ಮುಂಬೈ: ಹಣದುಬ್ಬರ ತಗ್ಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ರೆಪೋ ದರವನ್ನು ಹೆಚ್ಚಿಸಿದೆ. 25 ಬೇಸ್ ಪಾಯಿಂಟ್ಗಳೊಂದಿಗೆ ಶೇ.6.5 ರಷ್ಟು ಹೆಚ್ಚಳ ಮಾಡಲಾಗಿದೆ. ಇದು ಈ ವರ್ಷದ ಮೊದಲ ರೆಪೋ ಏರಿಕೆಯಾದರೆ, ಕಳೆದ ವರ್ಷದ ಮೇ ತಿಂಗಳಿಂದ 6 ನೇ ಸಲ ಹೆಚ್ಚಿಸಲಾಗಿದೆ. ಒಟ್ಟಾರೆ 250 ಮೂಲ ಅಂಕಗಳನ್ನು ಹೆಚ್ಚಿಸಲಾಗಿದ್ದು, ಸುಸ್ತಿದಾರರಿಗೆ ಹೊರೆಯಾಗಲಿದೆ.
ಶೇ.3.35ರ ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 2023-24 ರ ನೈಜ GDP ಬೆಳವಣಿಗೆಯು 6.4% ಎಂದು ನಿರೀಕ್ಷಿಸಲಾಗಿದೆ. ಈ ಪೈಕಿ ಮೊದಲ ತ್ರೈಮಾಸಿಕ (Q1) ದಲ್ಲಿ 7.8%, ಎರಡನೇ ತ್ರೈಮಾಸಿಕ (Q2) ದಲ್ಲಿ 6.2%, ಮೂರನೇ ತ್ರೈಮಾಸಿಕ (Q3) ದಲ್ಲಿ 6% ಮತ್ತು ನಾಲ್ಕನೇ ತ್ರೈಮಾಸಿಕ (Q4) ದಲ್ಲಿ 5.8% ಎಂದು ಅಂದಾಜಿಸಲಾಗಿದೆ.
ಕೇಂದ್ರ ಬಜೆಟ್ ಬಳಿಕ ನಡೆದ ಮೊದಲ ಹಣಕಾಸು ನೀತಿಯಲ್ಲಿ(ಎಂಪಿಸಿ) ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ವಿತ್ತೀಯ ನೀತಿ ಸಮಿತಿಯು 6 ಸದಸ್ಯರ ಪೈಕಿ 4 ಜನರ ಬಹುಮತದಿಂದ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಷ್ಟು ಹೆಚ್ಚಿಸಲಾಗಿದೆ. ಹಣದುಬ್ಬರವನ್ನು ನಿಯಂತ್ರಿಸುವ ಮುನ್ನೆಚ್ಚರಿಕೆಯಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಚಿಲ್ಲರೆ ಹಣದುಬ್ಬರ ಹೆಚ್ಚಳವಾಗುವ ಸಾಧ್ಯತೆಯಿಂದಾಗಿ ಬಜೆಟ್ ಬಳಿಕ ಆರ್‌ಬಿಐ ರೆಪೋ ದರ ಹೆಚ್ಚಳ ಮಾಡಲಿದೆ ಎಂದ ಭಾವಿಸಲಾಗಿತ್ತು. ಅದರಂತೆ ಈಗ ಸಾಲಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವ ರೆಪೋ ರೇಟ್ ಏರಿಕೆ ಮಾಡಲಾಗಿದೆ. ಇದು ಸತತ 6ನೇ ಬಾರಿಗೆ ಹೆಚ್ಚಳ ಮಾಡಿದಂತಾಗಿದೆ. ಒಟ್ಟಾರೆ 250 ಮೂಲ ಅಂಕಗಳನ್ನು ಹೆಚ್ಚಿಸಿದೆ. ಎಸ್‌ಡಿಎಲ್‌ಆರ್ ಅಥವಾ ಸ್ಥಾಯಿ ಠೇವಣಿ ಸೌಲಭ್ಯ ದರವನ್ನು 6.25% ಕ್ಕೆ ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ ದರ ಮತ್ತು ಬ್ಯಾಂಕ್ ದರವನ್ನು 6.75% ಗೆ ಪರಿಷ್ಕರಿಸಲಾಗಿದೆ.
ಪ್ರಮುಖ ಆರ್ಥಿಕತೆಗಳಲ್ಲಿ ಹಣದುಬ್ಬರವು ಇನ್ನೂ ಗುರಿಗಿಂತ ಉತ್ತಮವಾಗಿದೆ. ಆದರೂ, ಪರಿಸ್ಥಿತಿಯು ಅನಿಶ್ಚಿತವಾಗಿ ಮುಂದುವರಿದಿದೆ. ಹೀಗಾಗಿ ರೆಪೋ ದರವನ್ನು ಹಿಗ್ಗಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ತಿಳಿಸಿದರು.
ಜಿಡಿಪಿ ಬೆಳವಣಿಗೆ ಶೇ.6.4 ನಿರೀಕ್ಷೆ: ಜಾಗತಿಕ ಆರ್ಥಿಕ ಹಿಂಜರಿತದ ಮಧ್ಯೆಯೂ ಪ್ರಸಕ್ತ ಹಣಕಾಸು ವರ್ಷದ 7 ರಷ್ಟಿರುವ ಜಿಡಿಪಿಯು 2024 ರ ಭಾರತದ ಆರ್ಥಿಕ ಬೆಳವಣಿಗೆಯು ಶೇ 6.4 ರಷ್ಟು ಅಂದಾಜಿಸಲಾಗಿದೆ. ಆರ್‌ಬಿಐನ ಆಂತರಿಕ ಸಮೀಕ್ಷೆಯು ಉತ್ಪಾದನೆ, ಸೇವೆಗಳು ಮತ್ತು ಮೂಲಸೌಕರ್ಯ ವಲಯದ ಸಂಸ್ಥೆಗಳು ವ್ಯವಹಾರದ ದೃಷ್ಟಿಕೋನದ ಬಗ್ಗೆ ಆಶಾವಾದಿಯಾಗಿವೆ ಎಂದು ಹೇಳಿದರು.
2023-24 ರಲ್ಲಿ ಜೂನ್ ಮತ್ತು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಇದರ ಬೆಳವಣಿಗೆಯು ಕ್ರಮವಾಗಿ 7.8 ಮತ್ತು 6.2 ಶೇಕಡಾ ಎಂದು ಅಂದಾಜಿಸಲಾಗಿದೆ. ಡಿಸೆಂಬರ್ ಮತ್ತು ಮಾರ್ಚ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯನ್ನು ಕ್ರಮವಾಗಿ ಶೇ.6 ಮತ್ತು ಶೇ.5.8 ಎಂದು ಅಂದಾಜಿಸಲಾಗಿದೆ. ಆರ್ಥಿಕತೆಗೆ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ವಿತ್ತೀಯ ನೀತಿಯಲ್ಲಿ ಚುರುಕು ಮತ್ತು ಎಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ ಎಂದು ಗವರ್ನರ್ ಮಾಹಿತಿ ನೀಡಿದರು.
ಓದಿ: ಅಡೆತಡೆಗಳ ನಡುವೆ.. ಅದಾನಿ ಬಂದರುಗಳು - ಎಸ್ಇಜೆಡ್ ಕಂಪನಿ ಆದಾಯ ಶೇ.18ರಷ್ಟು ಏರಿಕೆ..