ETV Bharat / business

IT Return: ಮೊದಲ ಬಾರಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಯೋಜಿಸುತ್ತಿದ್ದೀರಾ?.. ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ! - ಆದಾಯ ತೆರಿಗೆ ಪೋರ್ಟಲ್‌

ಆದಾಯ ತೆರಿಗೆ ರಿಟರ್ನ್​ ಸಲ್ಲಿಸುವುದು ಕಾನೂನು ಬದ್ಧ ಜವಾಬ್ದಾರಿ. ಉದ್ಯೋಗ ಅಥವಾ ವೃತ್ತಿ ಅಥವಾ ವ್ಯಾಪಾರದ ಮೂಲಕ ಆದಾಯ ಗಳಿಸುವವರು ಐಟಿ ರಿಟರ್ನ್​ ಸಲ್ಲಿಸುವುದರಿಂದ ಅನೇಕ ಪ್ರಯೋಜನಗಳಿವೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಆದಾಯ ತೆರಿಗೆ ರಿಟರ್ನ್​ ಸಲ್ಲಿಸುವವರು ಏನು ಮಾಡಬೇಕು?. ಯಾವ ಮುನ್ನೆಚ್ಚರಿಕೆ ವಹಿಸಬೇಕು?. ಇಲ್ಲಿದೆ ಮಾಹಿತಿ...

Planning to filing income tax return for the first time?..Here is the information
IT Return: ಮೊದಲ ಬಾರಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಯೋಜಿಸುತ್ತಿದ್ದೀರಾ?.. ಏನು ಮಾಡಬೇಕೆಂಬ ಮಾಹಿತಿ ಇಲ್ಲಿದೆ..
author img

By

Published : Jul 1, 2023, 3:53 PM IST

ಹೈದರಾಬಾದ್​: ಆದಾಯ ತೆರಿಗೆ ರಿಟರ್ನ್​ ತುಂಬಾ ಕಷ್ಟಕರವಾದ ಕೆಲಸ ಎಂದು ಬಹುತೇಕರು ಭಾವಿಸುತ್ತಾರೆ. ಈ ಬಗ್ಗೆ ಸ್ವಲ್ಪ ಆತಂಕ ಇರುವುದು ಸಹಜ. ಯಾಕೆಂದರೆ, ಈ ಮೊದಲು ಇದು ಸಾಕಷ್ಟು ಸಂಕೀರ್ಣ ಪ್ರಕ್ರಿಯೆಯಾಗಿತ್ತು. ಆದರೆ, ಇದೀಗ ತೆರಿಗೆ ಪಾವತಿದಾರರು ಸುಲಭವಾಗಿ ರಿಟರ್ನ್​ಸಲ್ಲಿಸಲು ಆದಾಯ ತೆರಿಗೆ ಇಲಾಖೆಯು ಹಲವು ಕ್ರಮಗಳನ್ನು ಕೈಗೊಂಡಿದೆ.

ಇದರೊಂದಿಗೆ ಒಂದಿಷ್ಟು ಮಾಹಿತಿ, ಜಾಗೃತಿ ಹೊಂದಿದ್ದರೆ ಸಾಕು. ಯಾರು ಬೇಕಾದರೂ ತಾವಾಗಿಯೇ ರಿಟರ್ನ್​ ಫೈಲ್ ಮಾಡಬಹುದು. ಆದಾಯಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಇದ್ದರೆ, ಆದಾಯ ತೆರಿಗೆ ರಿಟರ್ನ್​ ಸಲ್ಲಿಸಲು ಫಾರ್ಮ್-16 ಮುಖ್ಯವಾಗಿ ಬಳಸಬೇಕಾಗುತ್ತದೆ. ಇದು ನಿಮ್ಮ ಆದಾಯ, ಅರ್ಹವಾದ ಕಡಿತಗಳು, ಹೂಡಿಕೆಗಳು ಇತ್ಯಾದಿ ಮಾಹಿತಿಯನ್ನು ಒಳಗೊಂಡಿರುತ್ತದೆ.

