ETV Bharat / business

ಅಂತರರಾಷ್ಟ್ರೀಯ ಕರೆನ್ಸಿಯಾಗಿ ರೂಪಾಯಿ; ಸಿಗದ ನಿರೀಕ್ಷಿತ ಯಶಸ್ಸು - ಕಚ್ಚಾ ತೈಲ

ರೂಪಾಯಿಯನ್ನು ಅಂತರರಾಷ್ಟ್ರೀಯ ಕರೆನ್ಸಿಯಾಗಿ ಬಳಕೆಗೆ ತರುವ ಪ್ರಯತ್ನಗಳಿಗೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ ಎಂದು ತೈಲ ಸಚಿವಾಲಯವು ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದೆ.

rupee-as-an-international-currency-unexpected-level-of-success

author img

By PTI

Published : Dec 24, 2023, 6:16 PM IST

ನವದೆಹಲಿ: ಕಚ್ಚಾ ತೈಲ ಆಮದು ವ್ಯವಹಾರಕ್ಕೆ ವಿಶ್ವದ ರಾಷ್ಟ್ರಗಳು ಭಾರತೀಯ ರೂಪಾಯಿಯನ್ನು ಡೀಫಾಲ್ಟ್​ ಕರೆನ್ಸಿಯಾಗಿ ಬಳಸಬೇಕೆಂಬ ಭಾರತದ ಪ್ರಯತ್ನಗಳಿಗೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಹಣ ವಾಪಸು ಕಳುಹಿಸುವುದು ಮತ್ತು ಹೆಚ್ಚಿನ ವಹಿವಾಟು ವೆಚ್ಚಗಳ ಬಗ್ಗೆ ತೈಲ ಪೂರೈಕೆದಾರರು ಕಳವಳ ವ್ಯಕ್ತಪಡಿಸಿರುವುದೇ ಇದಕ್ಕೆ ಕಾರಣ ಎಂದು ತೈಲ ಸಚಿವಾಲಯವು ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದೆ.

ಅಂತರರಾಷ್ಟ್ರೀಯ ವ್ಯಾಪಾರ ಅಭ್ಯಾಸಗಳ ಪ್ರಕಾರ ಯುಎಸ್ ಡಾಲರ್ ಕಚ್ಚಾ ತೈಲದ ಆಮದಿನ ಎಲ್ಲಾ ಒಪ್ಪಂದಗಳಿಗೆ ಡೀಫಾಲ್ಟ್ ಪಾವತಿ ಕರೆನ್ಸಿಯಾಗಿದೆ. ಆದಾಗ್ಯೂ ಭಾರತೀಯ ಕರೆನ್ಸಿಯನ್ನು ಅಂತರರಾಷ್ಟ್ರೀಯಗೊಳಿಸುವ ಪ್ರಯತ್ನದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜುಲೈ 11, 2022 ರಂದು ಆಮದುದಾರರಿಗೆ ರೂಪಾಯಿಯಲ್ಲಿ ಪಾವತಿಸಲು ಮತ್ತು ರಫ್ತುದಾರರಿಗೆ ರೂಪಾಯಿಯಲ್ಲಿ ಮೊತ್ತ ಪಡೆಯಲು ಅವಕಾಶ ನೀಡಿತ್ತು. ಆದರೆ ಆಯ್ದ ಕೆಲವು ದೇಶಗಳೊಂದಿಗೆ ತೈಲೇತರ ವ್ಯಾಪಾರದಲ್ಲಿ ಸ್ವಲ್ಪ ಯಶಸ್ಸು ಕಂಡುಬಂದಿದ್ದರೂ, ತೈಲ ರಫ್ತುದಾರರು ಮಾತ್ರ ರೂಪಾಯಿಯನ್ನು ದೂರವಿಟ್ಟಿದ್ದಾರೆ.

