ಹೈದರಾಬಾದ್: ಸಾರ್ವಜನಿಕ ಭವಿಷ್ಯ ನಿಧಿ (PPF), ಸ್ವಯಂ ಸೇವಾ ಭವಿಷ್ಯ ನಿಧಿ (VPF), ಉದ್ಯೋಗಿ ಭವಿಷ್ಯ ನಿಧಿ (EPF).. ಈ ಮೂರು ಸಹ ಭಾರತದಲ್ಲಿನ ಪ್ರಮುಖ ಸರ್ಕಾರಿ ಪಿಂಚಣಿ ಯೋಜನೆಗಳಾಗಿವೆ. ಈ ಮೂರೂ ನಿವೃತ್ತಿ ಯೋಜನೆಗಳ ಬಡ್ಡಿ ದರಗಳು, ತೆರಿಗೆ ಹಾಗೂ ಹಿಂಪಡೆಯುವ ನಿಯಮಗಳು ಬೇರೆ ಬೇರೆಯಾಗಿವೆ, ನಿಮ್ಮ ಹಣಕಾಸಿನ ಗುರಿಗಳು, ಅರ್ಹತೆಗಳು, ಹೂಡಿಕೆಯ ಸಾಮರ್ಥ್ಯ, ಆದಾಯ ಸೇರಿದಂತೆ ಇತ್ಯಾದಿಗಳ ಆಧಾರದ ಮೇಲೆ ನೀವು ಈ ಸರ್ಕಾರಿ ನಿವೃತ್ತಿ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು.
ಈ ಮೂರು ಯೋಜನೆಗಳಿಗೆ ವಿಧಿಸುವ ತೆರಿಗೆ ಬೇರೆ ಬೇರೆ: ಸರ್ಕಾರದ ನಿಯಮಗಳ ಪ್ರಕಾರ, ಕಂಪನಿಗಳು ಅಥವಾ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ EPF ಯೋಜನೆಯನ್ನು ನೀಡಬೇಕು. ಇನ್ನು ಉದ್ಯೋಗಿಗಳು ಸ್ವಯಂ ಆಗಿ ಪಿಪಿಎಫ್ ಮತ್ತು ವಿಪಿಎಫ್ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಆದರೆ, ಇವುಗಳಿಗೆ ಸಂಬಂಧಿಸಿದ ತೆರಿಗೆಗಳು ಮಾತ್ರ ವಿಭಿನ್ನವಾಗಿವೆ. ಅದಕ್ಕಾಗಿಯೇ ನೀವು ಆಯಾ ಯೋಜನೆಗಳನ್ನು ಆಯ್ಕೆ ಮಾಡುವ ಮೊದಲು ತೆರಿಗೆಗಳ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ಅವಶ್ಯಕವಾಗಿದೆ.
ಸಾರ್ವಜನಿಕ ಭವಿಷ್ಯ ನಿಧಿ: ಭಾರತ ಸರ್ಕಾರವು PPF ಯೋಜನೆಯನ್ನು ನಿರ್ವಹಿಸುತ್ತಿದೆ. ಅಸಲು ಮತ್ತು ಬಡ್ಡಿ ಎರಡನ್ನೂ ಸರ್ಕಾರ ಈ ಯೋಜನೆಗೆ ಖಾತರಿ ನೀಡುತ್ತದೆ. ಈ ಯೋಜನೆ 15 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿ PPF ಆದಾಯದ ಮೇಲೆ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ತುರ್ತು ಸಂದರ್ಭಗಳಲ್ಲಿ, ಪಿಪಿಎಫ್ ಖಾತೆಯಿಂದ ಸ್ವಲ್ಪ ಹಣವನ್ನು ಹಿಂತೆಗೆದುಕೊಳ್ಳಲು ಅವಕಾಶ ಇದೆ. ಇದರ ಮೇಲೆ ಸಾಲ ಸೌಲಭ್ಯವೂ ನಿಮಗೆ ಸಿಗಲಿದೆ. ಆದರೆ ಪಿಪಿಎಫ್‌ನ ಬಡ್ಡಿದರಗಳನ್ನು ಸರ್ಕಾರಿ ಬಾಂಡ್‌ಗಳ ಆದಾಯದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಪ್ರಸ್ತುತ, ಪಿಪಿಎಫ್‌ನ ವಾರ್ಷಿಕ ಬಡ್ಡಿ ದರವು ಶೇಕಡಾ 7.1 ರಷ್ಟು ನಿಗದಿ ಮಾಡಲಾಗಿದೆ. ಇದು ಭಾರತ ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತವಾಗಿದೆ.
