ETV Bharat / business

ಮಾರ್ಕ್ ಜುಕರ್‌ಬರ್ಗ್ ಮುಂದಿನ ವರ್ಷ ರಾಜೀನಾಮೆ ವದಂತಿ: ವರದಿ ನಿರಾಕರಿಸಿದ ಮೆಟಾ - Meta denies Mark Zuckerberg is set to resign

ಮೆಟಾ (ಹಿಂದೆ ಫೇಸ್‌ಬುಕ್) ತನ್ನ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಮುಂದಿನ ವರ್ಷ ರಾಜೀನಾಮೆ ನೀಡುತ್ತಿದ್ದಾರೆ ಎಂಬ ವರದಿಗಳನ್ನು ತಳ್ಳಿ ಹಾಕಿದೆ.

Mark Zuckerberg
ಮಾರ್ಕ್ ಜುಕರ್‌ಬರ್ಗ್
author img

By

Published : Nov 23, 2022, 6:24 PM IST

ಸ್ಯಾನ್ ಫ್ರಾನ್ಸಿಸ್ಕೋ: ಮುಂದಿನ ವರ್ಷ ಮೆಟಾದ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಯನ್ನು ಮೆಟಾ ನಿರಾಕರಿಸಿದೆ. "ಜುಕರ್‌ಬರ್ಗ್ ಮುಂದಿನ ವರ್ಷ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ" ಎಂದು ಲೀಕ್​ ಪೋರ್ಟಲ್​ ಮೊದಲು ವರದಿ ಮಾಡಿತ್ತು.

ಜುಕರ್‌ಬರ್ಗ್ ಸ್ವತಃ ಕೆಳಗಿಳಿಯಲು ನಿರ್ಧರಿಸಿದ್ದಾರೆ ಮತ್ತು ಇದು ಅವರ ಬಹು-ಶತಕೋಟಿ ಡಾಲರ್ ಯೋಜನೆಯಾದ "ಮೆಟಾವರ್ಸ್" ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವರದಿ ಹೇಳಿದೆ. ಆಂಡಿ ಸ್ಟೋನ್, ಮೆಟಾದ ಸಂವಹನ ನಿರ್ದೇಶಕರು ಮಂಗಳವಾರ ತಡರಾತ್ರಿ ಈ ವರದಿಯನ್ನು ನಿರಾಕರಿಸಿದ್ದಾರೆ. "ಇದು ಸುಳ್ಳು" ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಗೂಗಲ್​​ನಲ್ಲಿ ಉದ್ಯೋಗ ಕಡಿತ: ಕಳಪೆ ಕಾರ್ಯಕ್ಷಮತೆಯ ನೌಕರರನ್ನು ಹೊರಹಾಕಲು ಸಿದ್ಧತೆ

ಈ ತಿಂಗಳ ಆರಂಭದಲ್ಲಿ ಜುಕರ್‌ಬರ್ಗ್ 11,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಅಲ್ಲದೇ ನೇಮಕಾತಿ ಪ್ರಕ್ರಿಯೆಯನ್ನು ಸಹ ಸ್ಥಗಿತಗೊಳಿಸಿದ್ದಾರೆ. ಮೂರನೇ ತ್ರೈಮಾಸಿಕದಲ್ಲಿ (Q3), ಮೆಟಾದ ಆದಾಯವು ವರ್ಷದಿಂದ ವರ್ಷಕ್ಕೆ ಶೇ.4 ರಷ್ಟು ಕುಸಿದು, $27.7 ಬಿಲಿಯನ್‌ಗೆ ತಲುಪಿದೆ. ಕಂಪನಿಯು $4.395 ಶತಕೋಟಿ ನಿವ್ವಳ ಆದಾಯವನ್ನು ಹೊಂದಿದೆ. ಇದು ವರ್ಷಕ್ಕೆ $9.194 ಶತಕೋಟಿಯಷ್ಟು ಕಡಿಮೆಯಾಗಿದೆ.

ಮೆಟಾದ ವರ್ಚುವಲ್ ರಿಯಾಲಿಟಿ ವಿಭಾಗವಾದ ರಿಯಾಲಿಟಿ ಲ್ಯಾಬ್ಸ್‌ನಲ್ಲಿ ಭಾರಿ ನಷ್ಟವಾಗಿದೆ. ಈ ಕುಸಿತದಿಂದ Q3 ನಲ್ಲಿ $3.672 ಶತಕೋಟಿಯನ್ನು ಕಳೆದುಕೊಂಡಿದೆ. ಮೆಟಾ ಸಿಎಫ್‌ಒ ಡೇವಿಡ್ ವೆಹ್ನರ್, ಹಣದುಬ್ಬರದಿಂದಾಗಿ ಆದಾಯ ಕುಸಿತವಾಗಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.