ETV Bharat / business

ವಾಣಿಜ್ಯ ಸಿಲಿಂಡರ್​ಗಳ ಬೆಲೆಯಲ್ಲಿ ಇಳಿಕೆ.. - ಸಿಲಿಂಡರ್​ಗಳ ದರದಲ್ಲಿ ತುಸು ಇಳಿಕೆ

ಹಬ್ಬಗಳ ಸೀಸನ್​ಗೆ ಸರ್ಕಾರ ಕೊಡುಗೆ ನೀಡಿದೆ. ವಾಣಿಜ್ಯ ಎಲ್​ಪಿಜಿ ಸಿಲಿಂಡರ್​​ ಬೆಲೆಯನ್ನು ಇಳಿಸಿ ಗ್ರಾಹಕರಿಗೆ ಸಿಹಿ ಹಂಚಿದೆ.

gas-cylinder-became-cheaper
ವಾಣಿಜ್ಯ ಸಿಲಿಂಡರ್​ಗಳ ಬೆಲೆಯಲ್ಲಿ ಇಳಿಕೆ
author img

By

Published : Oct 1, 2022, 10:18 AM IST

ನವದೆಹಲಿ: ತೈಲ ವಿತರಣಾ ಕಂಪನಿಗಳು ವಾಣಿಜ್ಯ ಸಿಲಿಂಡರ್​ಗಳ ದರದಲ್ಲಿ ತುಸು ಇಳಿಕೆ ದಾಖಲಿಸಿವೆ. ಇಂದಿನಿಂದಲೇ ಜಾರಿಗೆ ಬರುವಂತೆ 19 ಕೆಜಿ ಸಿಲಿಂಡರ್​ ಬೆಲೆಯಲ್ಲಿ 25.50 ರೂಪಾಯಿ ಇಳಿಸಿವೆ. ಇದು ಬೆಲೆ ಏರಿಕೆ ಬಿಸಿ ನಡುವೆ ದರ ಇಳಿಸಿರುವುದು ತುಸು ಸಮಾಧಾನ ತಂದಿದೆ.

ಅಕ್ಟೋಬರ್ 1 ರಿಂದ ಮಹಾನಗರಗಳಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ತೈಲ ವಿತರಣಾ ಕಂಪನಿಗಳು (ಒಎಂಸಿ) ಕಡಿತಗೊಳಿಸಿವೆ. ಲಿಮಿಟೆಡ್ ಪ್ರಕಾರ, ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಪ್ರತಿ ಯೂನಿಟ್‌ಗೆ 25.50 ರೂ.ವರೆಗೆ ಇಳಿಕೆ ಮಾಡಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.

ಕಳೆದ ತಿಂಗಳ ಮೊದಲ ದಿನ ಕೂಡ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಲಾಗಿತ್ತು. 2 ತಿಂಗಳಲ್ಲಿ 2ನೇ ಬಾರಿಗೆದರ ಇಳಿಕೆ ಕಾಣುತ್ತಿರುವುದು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳ ತಿನಿಸಿನ ದರದಲ್ಲೂ ಸ್ವಲ್ಪ ಕಡಿಮೆಯಾಗುವ ನಿರೀಕ್ಷೆಯಿದೆ.

ಹಬ್ಬದ ಸೀಸನ್‌ ಕಾರಣ ಎಲ್‌ಪಿಜಿ ಬೆಲೆಯನ್ನು ಸರ್ಕಾರ ಸರ್ಕಾರ ಪರಿಷ್ಕರಿಸಿದೆ. ಆದರೆ, ದೇಶಿಯ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಯಾವುದೇ ದರ ಬದಲಾವಣೆ ಮಾಡಲಾಗಿಲ್ಲ. ಇಳಿಕೆ ಬಳಿಕ ಇಂದಿನಿಂದ ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1,885 ರೂಪಾಯಿ ಬದಲಿಗೆ 1,859 ರೂಪಾಯಿ. ಕೋಲ್ಕತ್ತಾದಲ್ಲಿ 1,959 ರೂಪಾಯಿ, ಮುಂಬೈನಲ್ಲಿ 1,811.50 ರೂ. ಮತ್ತು ಚೆನ್ನೈನಲ್ಲಿ 2,009.50 ರೂ. ಇರಲಿದೆ.

ಓದಿ: 5ಜಿ ನೆಟ್​ವರ್ಕ್​ಗೆ ಪ್ರಧಾನಿ ಮೋದಿ ಚಾಲನೆಗೆ ಕ್ಷಣಗಣನೆ.. ಅದರ ಸ್ಪೀಡ್​ ಎಷ್ಟಿದೆ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.