ETV Bharat / business

ಹಡಗುಗಳ ಮೇಲಿನ ದಾಳಿ ಇಳಿಕೆ; ಕಚ್ಚಾ ತೈಲ ಬೆಲೆಗಳಲ್ಲಿ ಸ್ಥಿರತೆ

author img

By ETV Bharat Karnataka Team

Published : Dec 28, 2023, 2:23 PM IST

ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ನಡೆಯುತ್ತಿದ್ದ ರಾಕೆಟ್​ ದಾಳಿಗಳ ಪ್ರಮಾಣ ಕಡಿಮೆಯಾಗಿದೆ.

Oil prices stabilise as Red Sea transport disruptions ease

ನವದೆಹಲಿ : ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀಕರತೆ ಹೆಚ್ಚಾಗುತ್ತಿದ್ದರೂ ಕೆಂಪು ಸಮುದ್ರದಲ್ಲಿ ನಡೆಯುತ್ತಿದ್ದ ಹಡಗುಗಳ ಮೇಲಿನ ದಾಳಿ ಕಡಿಮೆಯಾಗುತ್ತಿವೆ. ಹೀಗಾಗಿ ಕಚ್ಚಾ ತೈಲ ಬೆಲೆಗಳು ತೀವ್ರ ಕುಸಿತದ ನಂತರ ಈಗ ಸ್ಥಿರವಾಗಿವೆ. ಮಾಧ್ಯಮ ವರದಿಗಳ ಪ್ರಕಾರ, ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಬ್ಯಾರೆಲ್​ಗೆ 10 ಸೆಂಟ್ಸ್ ಅಥವಾ ಶೇಕಡಾ 0.1 ರಷ್ಟು ಏರಿಕೆಯಾಗಿ 79.75 ಡಾಲರ್​ಗೆ ತಲುಪಿದ್ದರೆ, ಯುಎಸ್ ಡಬ್ಲ್ಯುಟಿಐ ಕ್ರೂಡ್ ಫ್ಯೂಚರ್ಸ್ ಬ್ಯಾರೆಲ್​ಗೆ 5 ಸೆಂಟ್ಸ್ ಕಡಿಮೆಯಾಗಿ 74.06 ಡಾಲರ್​ಗೆ ತಲುಪಿದೆ. ಪ್ರಮುಖ ಹಡಗು ಸಂಸ್ಥೆಗಳು ಕೆಂಪು ಸಮುದ್ರಕ್ಕೆ ಮರಳಲು ಪ್ರಾರಂಭಿಸಿದ್ದರಿಂದ ಬೆಲೆಗಳು ಬುಧವಾರ ಸುಮಾರು 2 ಪ್ರತಿಶತದಷ್ಟು ಕುಸಿದಿವೆ ಎಂದು ಅದು ಹೇಳಿದೆ.

"ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲಿನ ದಾಳಿಗಳು ಕಡಿಮೆಯಾಗಿವೆ. ಆದರೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಇರಾನ್ ಮಧ್ಯಪ್ರವೇಶದ ನಂತರ ಪರಿಸ್ಥಿತಿಗಳು ಬದಲಾಗುತ್ತಿದ್ದು, ತೈಲ ಮಾರಾಟ ಕಷ್ಟಕರವಾಗುತ್ತಿದೆ " ಎಂದು ನಿಸ್ಸಾನ್ ಸೆಕ್ಯುರಿಟೀಸ್​ನ ಘಟಕವಾದ ಎನ್ಎಸ್ ಟ್ರೇಡಿಂಗ್​ನ ಅಧ್ಯಕ್ಷ ಹಿರೋಯುಕಿ ಕಿಕುಕಾವಾ ಹೇಳಿದರು.

ಕೆಂಪು ಸಮುದ್ರ ಪ್ರದೇಶದಲ್ಲಿ ಭಾರತಕ್ಕೆ ಸಂಬಂಧಿಸಿದ ಹಡಗುಗಳಾದ ಎಂವಿ ಚೆಮ್ ಪ್ಲೂಟೊ ಮತ್ತು ಎಂವಿ ಸಾಯಿ ಬಾಬಾ ಮೇಲಿನ ದಾಳಿಗೆ ಕಾರಣರಾದವರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಜ್ಞೆ ಮಾಡಿದ್ದಾರೆ. ಒಂದು ತಿಂಗಳಿಗೂ ಹೆಚ್ಚು ಕಾಲದಿಂದ, ಯೆಮೆನ್ ನ ಹೌತಿ ಬಂಡುಕೋರರು ಕೆಂಪು ಸಮುದ್ರದ ಹಡಗು ಮಾರ್ಗ ಬಳಸುವ ಹಡಗುಗಳ ಮೇಲೆ ನಡೆಸಿದ ದಾಳಿಗಳು ಜಾಗತಿಕ ಆರ್ಥಿಕತೆಯಲ್ಲಿ ಅನಿಶ್ಚಿತತೆ ಹೆಚ್ಚಿಸಿವೆ.

ಯೆಮೆನ್ ನ ನಾಗರಿಕ ಸಂಘರ್ಷದಲ್ಲಿ ಭಾಗಿಯಾಗಿರುವ ಹೌತಿಗಳು ಆರಂಭದಲ್ಲಿ ಇಸ್ರೇಲ್ ನೊಂದಿಗೆ ಸಂಪರ್ಕ ಹೊಂದಿರುವ ಹಡಗುಗಳ ಮೇಲೆ ದಾಳಿ ಮಾಡಲಾರಂಭಿಸಿದ್ದರು. ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧಕ್ಕೆ ಪ್ರತೀಕಾರವಾಗಿ ಹೌತಿಗಳು ಹಡಗುಗಳ ಮೇಲೆ ದಾಳಿ ಮಾಡುತ್ತಿದ್ದಾರೆ.

ನವೆಂಬರ್ ಮಧ್ಯಭಾಗದಿಂದ, ಸೂಯೆಜ್ ಕಾಲುವೆಯ ಮೂಲಕ ಏಷ್ಯಾ ಮತ್ತು ಯುರೋಪಿಯನ್ ದೇಶಗಳನ್ನು ಸಂಪರ್ಕಿಸುವ ಪ್ರಮುಖ ಕಡಲ ಮಾರ್ಗವಾದ ಕೆಂಪು ಸಮುದ್ರದ ಉದ್ದಕ್ಕೂ ಹಡಗು ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಹಲವಾರು ಜಾಗತಿಕ ಹಡಗು ಕಂಪನಿಗಳು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದವು. ಎಂವಿ ಚೆಮ್ ಪ್ಲೂಟೊ ಮೇಲೆ ಇರಾನ್​ನಿಂದ ಡ್ರೋನ್ ದಾಳಿ ಮಾಡಲಾಗಿದೆ ಎಂದು ಯುಎಸ್ ಹೇಳಿದೆ.

ಇದನ್ನೂ ಓದಿ : ಭಾರತದ ಕಲ್ಲಿದ್ದಲು ಉತ್ಪಾದನೆ ಶೇ 12ರಷ್ಟು ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.