ಸ್ಯಾನ್ ಫ್ರಾನ್ಸಿಸ್ಕೊ: ವಿಶ್ವದ ಶ್ರೀಮಂತ, ಟೆಸ್ಲಾ ಸಿಇಒ ಮಾಲೀಕ ಎಲೋನ್ ಮಸ್ಕ್, ತಮ್ಮ ಕಂಪನಿಯ ಹಣವನ್ನು ದುರುಪಯೋಗ ಪಡಿಸಿಕೊಂಡು ಗಾಜಿನ ಮನೆ ನಿರ್ಮಾಣಕ್ಕೆ ಮುಂದಾಗಿರುವ ಸಂಬಂಧ ಅಮೆರಿಕದ ಫೆಡೆರಲ್ ಪ್ರಾಸಿಕ್ಯೂಟರ್ ತನಿಖೆ ನಡೆಸಿದೆ. ಈ ಆರೋಪವನ್ನು ನಿರಾಕರಿಸಿರುವ ಮಸ್ಕ್, ತಾವು ಟೆಸ್ಲಾ ಹಣದಿಂದ ಯಾವುದೇ ಗಾಜಿನ ಮನೆಯ ನಿರ್ಮಾಣ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಡಿಪಾರ್ಟಮೆಂಟ್ ಆಫ್ ಜಸ್ಟೀಸ್ (ಡಿಒಜಿ) ಮತ್ತು ಸೆಕ್ಯೂರಿಟಿಸ್ ಅಂಡ್ ಎಕ್ಸ್ಚೇಂಜ್ ಕಮಿಷನ್(ಎಸ್ಇಸಿ) ಟೆಸ್ಲಾ ಹಣವನ್ನು ಗಾಜಿನ ಮನೆ ನಿರ್ಮಾಣಕ್ಕೆ ವಿನಿಯೋಗಿಸಿರುವ ಕುರಿತು ತನಿಖೆ ನಡೆಸಿದೆ. ಟೆಸ್ಲಾ ಪ್ರಾಜೆಕ್ಟ್ 42 ಎಂಬ ಹೆಸರಿನಲ್ಲಿ ಮಸ್ಕ್ಗೆ ಗಾಜಿನ ಮನೆ ನಿರ್ಮಾಣಕ್ಕೆ ಮುಂದಾಗಿದೆ ಎಂಬ ವರದಿಗಳು ಹೊರಬಿದ್ದಿವೆ.
ಈ ಕುರಿತು ತಮ್ಮ ಮೈಕ್ರೋಬ್ಲಾಗಿಂಗ್ ತಾಣದಲ್ಲಿ ಸ್ಪಷ್ಟನೆ ನೀಡಿರುವ ಮಸ್ಕ್, ಯಾವುದೇ ಗ್ಲಾಸ್ ಹೌಸ್ ಯಾವುದೇ ಯೋಜನೆ ಅಡಿಯಲ್ಲಿ ನಾವು ನಿರ್ಮಾಣ ಮಾಡಿಲ್ಲ. ಯಾವುದೇ ರೀತಿಯ ಮನೆಯನ್ನು ಎಲ್ಲಿಯೂ ನಿರ್ಮಾಣ ಮಾಡುತ್ತಿಲ್ಲ ಎಂದಿದ್ದಾರೆ.
ಇದಕ್ಕೂ ಹಿಂದಿನ ಟ್ವಿಟ್ನಲ್ಲಿ ಕೂಡ ಸ್ಟಾರ್ಬೇಸ್ನಲ್ಲಿರುವ 50ಕೆ ಡಾಲರ್ ಮನೆಯನ್ನು ಸ್ಪೇಸ್ ಎಕ್ಸ್ನಿಂದ ಬಾಡಿಗೆ ಪಡೆದು ವಾಸಿಸುತ್ತಿದ್ದೇವೆ. ಬೇ ಏರಿಯಾದಲ್ಲಿರುವ ಈವೆಂಟ್ಗಳ ಮನೆ ನನ್ನ ಸ್ವಂತ ಮನೆಯಾಗಿದೆ ಎಂದಿದ್ದರು.
ವಾಲ್ ಸ್ಟ್ರೀಟ್ ಜರ್ನಲ್ ಅನುಸಾರ ಫೆಡರಲ್ ಪ್ರಾಸಿಕ್ಯೂಟರ್ಗಳು ಟೆಸ್ಲಾ ಹಣವನ್ನು ಈ ರಹಸ್ಯ ಯೋಜನೆಯಲ್ಲಿ ಕಟ್ಟೆ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತಿದ್ದು, ಇದು ಮುಖ್ಯ ಕಾರ್ಯನಿರ್ವಾಹಕ ಮಸ್ಕ್ ಅವರಿಗೆ ನಿರ್ಮಾಣ ಮಾಡುತ್ತಿರುವ ಮನೆಯಾಗಿದೆ ಎಂದು ವಿವರಿಸಲಾಗಿದೆ.
ಅಮೆರಿಕದ ಅಟಾರ್ನಿ ಅಧಿಕಾರಿಗಳು ಸದರ್ನ್ ಡಿಸ್ಟ್ರಿಕ್ ಆಫ್ ನ್ಯೂಯಾರ್ಕ್ಗೆ ಮಸ್ಕ್ಗೆ ಯಾವ ಪ್ರಯೋಜನಗಳನ್ನು ನೀಡಲಾಗಿದೆ ಎಂಬುದರ ಕುರಿತು ಮಾಹಿತಿಯನ್ನು ಕೇಳಲಾಗಿದೆ. ಈ ಯೋಜನೆಗೆ ಎಷ್ಟು ಹಣ ವಿನಿಯೋಗಿಸಲಾಗಿದೆ. ಇದು ಯಾವ ಯೋಜನೆ ಎಂದು ಕೂಡ ವರದಿ ತಿಳಿಸಿದೆ.
ಟೆಸ್ಲಾ ಪ್ರಾಜೆಕ್ಟ್ 42 ಬಗ್ಗೆ ಎಸ್ಇಸಿ ಕೂ ಸಿವಿಲ್ ತನಿಖೆಯನ್ನು ನಡೆಸಿದೆ. ಈ ಹಿಂದಿನ ವರದಿಗಳಲ್ಲೂ ಕೂಡ ಮಸ್ಕ್, ತಮಗಾಗಿ ಟೆಕ್ಸಾಸ್ನ ತಮ್ಮ ಮುಖ್ಯ ಕಚೇರಿಯ ಆಸ್ಟಿನ್ನಲ್ಲಿ ಮಿಲಿಯನ್ ಡಾಲರ್ ಹಣದಲ್ಲಿ ಐಷಾರಾಮಿ ಗಾಜಿನ ಮನೆ ನಿರ್ಮಾಣಕ್ಕಾಗಿ ಮುಂದಾಗಿದ್ದರು ಎಂದು ತಿಳಿಸಿದ್ದವು. ಈ ರಹಸ್ಯ ಯೋಜನೆ ಗ್ಲಾಸ್ ಬಾಕ್ಸ್ನಲ್ಲಿ ರೂಂ, ಅಡುಗೆ ಕೋಣೆ ಸೇರಿದಂತೆ ಪ್ರತಿಯೊಂದು ಕೋಣೆಗಳನ್ನು ಹೊಂದಿರಲಿದೆ.
ಇದನ್ನೂ ಓದಿ: ಎಕ್ಸ್ನಿಂದಲೂ ಮಾಡಬಹುದು ವಿಡಿಯೋ, ಆಡಿಯೋ ಕಾಲ್; ಮಸ್ಕ್