ETV Bharat / business

ಪ್ಯಾಕ್ ಮಾಡಲಾದ ಆಹಾರಕ್ಕೆ ಜಿಎಸ್​ಟಿ ಅನ್ವಯ; ಕಡಿಮೆ ಬಾಡಿಗೆ ಹೊಟೇಲುಗಳಿಗೆ ಶೇ.12 ತೆರಿಗೆ

ರಾಜ್ಯಗಳಿಗೆ ಜೂನ್ 2022ರ ನಂತರವೂ ಜಿಎಸ್​ಟಿ ಪರಿಹಾರ ನೀಡುವುದು ಮತ್ತು ಕ್ಯಾಸಿನೊ, ಆನ್ಲೈನ್ ಗೇಮಿಂಗ್ ಮತ್ತು ಕುದುರೆ ರೇಸ್​ಗಳಿಗೆ ಶೇ 28 ರಷ್ಟು ಜಿಎಸ್​ಟಿ ವಿಧಿಸುವ ಬಗ್ಗೆ ಬುಧವಾರದಂದು ಚರ್ಚಿಸಲಾಯಿತು.

Pre-packaged food under GST, 12% tax on hotels with tariff up to Rs 1,000

author img

By

Published : Jun 29, 2022, 6:38 PM IST

ನವದೆಹಲಿ: ಮೊದಲೇ ಪ್ಯಾಕ್ ಮಾಡಲಾದ ಮತ್ತು ಲೇಬಲ್ ಮಾಡಲಾದ ಆಹಾರ ವಸ್ತುಗಳಾದ ಗೋದಿ ಹಿಟ್ಟು, ಚುರುಮುರಿ, ಮೊಸರು/ ಲಸ್ಸಿ/ ಮಜ್ಜಿಗೆ ಮತ್ತು ಪನೀರ್‌ಗಳನ್ನು ಜಿಎಸ್​ಟಿ ಅಡಿಯಲ್ಲಿ ತರುವುದು, ದಿನಕ್ಕೆ 1 ಸಾವಿರ ರೂಪಾಯಿಗೂ ಕಡಿಮೆ ಬಾಡಿಗೆ ಇರುವ ಹೊಟೇಲುಗಳಿಗೆ ನೀಡಲಾದ ವಿನಾಯಿತಿ ಹಿಂಪಡೆಯುವುದು ಮತ್ತು ಖಾದ್ಯ ತೈಲ, ಕಲ್ಲಿದ್ದಲು, ಎಲ್​ಇಡಿ ಲೈಟುಗಳು, ಪ್ರಿಂಟಿಂಗ್ ಇಂಕ್, ಚಾಕುಗಳು ಮತ್ತು ಸೋಲಾರ್ ವಾಟರ್ ಹೀಟರ್​ಗಳ ಮೇಲಿನ ತೆರಿಗೆ ತಿದ್ದುಪಡಿ ಮಾಡುವ ಕ್ರಮಗಳಿಗೆ ಇಂದಿನ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯಗಳಿಗೆ ಜೂನ್ 2022ರ ನಂತರವೂ ಜಿಎಸ್​ಟಿ ಪರಿಹಾರ ನೀಡುವುದು ಮತ್ತು ಕ್ಯಾಸಿನೊ, ಆನ್ಲೈನ್ ಗೇಮಿಂಗ್ ಮತ್ತು ಕುದುರೆ ರೇಸ್​ಗಳಿಗೆ ಶೇ 28 ರಷ್ಟು ಜಿಎಸ್​ಟಿ ವಿಧಿಸುವ ಬಗ್ಗೆ ಬುಧವಾರದಂದು ಚರ್ಚಿಸಲಾಯಿತು.

ಹೈರಿಸ್ಕ್​ ತೆರಿಗೆ ಪಾವತಿದಾರರಿಗೆ ಕಡ್ಡಾಯ ಬಯೊಮೆಟ್ರಿಕ್ ದೃಢೀಕರಣ, ಎಲೆಕ್ಟ್ರಿಕಲ್ ಬಿಲ್ ಮಾಹಿತಿ ಸೇರಿಸುವುದು, ನಿರ್ದಿಷ್ಟ ಪ್ಯಾನ್ ಸಂಖ್ಯೆಗೆ ಸಂಬಂಧಿಸಿದಂತೆ ಅದಕ್ಕೆ ಜೋಡಣೆಯಾದ ಬ್ಯಾಂಕ್ ಖಾತೆಯ ಎಲ್ಲ ಮಾಹಿತಿಯನ್ನು ದೃಢೀಕರಿಸುವುದು ಮತ್ತು ಜಿಯೊ ಟ್ಯಾಗಿಂಗ್​ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.