ಜೊತೆಗೆ ನಿಮ್ಮ ಕಳೆದ ವರ್ಷದ ಸಂಬಳದ ದಾಖಲೆ, ಫಾರ್ಮ್ 26AS ಅನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ನಿಮ್ಮ ಒಟ್ಟು ಆದಾಯವನ್ನು ನಿಖರವಾಗಿ ಲೆಕ್ಕಾಚಾರ ಮಾಡಲು ಇದು ನಿಮಗೆ ಸಹಾಯ ಮಾಡುತ್ತವೆ. ನಿಮ್ಮ ಉದ್ಯೋಗದಾತರು/ಕಂಪನಿ ಕಡೆಯಿಂದ ಫಾರ್ಮ್-16 ನಿಮಗೆ ನೀಡಲಾಗುತ್ತದೆ. ಇದು ಕಳೆದ ಹಣಕಾಸು ವರ್ಷದಲ್ಲಿ ನೀವು ಗಳಿಸಿದ ಆದಾಯದ ಪುರಾವೆ. ಭವಿಷ್ಯದಲ್ಲಿ ನೀವು ಸಾಲ ಪಡೆಯಲು ಬಯಸಿದಾಗ ಇದು ನೆರವಿಗೆ ಬರುತ್ತದೆ.

ನಿಮ್ಮ ಸಂಬಳವನ್ನು ಹೊರತುಪಡಿಸಿ ಆದಾಯದ ಮಾಹಿತಿಯು ಫಾರ್ಮ್​-16ಎರಲ್ಲಿ ಇರುತ್ತದೆ. ನೀವು ಹೂಡಿಕೆ ಮಾಡುವ ಕಂಪನಿಗಳು ಇದನ್ನು ಒದಗಿಸುತ್ತವೆ. ನಿಮ್ಮ ಒಟ್ಟು ಆದಾಯದ ಮೇಲೆ ಎಷ್ಟು ತೆರಿಗೆ ಕಡಿತಗೊಳಿಸಲಾಗಿದೆ ಎಂಬ ವಿವರಗಳು ನಮೂನೆ 26ಎಎಸ್​ನಲ್ಲಿ ತಿಳಿಯುತ್ತದೆ. ಇ-ಫೈಲಿಂಗ್ ವೆಬ್‌ಸೈಟ್‌ಗೆ ಹೋಗಿ ಮತ್ತು ಫಾರ್ಮ್ 26ಎಎಸ್ಅನ್ನು ಡೌನ್‌ಲೋಡ್ ಮಾಡಬಹುದು.

ಸ್ಲ್ಯಾಬ್‌ಗಳ ಬಗ್ಗೆ ತಿಳಿದುಕೊಳ್ಳಿ: ನಿಮ್ಮ ಒಟ್ಟು ಆದಾಯ ಮತ್ತು ಅನ್ವಯವಾಗುವ ತೆರಿಗೆ ವಿವರಗಳ ಹಾಗೂ ಸ್ಲ್ಯಾಬ್‌ಗಳ ಬಗ್ಗೆ ತಿಳಿದುಕೊಳ್ಳಿ. ನಿಮ್ಮ ಆದಾಯ ಶ್ರೇಣಿ ಯಾವ ಕಾಲಂನಲ್ಲಿ ಬರುತ್ತದೆ ಎಂಬುದನ್ನು ನಿರ್ಧರಿಸುವುದು ಮುಖ್ಯವಾಗಿದೆ. ಪ್ರಸ್ತುತ ನಮ್ಮ ದೇಶದಲ್ಲಿ ಎರಡು ರೀತಿಯ ತೆರಿಗೆ ವ್ಯವಸ್ಥೆಗಳಿವೆ. ಹಳೆಯ ತೆರಿಗೆ ಪದ್ಧತಿಯಲ್ಲಿ ಅನುಮತಿಸಲಾದ ವಿನಾಯಿತಿಗಳು ಲಭ್ಯವಿವೆ. ಹೊಸ ತೆರಿಗೆ ಪದ್ಧತಿಯಲ್ಲಿ ಯಾವುದೇ ವಿನಾಯಿತಿಗಳಿಲ್ಲದೇ ಅನ್ವಯವಾಗುವ ಸ್ಲ್ಯಾಬ್ ಪ್ರಕಾರ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಯಾವುದು ನಿಮಗೆ ಪ್ರಯೋಜನಕಾರಿ ಎಂದು ಮೊದಲು ಅರಿತುಕೊಳ್ಳಿ.