PPF ನಿಂದ ಸಿಗುವ ಆದಾಯ ತೆರಿಗೆ ಮುಕ್ತವಾಗಿರುತ್ತದೆ. ಇದು EEE (ವಿನಾಯತಿ, ವಿನಾಯಿತಿ, ವಿನಾಯಿತಿ) ವರ್ಗದಲ್ಲಿ ಬರುತ್ತದೆ. ಇದರರ್ಥ ಪಿಪಿಎಫ್ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ, ಗಳಿಸಿದ ಬಡ್ಡಿ ಮತ್ತು ಅವಧಿ ಮುಕ್ತಾಯದ ಮೇಲೆ ನಿಮ್ಮ ಕೈಗೆ ಸೇರುವ ಆದಾಯದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಪ್ರಮುಖ ಅಂಶ ಎಂದರೆ ಸೆಕ್ಷನ್ 80ಸಿ ಅಡಿಯಲ್ಲಿ, ಪಿಪಿಎಫ್ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತದ ಮೇಲೆ ವಾರ್ಷಿಕ ರೂ.1.5 ಲಕ್ಷದವರೆಗೆ ತೆರಿಗೆ ಕಡಿತಕ್ಕೆ ಕ್ಲೈಮ್ ಮಾಡಬಹುದು.
ಉದ್ಯೋಗಿ ಭವಿಷ್ಯ ನಿಧಿ (EPF): EPF ಅನ್ನು ಅರ್ಹ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸಂಬಳದಿಂದ ಕಡಿತಗೊಳಿಸಲಾಗುತ್ತದೆ. ಉದ್ಯೋಗಿಯು ಉದಾರಹಣೆಗೆ ತನ್ನ ಮೂಲ ವೇತನದ 12 ರಷ್ಟು ಕೊಡುಗೆಯಾಗಿ ಪಾವತಿಸಬೇಕು. ಮತ್ತೊಂದು ಕಡೆಯಿಂದ ಕಂಪನಿಯೂ ನಿಮಗೆ ಅಷ್ಟೇ ಮೊತ್ತದ ಹಣವನ್ನು ಪಾವತಿ ಮಾಡುತ್ತವೆ. ಉದಾಹರಣೆಗೆ ನಿಮ್ಮ ಸಂಬಳದಿಂದ 1800 ರೂ ಕಡಿತವಾದರೆ, ಕಂಪನಿ ಸಹ ಇಪಿಎಫ್‌ಗೆ ಅಷ್ಟೇ ಮೊತ್ತದ ಹಣ ಪಾವತಿಸುತ್ತದೆ. ಹೆಚ್ಚಿನ ಕಂಪನಿಗಳು ಸಂಬಳದಿಂದ ಶೇಕಡಾ 12 + ಡಿಎ ಕಡಿತಗೊಳಿಸುತ್ತವೆ. ಅಲ್ಲದೆ, ಈ ಮೊತ್ತಕ್ಕೆ ಸಮನಾದ ಮೊತ್ತವನ್ನು ಉದ್ಯೋಗಿಯ ಇಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಉದ್ಯೋಗಿಗಳ ಇಪಿಎಫ್ ಅನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ನಿರ್ವಹಿಸುತ್ತದೆ. 2022-23 ರ ಆರ್ಥಿಕ ವರ್ಷದಲ್ಲಿ ಇಪಿಎಫ್ ಬಡ್ಡಿ ದರವು ಶೇಕಡಾ 8.15ಕ್ಕೆ ನಿಗದಿ ಮಾಡಲಾಗಿದೆ.
