ ಸಂಘದ ಅಂಗಡಿಗಳು) ಸಂಖ್ಯೆಯನ್ನು ಹೆಚ್ಚಿಸಿದ್ದೇವೆ. ಅವುಗಳನ್ನು ಜನರಿಗೆ ಲಭ್ಯವಾಗುವಂತೆ ಮಾಡಿದ್ದೇವೆ. ಟೊಮೆಟೊ ಬೆಲೆ ಏರಿಕೆಯು ಎಲ್ಲ ರಾಜ್ಯಗಳಲ್ಲಿ ಇರುವುದರಿಂದ ಇದು ರಾಷ್ಟ್ರೀಯ ಸಮಸ್ಯೆಯಾಗಿದೆ ಎಂದರು.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾತನಾಡಿ, ''ಮುಂಗಾರು ಸರಿಯಾಗಿ ಆಗದ ಕಾರಣ ಇಳುವರಿ ತುಂಬಾ ಕಡಿಮೆಯಾಗಿದೆ. ಈ ಸಮಸ್ಯೆ ತಮಿಳುನಾಡಿನಲ್ಲಿ ಮಾತ್ರವಲ್ಲ ಇಡೀ ಭಾರತದಲ್ಲಿದೆ'' ಎಂದರು. ''ಬೆಲೆ ಏರಿಕೆಯಿಂದ ಜನರನ್ನು ಪಾರು ಮಾಡಲು ನಾಳೆಯಿಂದಲೇ ಪಡಿತರ ಅಂಗಡಿಗಳಲ್ಲಿ ಟೊಮೆಟೊ ಮಾರಾಟ ಆರಂಭವಾಗಲಿದೆ. ಮೊದಲ ಹಂತದಲ್ಲಿ, ರಾಜಧಾನಿ ಚೆನ್ನೈ ಅನ್ನು ಉತ್ತರ ಚೆನ್ನೈ, ದಕ್ಷಿಣ ಚೆನ್ನೈ ಮತ್ತು ಸೆಂಟ್ರಲ್ ಚೆನ್ನೈ ಎಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.
ಸೆಂಟ್ರಲ್ ಚೆನ್ನೈನಲ್ಲಿ 32 ಅಂಗಡಿಗಳು, ಉತ್ತರ ಚೆನ್ನೈನಲ್ಲಿ 25 ಅಂಗಡಿಗಳು ಮತ್ತು ದಕ್ಷಿಣ ಚೆನ್ನೈನಲ್ಲಿ 25 ಅಂಗಡಿಗಳು ಒಟ್ಟು 82 ಪಡಿತರ ಅಂಗಡಿಗಳಲ್ಲಿ ಟೊಮೆಟೊವನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ಈ ಅಂಗಡಿಗಳಲ್ಲಿ ಒಂದು ಕೆಜಿ ಟೊಮೆಟೊವನ್ನು 60 ರೂ.ಗೆ ಮಾರಾಟ ಮಾಡಲಾಗುವುದು'' ಎಂದು ಸಚಿವ ಪೆರಿಯ ಕರುಪ್ಪನ್ ಹೇಳಿದರು.
ಬೆಲೆ ನಿಯಂತ್ರಿಸಲು ಸಮಾಲೋಚಿಸಿ ತೀರ್ಮಾನ: ''ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದ ಸಚಿವರು, ಭವಿಷ್ಯದಲ್ಲಿ ಕೃಷಿ ಉತ್ಪಾದನಾ ಕೇಂದ್ರದ ಮೂಲಕ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಕ್ರಮಕೈಗೊಳ್ಳಲಾಗುವುದು. ತಮಿಳುನಾಡಿಗೆ ಅಗತ್ಯವಿರುವ ಶೇಕಡ 75 ರಷ್ಟು ಟೊಮೆಟೊವನ್ನು ರಾಜ್ಯದೊಳಗೆ ಬೆಳೆಯಲಾಗುತ್ತದೆ. ಉಳಿದ ಶೇ.25ರಷ್ಟು ಮಾತ್ರ ಆಮದು ಮಾಡಿಕೊಳ್ಳಲಾಗುತ್ತದೆ'' ಎಂದ ಅವರು, ರೈತರಿಗೆ ಮೂಲ ಬೆಲೆ ನೀಡಿದ್ದು, ಅವರಿಂದ ಟೊಮೆಟೊ ಖರೀದಿಸಲಾಗುವುದು. ಇದಲ್ಲದೇ ಪ್ರತಿವರ್ಷ ಈ ತಿಂಗಳುಗಳಲ್ಲಿ ಟೊಮೆಟೊ ಬೆಲೆ ಹೆಚ್ಚುತ್ತಲೇ ಇದೆ. ಅದೇ ರೀತಿ ಈ ವರ್ಷವೂ ಜುಲೈ ತಿಂಗಳಿನಲ್ಲಿ ಟೊಮೆಟೊ ಬೆಲೆ ದುಪ್ಪಟ್ಟಾಗಿದೆ. ಬೆಲೆ ನಿಯಂತ್ರಿಸಲು ಸಮಾಲೋಚಿಸಿ ತೀರ್ಮಾನ ಕೈಗೊಂಡಿದ್ದೇವೆ ಎಂದರು. ತಮಿಳುನಾಡಿನಲ್ಲಿ ಟೊಮೆಟೊ ಚಿಲ್ಲರೆ ದರದಲ್ಲಿ ಕೆಜಿಗೆ 140ರಿಂದ 160 ರೂ. ಮಾರಾಟವಾಗುತ್ತದೆ.
ಇದನ್ನೂ ಓದಿ: Tomato price :ಮಹಾನಗರಗಳಲ್ಲಿ ನೂರರ ಗಡಿ ದಾಟಿದ ಟೊಮೆಟೋ ಬೆಲೆ