ಈ ಬಗ್ಗೆ ಆದಾಯ ತೆರಿಗೆ ಪೋರ್ಟಲ್‌ನಲ್ಲಿ ಮಾಹಿತಿ ಲಭ್ಯವಿದೆ. ವಿನಾಯಿತಿಗಳ ವಿಷಯದಲ್ಲಿ ಕಾನೂನಿನಿಂದ ಅನುಮತಿಸಲಾದ ಮುಖ್ಯ ವಿನಾಯಿತಿಯು ವಿಭಾಗ 80ಸಿ ಆಗಿದೆ. ಇಪಿಎಫ್​​, ವಿಪಿಎಫ್​, ಪಿಪಿಎಫ್​, ಜೀವ ವಿಮಾ ಪ್ರೀಮಿಯಂ, ಇಎಲ್​ಎಸ್​ಎಸ್​, ಗೃಹ ಸಾಲದ ಅಸಲು, ಮಕ್ಕಳ ಬೋಧನಾ ಶುಲ್ಕಗಳಂತಹ ವಿವಿಧ ರೀತಿಯ ಹೂಡಿಕೆಗಳು ಮತ್ತು ವೆಚ್ಚಗಳು ಈ ವಿಭಾಗದ ಅಡಿ ಬರುತ್ತವೆ. ಇವೆಲ್ಲ ಸೇರಿ ಗರಿಷ್ಠ ಮಿತಿ ಕೇವಲ 1,50,000 ರೂಪಾಯಿ ಎಂಬುದನ್ನು ಮರೆಯಬೇಡಿ.

ಆರೋಗ್ಯ ವಿಮಾ ಪಾಲಿಸಿಗಾಗಿ ಪಾವತಿಸಿದ ಪ್ರೀಮಿಯಂ ಅನ್ನು ಸೆಕ್ಷನ್ 80ಡಿ ಅಡಿಯಲ್ಲಿ ಕ್ಲೈಮ್ ಮಾಡಬಹುದು. ಎನ್​ಪಿಎಸ್​ಗೆ ಪಾವತಿಸಿದ 50,000 ರೂಪಾಯಿ ಸೆಕ್ಷನ್ 80ಸಿಸಿಡಿ (1ಬಿ) ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಹೊಂದಿದೆ. ದೇಣಿಗೆಗಳನ್ನು ಸೆಕ್ಷನ್ 80ಜಿ ಅಡಿಯಲ್ಲಿ ಕ್ಲೈಮ್ ಮಾಡಬಹುದು. ತೆರಿಗೆ ಹೊರೆಯನ್ನು ಕಡಿಮೆ ಮಾಡಲು ವಿನಾಯಿತಿಗಳನ್ನು ಪಡೆಯಬಹುದು. ಇಲ್ಲಿ ನೆನಪಿಡಬೇಕಾದ ಅಂಶವೆಂದರೆ 2023ರ ಮಾರ್ಚ್ 31ರವರೆಗೆ ಮಾಡಿದ ಹೂಡಿಕೆಗಳನ್ನು ಮಾತ್ರ ವಿನಾಯಿತಿಗಳಿಗಾಗಿ ಕ್ಲೈಮ್ ಮಾಡಬಹುದು.

ಟಿಡಿಎಸ್ ಎಷ್ಟು?: ನಿಮ್ಮ ಉದ್ಯೋಗದಾತರು ಒದಗಿಸಿದ ಫಾರ್ಮ್ 16 ಹಾಗೂ ನಿಮ್ಮ ಫಾರ್ಮ್ 26ಎಎಸ್​ನಲ್ಲಿನ ಮಾಹಿತಿಯೊಂದಿಗೆ ಹೋಲಿಕೆ ಮಾಡಿ. ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್) ಮೊತ್ತವನ್ನು ಎರಡು ಬಾರಿ ಪರಿಶೀಲಿಸಿ. ಯಾವುದೇ ವ್ಯತ್ಯಾಸಗಳಿಲ್ಲದಿದ್ದರೆ ಮಾತ್ರ ತೆರಿಗೆ ರಿಟರ್ನ್​ಸಲ್ಲಿಸಬಹುದು. ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ತಕ್ಷಣವೇ ನಿಮ್ಮ ಆಡಳಿತದ ಗಮನಕ್ಕೆ ತಂದು ಸರಿಪಡಿಸಲು ಹೇಳಿ.