EPF ಮೇಲೆ ತೆರಿಗೆ: 2021ರ ಕೇಂದ್ರ ಬಜೆಟ್ನಲ್ಲಿ EPF ತೆರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಉದ್ಯೋಗಿಯು ಆರ್ಥಿಕ ವರ್ಷದಲ್ಲಿ ರೂ.2.5 ಲಕ್ಷಕ್ಕಿಂತ ಹೆಚ್ಚು ಹಣವನ್ನು ಇಪಿಎಫ್‌ಗೆ ಪಾವತಿಸುತ್ತಿದ್ದರೆ. ಅದಕ್ಕೆ ಖಂಡಿತವಾಗಿಯೂ ತೆರಿಗೆ ವಿಧಿಸಲಾಗುತ್ತದೆ. ಆದರೆ, ಈ ಬಡ್ಡಿಯು ಟಿಡಿಎಸ್‌ಗೆ ಒಳಪಟ್ಟಿರುತ್ತದೆ. ಆದಾಗ್ಯೂ, ಉದ್ಯೋಗಿಯ ಇಪಿಎಫ್ ಖಾತೆಗೆ ಕಂಪನಿ ಮಾಲೀಕರು ನೀಡಿದ ಕೊಡುಗೆಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಕ್ಲಿಯರ್ ಟ್ಯಾಕ್ಸ್ ಪ್ರಕಾರ, 2.5 ಲಕ್ಷ ಇಪಿಎಫ್ ಮೇಲೆ ವಿಧಿಸುವ ಬಡ್ಡಿಯು ವಿಪಿಎಫ್ ಕೊಡುಗೆಯನ್ನೂ ಒಳಗೊಂಡಿರುತ್ತದೆ.
ಐಟಿ ಕಾಯಿದೆಯ ಸೆಕ್ಷನ್ 194 ಎ ಪ್ರಕಾರ, ರೂ. 2.5 ಲಕ್ಷ ಮಿತಿಗಿಂತ ಹೆಚ್ಚಿನ ಇಪಿಎಫ್ ಕೊಡುಗೆ ಹೊಂದಿರುವ ಖಾತೆಗಳ ಬಡ್ಡಿ ಆದಾಯದ ಮೇಲೆ ಶೇಕಡಾ 10 ರಷ್ಟು ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ನಿವಾಸಿ ಭಾರತೀಯರಿಗೆ, ಒಂದು ಹಣಕಾಸು ವರ್ಷದಲ್ಲಿ ಪಿಎಫ್ ಖಾತೆಯಲ್ಲಿ ಗಳಿಸಿದ ಬಡ್ಡಿಯು 5000 ಮೀರಿದರೆ, ಟಿಡಿಎಸ್ ಕಡಿತಗೊಳಿಸಲಾಗುತ್ತದೆ. 2020 - 21ರ ಆರ್ಥಿಕ ವರ್ಷದಿಂದ ಆರ್ಥಿಕ ವರ್ಷದಲ್ಲಿ ಉದ್ಯೋಗದಾತರು ಪಾವತಿಸಿದ ಇಪಿಎಫ್ ಕೊಡುಗೆ 7.5 ಲಕ್ಷ ರೂ.ಗಳನ್ನು ಮೀರಿದರೆ.. ಅದರ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಅಲ್ಲದೇ, ಎನ್‌ಪಿಎಫ್ ಮತ್ತು ನಿವೃತ್ತಿ ನಿಧಿಗಳು ರೂ.7.5 ಲಕ್ಷಗಳನ್ನು ಮೀರಿದರೆ ತೆರಿಗೆ ವಿಧಿಸಲಾಗುತ್ತದೆ.
