ETV Bharat / business

ಅಮೆರಿಕನ್​ ಡಾಲರ್​ ಮುಂದೆ ಮತ್ತೆ 2 ಪೈಸೆ ಇಳಿದ ರೂಪಾಯಿ ಮೌಲ್ಯ..82.97 ರಲ್ಲಿ ಸ್ಥಿರ

author img

By ETV Bharat Karnataka Team

Published : Sep 13, 2023, 5:13 PM IST

ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರಗತಿ ಸಾಧಿಸಲಾಗುತ್ತಿದ್ದರೂ, ಅಮೆರಿಕನ್​ ಡಾಲರ್​ ಮುಂದೆ ರುಪೀ ದರ ಮೌಲ್ಯ ಕಳೆದುಕೊಳ್ಳುತ್ತಾ ಸಾಗಿದೆ. ಬುಧವಾರದ ವಹಿವಾಟಿನಲ್ಲಿ ಅದು 2 ಪೈಸೆಯಷ್ಟು ಇಳಿದು 82.97 ಕ್ಕೆ ತಲುಪಿದೆ.

ಡಾಲರ್ ಮುಂದೆ ತಗ್ಗಿದ ರೂಪಾಯಿ
ಡಾಲರ್ ಮುಂದೆ ತಗ್ಗಿದ ರೂಪಾಯಿ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕನ್​ ಡಾಲರ್​ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ ಕಂಡಿದೆ. ಬುಧವಾರ ಡಾಲರ್‌ ಎದುರು ರೂಪಾಯಿ 2 ಪೈಸೆಯಷ್ಟು ಇಳಿದು 82.97 ಕ್ಕೆ ತಲುಪಿದೆ. ಕಚ್ಚಾ ತೈಲ ಬೆಲೆಗಳ ಏರಿಕೆ ಮತ್ತು ಅಮೆರಿಕನ್ ಕರೆನ್ಸಿಯ ಹೆಚ್ಚಳದಿಂದ ಭಾರತದ ರುಪೀಗೆ ಹಿನ್ನಡೆ ಉಂಟಾಗಿದೆ. ಆದಾಗ್ಯೂ, ದೇಶೀಯ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಬೆಳವಣಿಗೆ ಮುಂದುವರಿದಿದೆ.

ಇಂದಿನ ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ 82.92 ನಲ್ಲಿ ವಹಿವಾಟು ಆರಂಭಿಸಿತು. ಬಳಿಕ ಅದು 82.89 ಗರಿಷ್ಠ 82.99 ರೂಪಾಯಿಗೆ ತಲುಪಿತು. ದಿನದಾಂತ್ಯಕ್ಕೆ ಅಮೆರಿಕರನ್ ಡಾಲರ್ ವಿರುದ್ಧ ರೂಪಾಯಿ 82.97 ರಲ್ಲಿ ಸ್ಥಿರವಾಯಿತು. ಮಂಗಳವಾರವಷ್ಟೇ 82.95 ರಲ್ಲಿದ್ದ ರೂಪಾಯಿ 2 ಪೈಸೆ ಮೌಲ್ಯ ಕಳೆದುಕೊಂಡಿತು.

ಡಾಲರ್​ಗೆ ಹೆಚ್ಚುತ್ತಿರುವ ಬೇಡಿಕೆ, ಜಾಗತಿಕ ಕಚ್ಚಾ ತೈಲ ಬೆಲೆಗಳ ಏರಿಕೆಯಿಂದಾಗಿ ಭಾರತೀಯ ರೂಪಾಯಿ ಮೌಲ್ಯ ಬುಧವಾರ 2 ಪೈಸೆಯಷ್ಟು ಮಾತ್ರ ಕುಸಿದಿದೆ. ದೇಶೀಯ ಮಾರುಕಟ್ಟೆಯಲ್ಲಿ ಧನಾತ್ಮಕ ವಹಿವಾಟು ಇನ್ನಷ್ಟು ಕುಸಿತವನ್ನು ತಗ್ಗಿಸಿದೆ. ಅಮೆರಿಕನ್​ ಫೆಡರೇಷನ್​ ಈ ವರ್ಷ ಮತ್ತೊಮ್ಮೆ ಬಡ್ಡಿದರಗಳನ್ನು ಹೆಚ್ಚಿಸಬಹುದು ಎಂಬ ನಿರೀಕ್ಷೆಯ ಮೇಲೆ ಡಾಲರ್ ಮೌಲ್ಯ ಹೆಚ್ಚುತ್ತಿದೆ ಎಂದು ಆರ್ಥಿಕ ವಿಶ್ಲೇಷಕ ಅನುಜ್ ಚೌಧರಿ ಹೇಳಿದರು.