"2022-23ರ ಹಣಕಾಸು ವರ್ಷದಲ್ಲಿ ತೈಲ ಪಿಎಸ್​ಯುಗಳು ಯಾವುದೇ ಕಚ್ಚಾ ತೈಲ ಆಮದನ್ನು ಭಾರತೀಯ ರೂಪಾಯಿಯಲ್ಲಿ ನಡೆಸಿಲ್ಲ. ಕಚ್ಚಾ ತೈಲ ಪೂರೈಕೆದಾರರು (ಯುಎಇಯ ಎಡಿಎನ್ಒಸಿ ಸೇರಿದಂತೆ) ಆದ್ಯತೆಯ ಕರೆನ್ಸಿಯಲ್ಲಿ ಹಣವನ್ನು ವಾಪಸು ಕಳುಹಿಸುವ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ ಮತ್ತು ವಿನಿಮಯ ಏರಿಳಿತದ ಅಪಾಯಗಳಿಂದಾಗಿ ಹೆಚ್ಚಿನ ವಹಿವಾಟು ವೆಚ್ಚಗಳನ್ನು ಎತ್ತಿ ತೋರಿಸಿದ್ದಾರೆ" ಎಂದು ತೈಲ ಸಚಿವಾಲಯ ಸಂಸದೀಯ ಇಲಾಖೆಗೆ ಸಂಬಂಧಿಸಿದ ಸ್ಥಾಯಿ ಸಮಿತಿಗೆ ತಿಳಿಸಿದೆ.

ಕಚ್ಚಾ ತೈಲ ಪೂರೈಕೆದಾರರು ಹೆಚ್ಚುವರಿ ವಹಿವಾಟು ವೆಚ್ಚವನ್ನು ಐಒಸಿಗೆ ವರ್ಗಾಯಿಸುವುದರಿಂದ ತಾನು ಹೆಚ್ಚಿನ ವಹಿವಾಟು ವೆಚ್ಚವನ್ನು ಭರಿಸಬೇಕಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ತಿಳಿಸಿದೆ ಎಂದು ಸಚಿವಾಲಯ ಹೇಳಿದೆ.

ಪಾಲುದಾರ ವ್ಯಾಪಾರ ದೇಶದಲ್ಲಿ ರೂಪಾಯಿ ವೋಸ್ಟ್ರೋ ಖಾತೆಗಳನ್ನು ತೆರೆಯಲು ಆರ್​ಬಿಐ ಕಳೆದ ವರ್ಷ ಅನುಮತಿ ನೀಡಿತ್ತು. ಈ ಕಾರ್ಯವಿಧಾನದ ಅಡಿಯಲ್ಲಿ, ಆಮದು ಮಾಡಿಕೊಳ್ಳುವ ಭಾರತೀಯ ಆಮದುದಾರರು ಭಾರತೀಯ ರೂಪಾಯಿಯಲ್ಲಿ ಪಾವತಿ ಮಾಡುತ್ತಾರೆ. ಇದನ್ನು ಸಾಗರೋತ್ತರ ಮಾರಾಟಗಾರ/ಪೂರೈಕೆದಾರರಿಂದ ಸರಕುಗಳು ಅಥವಾ ಸೇವೆಗಳ ಪೂರೈಕೆಗಾಗಿ ಇನ್ವಾಯ್ಸ್​ಗಳ ವಿರುದ್ಧ ಪಾಲುದಾರ ದೇಶದ ಕರೆಸ್ಪಾಂಡೆಂಟ್ ಬ್ಯಾಂಕಿನ ವಿಶೇಷ ವೋಸ್ಟ್ರೋ ಖಾತೆಗೆ ಜಮಾ ಮಾಡಲಾಗುತ್ತದೆ.

2022-23ರ ಹಣಕಾಸು ವರ್ಷದಲ್ಲಿ (ಏಪ್ರಿಲ್ 2022 ರಿಂದ ಮಾರ್ಚ್ 2023) ಭಾರತವು 232.7 ಮಿಲಿಯನ್ ಟನ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು 157.5 ಬಿಲಿಯನ್ ಡಾಲರ್ ಖರ್ಚು ಮಾಡಿದೆ. ಇರಾಕ್, ಸೌದಿ ಅರೇಬಿಯಾ, ರಷ್ಯಾ ಮತ್ತು ಯುಎಇ ಭಾರತದ ಅತಿದೊಡ್ಡ ಪೂರೈಕೆದಾರ ದೇಶಗಳಾಗಿವೆ. ಇದರಲ್ಲಿ 141.2 ಮಿಲಿಯನ್ ಟನ್ ಮಧ್ಯಪ್ರಾಚ್ಯದಿಂದ ಬಂದಿದ್ದು, ಇದು ಒಟ್ಟು ಪೂರೈಕೆಯ ಶೇಕಡಾ 58ರಷ್ಟಿದೆ.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮ ತ್ಯಜಿಸಲಿದ್ದಾರೆ ಶೇ 50ಕ್ಕೂ ಹೆಚ್ಚು ಜನ; ಅಧ್ಯಯನ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.