5 ವರ್ಷಗಳ ನಂತರ ತೆರಿಗೆ ಇಲ್ಲ!: ಇಪಿಎಫ್ ಲಾಕ್ ಇನ್ ಪಿರಿಯಡ್ ಐದು ವರ್ಷಗಳ ನಿಯಮಿತ ಸೇವೆಯ ನಂತರ, ಉದ್ಯೋಗಿ ಇಪಿಎಫ್ ಅನ್ನು ಹಿಂಪಡೆದರೆ.. ಅದಕ್ಕೆ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ. ವಿಶೇಷವಾಗಿ, ನಾವು ನಮ್ಮ EPF ಕೊಡುಗೆ ಮತ್ತು ಅದರ ಮೇಲೆ ಗಳಿಸಿದ ಬಡ್ಡಿಗೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಆದರೆ, ಇಪಿಎಫ್ ಹಣವನ್ನು 5 ವರ್ಷಗಳ ನಿರ್ದಿಷ್ಟ ಅವಧಿಯೊಳಗೆ ಹಿಂಪಡೆದರೆ, ನಂತರ ಯಾವುದೇ ತೆರಿಗೆ ವಿನಾಯಿತಿ ಲಭ್ಯವಿಲ್ಲ. ಅಲ್ಲದೇ, ಆರಂಭಿಕ ಇಪಿಎಫ್ ಹಿಂಪಡೆಯುವ ಮೊತ್ತದ ಮೇಲೆ ಟಿಡಿಎಸ್ 10 ಪ್ರತಿಶತದವರೆಗೆ ಕಡಿತಗೊಳ್ಳುತ್ತದೆ. ಸೆಕ್ಷನ್ 80 ಸಿ ಪ್ರಕಾರ, ಉದ್ಯೋಗಿಯು ಇಪಿಎಫ್ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತದ ಮೇಲೆ ವಾರ್ಷಿಕ ರೂ.1.5 ಲಕ್ಷದವರೆಗೆ ತೆರಿಗೆ ಕಡಿತದ ಲಾಭವನ್ನು ಪಡೆಯಬಹುದು.
ಸ್ವಯಂಪ್ರೇರಿತ ಭವಿಷ್ಯ ನಿಧಿ (VPF): ಉದ್ಯೋಗಿಗಳು ಈ ಯೋಜನೆಯಲ್ಲಿ ಸ್ವಯಂಪ್ರೇರಣೆಯಿಂದ ಹೂಡಿಕೆ ಮಾಡಬಹುದು. ಅವನಿಗೆ ಇಷ್ಟವಿಲ್ಲದಿದ್ದರೆ VPF ಯೋಜನೆಯಿಂದ ಹೊರಗುಳಿಯಬಹುದು. ಅದಕ್ಕಾಗಿಯೇ ಇದನ್ನು ಸ್ವಯಂಪ್ರೇರಿತ ಭವಿಷ್ಯ ನಿಧಿ ಎಂದು ಕರೆಯಲಾಗುತ್ತದೆ. ಈ ವಿಪಿಎಫ್ ಯೋಜನೆಯಲ್ಲಿ ಉದ್ಯೋಗಿ ತನ್ನ ಇಪಿಎಫ್ ಖಾತೆಗೆ ಶೇಕಡಾ 12 ಕ್ಕಿಂತ ಹೆಚ್ಚಿನ ಕೊಡುಗೆಯನ್ನು ಹಾಕಬಹುದು. ವಾಸ್ತವವಾಗಿ, ಈ VPF ಯೋಜನೆಯಲ್ಲಿ ಉದ್ಯೋಗಿ ತನ್ನ ಮೂಲ ವೇತನ + DA ಯ 100 ಪ್ರತಿಶತದವರೆಗೆ ಹೂಡಿಕೆ ಮಾಡಬಹುದು. ಪ್ರಸ್ತುತ ಪಿಪಿಪಿ ಮತ್ತು ಇಪಿಎಫ್‌ಗೆ ಬಡ್ಡಿದರಗಳನ್ನು ನೀಡಲಾಗುತ್ತಿದೆ. ಪ್ರಸ್ತುತ, VPF ಬಡ್ಡಿ ದರವು 8.15 ಶೇಕಡಾ. ವಾಸ್ತವವಾಗಿ VPF ಯೋಜನೆಯು EEE (ವಿನಾಯತಿ, ವಿನಾಯಿತಿ, ವಿನಾಯಿತಿ) ವರ್ಗದ ಅಡಿಯಲ್ಲಿ ಬರುತ್ತದೆ.
ಇದನ್ನು ಓದಿ: ಕ್ರೆಡಿಟ್ ಕಾರ್ಡ್ ಮಿತಿ ಇಳಿಕೆಗೆ ಕಾರಣಗಳೇನು ಗೊತ್ತಾ?