ಅಮೆರಿಕಾದ ಡಾಲರ್ ಏರಿಕೆ ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆಯ ಕಾರಣಕ್ಕಾಗಿ ರೂಪಾಯಿಯು ತುಸು ಋಣಾತ್ಮಕ ವಹಿವಾಟು ನಡೆಸಲಿದೆ. ಜಾಗತಿಕ ಮಾರುಕಟ್ಟೆಗಳಲ್ಲಿನ ಸವಾಲುಗಳು ರೂಪಾಯಿಯ ಮೇಲೆ ಪರಿಣಾಮ ಬೀರಲಿವೆ. ಆದರೆ, ದೇಶೀಯ ಮಾರುಕಟ್ಟೆಗಳ ಉತ್ತಮ ವಹಿವಾಟು ರೂಪಾಯಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದೆ. ಡಾಲರ್​ ಮತ್ತು ಭಾರತೀಯ ರೂಪಾಯಿ ಸ್ಪಾಟ್ ಬೆಲೆಯು 82.70 ರಿಂದ 83.30 ರೂಪಾಯಿ ಮಧ್ಯೆ ವಹಿವಾಟು ನಡೆಸುವ ನಿರೀಕ್ಷೆಯಿದೆ ಎಂದು ಚೌಧರಿ ಹೇಳಿದರು.

ಆರು ಕರೆನ್ಸಿಗಳ ಮೌಲ್ಯವನ್ನು ಅಳೆಯುವ ಗ್ರೀನ್‌ಬ್ಯಾಕ್‌ ಡಾಲರ್ ಸೂಚ್ಯಂಕದಲ್ಲಿ 0.08 ಶೇಕಡಾ ಏರಿಕೆ ದಾಖಲಿಸಿದ್ದು, 104.79 ಕ್ಕೆ ಅದು ತಲುಪಿದೆ. ಜಾಗತಿಕ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್‌ಗೆ 0.58 ರಷ್ಟು ಏರಿಕೆ ಕಂಡು ಅದು 92.59 ಡಾಲರ್​ಗೆ ತಲುಪಿದೆ.

ಸೆನ್ಸೆಕ್ಸ್​, ನಿಫ್ಟಿ ಅಂಕ ಹೆಚ್ಚಳ: ರುಪೀ ಮೌಲ್ಯ ಕುಸಿದರೂ ಮುಂಬೈ ಮಾರುಕಟ್ಟೆ ಬಿಎಸ್​ಸಿ ಬಿಎಸ್‌ಇ ಸೆನ್ಸೆಕ್ಸ್ 245.86 ಪಾಯಿಂಟ್‌ಗಳು ಅಥವಾ 0.37 ಶೇಕಡಾ ಏರಿಕೆಯೊಂದಿಗೆ 67,466.99 ಕ್ಕೆ ತಲುಪಿದೆ. ಎನ್​ಎಸ್​ಸಿ ನಿಫ್ಟಿ-50ಯು 76.80 ಪಾಯಿಂಟ್‌ಗಳು ಅಥವಾ 0.38 ಶೇಕಡಾ ಏರಿಕೆ ದಾಖಲಿಸಿ ಸಾರ್ವಕಾಲಿಕ ಗರಿಷ್ಠ 20,070.00 ಗೆ ತಲುಪಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಹೆಚ್ಚಿನ ಲಾಭ ಗಳಿಸಿದ್ದಾರೆ. 1,047.19 ಕೋಟಿ ಮೌಲ್ಯದ ಷೇರುಗಳನ್ನು ಆಫ್‌ಲೋಡ್ ಮಾಡಿದ್ದಾರೆ. ಮಂಗಳವಾರ ಅಧಿಕೃತ ಅಂಕಿಅಂಶಗಳ ಪ್ರಕಾರ, ಉತ್ಪಾದನೆ, ಗಣಿಗಾರಿಕೆ ಮತ್ತು ವಿದ್ಯುತ್ ವಲಯಗಳಲ್ಲಿ ಉತ್ತಮ ಪ್ರಗತಿ ಕಂಡುಬಂದಿದ್ದು, ಭಾರತದ ಕೈಗಾರಿಕಾ ಉತ್ಪಾದನೆಯು ಜುಲೈನಿಂದ ಐದು ತಿಂಗಳಲ್ಲಿ ಗರಿಷ್ಠ 5.7 ಶೇಕಡಾ ಬೆಳವಣಿಗೆ ಕಂಡಿದೆ. ಚಿಲ್ಲರೆ ಹಣದುಬ್ಬರವು ಜುಲೈನಲ್ಲಿ 15 ತಿಂಗಳ ಗರಿಷ್ಠವಾದ ಶೇಕಡಾ 7.44ಕ್ಕೆ ತಲುಪಿತ್ತು. ನಂತರ ಅದು ಆಗಸ್ಟ್‌ನಲ್ಲಿ ಶೇಕಡಾ 6.83 ಕ್ಕೆ ಇಳಿದಿದೆ.

ಇದನ್ನೂ ಓದಿ: ಪ್ರೀಮಿಯಂ ಸೇವೆ ವಿಭಾಗದ ಹೆಸರನ್ನು 'ಭಾರತ್ ಪ್ಲಸ್' ಎಂದು ಬದಲಾಯಿಸಿದ ಬ್ಲೂಡಾರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.