ETV Bharat / business

PAN-Aadhaar​ ಲಿಂಕ್​ ಮಾಡಿದ್ದೀರಾ? ಸೆಬಿ ನೀಡಿದೆ ಗಡುವು! - ಪ್ಯಾನ್​ನೊಂದಿಗೆ ಆಧಾರ್​ ಲಿಂಕ್ ಮಾಡುವುದು ಕಡ್ಡಾಯ

ಸುಗಮ ವಹಿವಾಟಿಗಾಗಿ ಹೂಡಿಕೆದಾರರು ಪ್ಯಾನ್​ನೊಂದಿಗೆ ಆಧಾರ್​ ಲಿಂಕ್ ಮಾಡುವುದು ಕಡ್ಡಾಯ ಎಂದು ಸೆಬಿ ತಿಳಿಸಿದೆ.

SEBI gives deadline to investors to link Aadhaar with PAN

author img

By

Published : Mar 9, 2023, 12:10 PM IST

ಬೆಂಗಳೂರು: ಷೇರು ಮಾರುಕಟ್ಟೆ ನಿರ್ವಹಣೆ ಸುಗಮಕ್ಕಾಗಿ ಎಲ್ಲಾ ಹೂಡಿಕೆದಾರರು ತಮ್ಮ ಪ್ಯಾನ್​ ಕಾರ್ಡ್​ನೊಂದಿಗೆ ಆಧಾರ್​​ ಸಂಖ್ಯೆಯನ್ನು ಲಿಂಕ್​ ಮಾಡುವಂತೆ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ತಿಳಿಸಿದೆ.

ಕೆವೈಸಿ(KYC) ದೂರು: ಈ ಸಂಬಂಧ ಬುಧವಾರ ಹೇಳಿಕೆ ಹೊರಡಿಸಿರುವ ಸೆಬಿ, ಆಧಾರ್​ ಸಂಖ್ಯೆ ಹೊಂದಿರದ ಅನುಸರಣೆಗಳನ್ನು ನಾನ್​ ಕೆವೈಸಿ ದೂರುಗಳು ಎಂದು ಪರಿಗಣಿಸಲಾಗುವುದು. ಪ್ಯಾನ್​ ಲಿಂಕ್​ ಆಗುವವರೆಗೆ ಸೆಕ್ಯೂರಿಟಿ ಮತ್ತು ಇತರೆ ವಹಿವಾಟಿನ ಮೇಲೆ ನಿರ್ಬಂಧ ಹೇರಲಾಗುವುದು ಎಂದು ಎಚ್ಚರಿಸಿದೆ.

ಈ ಸಂಬಂಧ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಮಾರ್ಚ್​ 2022ರಲ್ಲೇ ಸುತ್ತೋಲೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್​ 31ರೊಳಗೆ ಪ್ಯಾನ್​ಗೆ ಆಧಾರ್​​ ಲಿಂಕ್​ ಮಾಡದೇ ಹೋದಲ್ಲಿ ಅವರ ಪ್ಯಾನ್​ ಅನ್ನು ಆದಾಯ ತೆರಿಗೆ ಕಾಯ್ದೆ 1961ರ ಅಡಿಗೆ ನಿಷ್ಕ್ರೀಯಗೊಳಿಸಲಾಗುವುದು ಎಂದು ತಿಳಿಸಿದೆ.

ವಹಿವಾಟಿಗೆ ಅವಶ್ಯಕ ಪ್ಯಾನ್​: ಸೆಕ್ಯೂರಿಟಿ ಮಾರುಕಟ್ಟೆಯಲ್ಲಿ ಎಲ್ಲಾ ವಹಿವಾಟುಗಳಿಗೆ ಪ್ಯಾನ್​ ಪ್ರಮುಖವಾಗಿದೆ. ಸೆಬಿ ನೋಂದಾಯಿತ ಘಟಕಗಳು ಮತ್ತು ಮಾರುಕಟ್ಟೆ ಮೂಲ ಸೌಕರ್ಯ ಸಂಸ್ಥೆಗಳಲ್ಲಿ ಭಾಗವಹಿಸಲು ಕೆವೈಸಿ ಬೇಕೇ ಬೇಕು.