ವಂಚಕರ ಬಗ್ಗೆ ಎಚ್ಚರ ವಹಿಸಿ: ಆದಾಯ ತೆರಿಗೆ ಇಲಾಖೆಯ ಪೋರ್ಟಲ್​ನಲ್ಲಿ ಸುಲಭವಾಗಿ ರಿಟರ್ನ್ ಸಲ್ಲಿಸಲು ಅಗತ್ಯವಿರುವ ಎಲ್ಲ ಮಾಹಿತಿ ಲಭ್ಯವಿದೆ. ನೀವು ವಿಡಿಯೋ ಮತ್ತು ಚಾಟ್‌ಬಾಟ್‌ಗಳ ಮೂಲಕ ತೆಗೆದುಕೊಳ್ಳಬಹುದು. ನೀವು ತುಂಬಾ ಗೊಂದಲಕ್ಕೊಳಗಾದಾಗ ತೆರಿಗೆ ವೃತ್ತಿಪರರನ್ನು ಸಂಪರ್ಕಿಸಬಹುದು. ತಜ್ಞರ ಸಹಾಯದಿಂದ ಪಡೆಯಬಹುದು. ಈಗ ಕೆಲವು ಕಂಪನಿಗಳು ಆನ್‌ಲೈನ್‌ನಲ್ಲಿಯೂ ರಿಟರ್ನ್ ಫೈಲ್ ಮಾಡಲು ಸಹಾಯ ಮಾಡುತ್ತಿವೆ. ಕೆಲವರು ರಿಟರ್ನ್​ ಸಲ್ಲಿಸುವುದಾಗಿ ಹೇಳುತ್ತಾರೆ. ನಿಮ್ಮ ಎಲ್ಲ ಹಣಕಾಸಿನ ವಿವರಗಳನ್ನು ತೆಗೆದುಕೊಳ್ಳುವ ಮೂಲಕ ವಂಚನೆಯ ಅಪಾಯವೂ ಇದೆ. ಅಂತಹವರ ಬಗ್ಗೆ ಜಾಗರೂಕರಾಗಿರಿ.

ಅವಧಿಗೆ ಮುನ್ನ ಸಲ್ಲಿಸಿ: ಹಿಂದಿನ ಹಣಕಾಸು ವರ್ಷ 2022-23ಕ್ಕೆ (ಮೌಲ್ಯಮಾಪನ ವರ್ಷ 2023-24) ರಿಟರ್ನ್​ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಇದಕ್ಕೂ ಮುನ್ನ ರಿಟರ್ನ್ ಸಲ್ಲಿಸುವುದು ಉತ್ತಮ. ಕೊನೆಯ ಕ್ಷಣದವರೆಗೆ ಕಾಯಬೇಡಿ. ನಿಗದಿತ ದಿನಾಂಕದ ನಂತರ ರಿಟರ್ನ್​ಸಲ್ಲಿಸಿದರೆ ಆದಾಯದ ಆಧಾರದ ಮೇಲೆ 1,000ರಿಂದ ರೂ.5,000 ರೂಪಾಯಿವರೆಗಿನ ಶುಲ್ಕ ಅನ್ವಯಿಸುತ್ತದೆ.

ಆದಾಯದ ಮೂಲವನ್ನು ಅವಲಂಬಿಸಿ ಸರಿಯಾದ ರಿಟರ್ನ್ ಫಾರ್ಮ್ ಆಯ್ಕೆ ಮಾಡಬೇಕು. ಸಂಬಳ, ಮನೆಯ ಆದಾಯ, ಬಡ್ಡಿ ಇತ್ಯಾದಿ ಸೇರಿದಂತೆ 50 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಎಲ್ಲರಿಗೂ ಐಟಿಆರ್​​1 ಅನ್ವಯಿಸುತ್ತದೆ. ಅಲ್ಪಾವಧಿ ಮತ್ತು ದೀರ್ಘಾವಧಿಯ ಬಂಡವಾಳ ಲಾಭ ಹೊಂದಿರುವವರು ಐಟಿಆರ್​2ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾವ ನಮೂನೆಯು ನಿಮಗೆ ಅನ್ವಯಿಸುತ್ತದೆ ಎಂಬುದರ ವಿವರಗಳು ಆದಾಯ ತೆರಿಗೆ ಪೋರ್ಟಲ್‌ನಲ್ಲಿ ಲಭ್ಯವಿರುತ್ತವೆ.

ಹೊಸ ರಿಟರ್ನ್ ಸಲ್ಲಿಸುವವರು ಮೊದಲು ಪ್ಯಾನ್​ಅನ್ನು ಆದಾಯ ತೆರಿಗೆ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಈ ಸಮಯದಲ್ಲಿ ಇಮೇಲ್, ಫೋನ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ಮತ್ತು ವಿಳಾಸವನ್ನು ನಮೂದಿಸಬೇಕು. ಆಗ ಮಾತ್ರ ರಿಟರ್ನ್​ ಫೈಲ್ ಮಾಡಬಹುದು.

ಇದನ್ನೂ ಓದಿ: Tax Collection; 3.80 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹ: ಶೇ 11ರಷ್ಟು ಹೆಚ್ಚ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.