ಈಗಾಗಲೇ ಇರುವ ಹೂಡಿಕೆದಾರರು ಕೂಡ ಮಾರ್ಚ್​ 31ರೊಳಗೆ ಪ್ಯಾನ್​ನೊಂದಿಗೆ ಆಧಾರ್​ ಸಂಖ್ಯೆಯನ್ನು ಲಿಂಕ್​ ಮಾಡುವುದು ಅವಶ್ಯಕವಾಗಿದೆ. ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ನಿರಂತರ ಮತ್ತು ಸುಗಮ ವಹಿವಾಟುಗಳಿಗೆ ಇದು ಅತೀ ಅಗತ್ಯ. ಇದರ ಜೊತೆಗೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ನಿಯಮ ಪಾಲನೆ ಕಡ್ಡಾಯವೂ ಹೌದು.

ಪ್ಯಾನ್​ ಕಾರ್ಡ್​ ನಿಷ್ಕ್ರೀಯ ಸಾಧ್ಯತೆ: ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆದಾಯ ತೆರಿಗೆ ಕಾಯಿದೆಯ ನಿಬಂಧನೆಗಳು ಪ್ಯಾನ್ ಅನ್ನು ನಿಗದಿಪಡಿಸಿದ ನಿಗದಿತ ಪ್ರಾಧಿಕಾರಕ್ಕೆ ತಿಳಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಗದಿತ ದಿನದೊಳಗೆ ಈ ಕಾರ್ಯ ಮಾಡದೇ ಹೋದಲ್ಲಿ ಹೂಡಿಕೆದಾರರ ಪ್ಯಾನ್​ ನಿಷ್ಕ್ರೀಯವಾಗುತ್ತದೆ. ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗುವುದರಿಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗದು. ಆದಾಯ ತೆರಿಗೆ ರಿಟರ್ನ್ಸ್‌ ಈಗಾಗಲೇ ಸಲ್ಲಿಸಿದ್ದರೂ ಬಾಕಿ ಇರುವ ರಿಟರ್ನ್ಸ್‌ಗಳನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ. ಈಗಾಗಲೇ ಐಟಿ ರಿಟರ್ನ್ಸ್ ಸಲ್ಲಿಸಿದ್ದರೆ ಅಥವಾ ಮರುಪಾವತಿಗಾಗಿ ಕಾಯುತ್ತಿದ್ದರೆ, ಬಾಕಿ ಮರುಪಾವತಿಗಳು ಬರುವುದಿಲ್ಲ.

ಗಡುವು ವಿಸ್ತರಿಸಿದ ಸೆಬಿ: ಇದೇ ವೇಳೆ ಸೆಬಿ ಮಂಗಳವಾರ ಮ್ಯೂಚುವಲ್ ಫಂಡ್‌ಗಳು, ಆಸ್ತಿ ನಿರ್ವಹಣಾ ಕಂಪನಿಗಳು ಮತ್ತು ಟ್ರಸ್ಟಿ ಘಟಕಗಳಿಗೆ ಫೋರೆನ್ಸಿಕ್ ಆಡಿಟರ್‌ಗಳ ಎಂಪನೆಲ್‌ಮೆಂಟ್‌ಗಾಗಿ ಅರ್ಜಿಗಳನ್ನು ಸಲ್ಲಿಸಲು ಮಾರ್ಚ್ ಅಂತ್ಯದವರೆಗೆ ಸಮಯ ವಿಸ್ತರಿಸಿದೆ. ಇಎಸ್​ಜಿ ರೇಟಿಂಗ್ ಪೂರೈಕೆದಾರರ ಮೇಲಿನ ಪ್ರಸ್ತಾವಿತ ನಿಯಂತ್ರಕ ಚೌಕಟ್ಟಿನ ಕುರಿತು ಸಾರ್ವಜನಿಕ ಕಾಮೆಂಟ್‌ಗಳನ್ನು ಸಲ್ಲಿಸಲು ಮಾರ್ಚ್ 15 ರವರೆಗೆ ಟೈಮ್‌ಲೈನ್ ಕೊಟ್ಟಿದೆ. ಈ ಹಿಂದೆ ಇದಕ್ಕೆ ಫೆ. 22ರವರೆಗೆ ಗಡುವು ನೀಡಲಾಗಿತ್ತು.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ವ್ಯಾಪ್ತಿಗೆ ಕ್ರಿಪ್ಟೋ ಕರೆನ್ಸಿ ವ್ಯವಹಾರ: ಕೇಂದ್ರದ ಅಧಿಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.