ಹೈದರಾಬಾದ್: ನೀವು ವ್ಯಾಪಾರ ಅಥವಾ ಉದ್ಯೋಗ ಮಾಡಿ ಗಳಿಸಿದ ಹಣವನ್ನು ಉಳಿತಾಯ ಮಾಡುವುದು ಬಹಳ ಮುಖ್ಯ. ನೀವು ದುಡಿದು ಗಳಿಸಿದ ಹಣವನ್ನು ಫಿಕ್ಸೆಡ್ ಡಿಪಾಸಿಟ್ ಇಲ್ಲವೇ ಇತರ ಸರಿಯಾದ ಸ್ಕೀಂಗಳಲ್ಲಿ ತೊಡಗಿಸುವ ಮೂಲಕ ಮುಂದಿನ ಜೀವನಕ್ಕೆ ಕಾಪಿಟ್ಟುಕೊಳ್ಳಬೇಕು. ಈಗ ಉಳಿತಾಯ ಮಾಡಲು ಆರಂಭಿಸಿದವರು ಈ ಬಗ್ಗೆ ಎಚ್ಚರಿಕೆ ವಹಿಸುವುದು ಒಳಿತು. ಅವರಿಗೊಂದಿಷ್ಟು ಸಲಹೆಗಳು ಇಲ್ಲಿವೆ.
ಅವಧಿಯ ವಿಮೆ: ಉದ್ಯೋಗದಲ್ಲಿರುವ ಎಲ್ಲರೂ ಟರ್ಮ್ ಪಾಲಿಸಿ ಮಾಡಿಸುವುದು ಉತ್ತಮ. ಏಕೆಂದರೆ ಜೀವನ ಎಂಬುದು ಅನಿಶ್ಚಿತ ಹಾಗಾಗಿ ತಕ್ಷಣಕ್ಕೆ ಎದುರಾಗುವ ಆಪತ್ತಿನಿಂದ ಕುಟುಂಬದ ರಕ್ಷಣೆಗೆ ಟರ್ಮ್ ಪಾಲಿಸಿ ಖರೀದಿ ಮಾಡುವುದು ಉತ್ತಮ. 10 ರಿಂದ 12 ವರ್ಷಗಳ ಆದಾಯಕ್ಕೆ ಸಮನಾದ ಟರ್ಮ್ ಪಾಲಿಸಿ ಮಾಡಿಸುವತ್ತ ಚಿತ್ತ ಹರಿಸಿ.
ಆನ್‌ಲೈನ್ ವಂಚನೆಗಳಿಗೆ ಬಲಿಯಾಗಬೇಡಿ: ನೀವು ದೊಡ್ಡ ಲಾಟರಿ ಗೆದ್ದಿದ್ದೀರಿ ಎಂದು ಬರುವ ನಕಲಿ ಈ ಮೇಲ್ ಹಾಗೂ ಮೆಸೇಜ್ಗಳ ಬಗ್ಗೆ ಜಾಗರೂಕರಾಗಿರಿ. ಇಂತಹ ಮೇಲ್ಗಳನ್ನು ಮೆಸೇಜ್ಗಳನ್ನು ನಂಬಿ ನಿಮ್ಮ ಬ್ಯಾಂಕ್ ಖಾತೆಗಳ ಮಾಹಿತಿ ಹಾಗೂ ಇತರ ವಿವರಗಳನ್ನು ದಯವಿಟ್ಟು ಹಂಚಿಕೊಳ್ಳಬೇಡಿ. ಒಂದೊಮ್ಮೆ ನಿಮ್ಮ ಮಾಹಿತಿಯನ್ನ ಅಥವಾ ಒಟಿಪಿಯನ್ನ ಹಂಚಿಕೊಂಡರೆ ನಿಮ್ಮ ಖಾತೆಯನ್ನು ಹ್ಯಾಕ್ ಮಾಡುವ ಸಾಧ್ಯತೆಗಳಿವೆ. ಇಂತಹವುಗಳಿಂದ ದೂರವಿರಿ.
ಕಪಟ ಭರವಸೆಗಳನ್ನ ನಂಬಬೇಡಿ: ನಿಮ್ಮ ಹೂಡಿಕೆಯ ನಾಲ್ಕು ಪಟ್ಟು ಗಳಿಸಬಹುದು ಮತ್ತು ನಿಮ್ಮ ಹಣವನ್ನು ರಾತ್ರೋರಾತ್ರಿ ದ್ವಿಗುಣಗೊಳಿಸಲಾಗುತ್ತೇವೆ ಎಂದು ನಿಮ್ಮನ್ನು ನಂಬಿಸಿ ಮೋಸ ಮಾಡುವವರು ಇದ್ದು, ಈ ಬಗ್ಗೆ ನೀವು ಹೆಚ್ಚು ಜಾಗರೂಕರಾಗಿರಬೇಕು. ಈಗ ಬ್ಯಾಂಕ್‌ಗಳಲ್ಲಿ ನಿಮ್ಮ ಹಣ ದ್ವಿಗುಣಗೊಳ್ಳಲು 10-12 ವರ್ಷಗಳು ಬೇಕು. ಹಾಗಾಗಿ 2-3 ವರ್ಷದಲ್ಲಿ ದ್ವಿಗುಣ ಮಾಡಿಕೊಡುತ್ತೇವೆ ಎಂದು ಬರುವವರ ಬಗ್ಗೆ ಎಚ್ಚರಿಕೆಯಿಂದ ಇರಿ. ಒಂದೊಮ್ಮೆ ಹೂಡಿಕೆ ಮಾಡಿ ಕೈ ಸುಟ್ಟುಕೊಳ್ಳಬೇಡಿ
ವಿಶ್ವಾಸಾರ್ಹ ಯೋಜನೆಗಳಲ್ಲಿ ಹೂಡಿಕೆ ಮಾಡಿ: ಬ್ಯಾಂಕಿನ ಬಡ್ಡಿಗಿಂತ ಹೆಚ್ಚಿನ ಹಣವನ್ನು ಪಡೆಯುವ ಯೋಜನೆಗಳು ಇದ್ದು ನಂಬಿಕಾರ್ಹ ಸಂಸ್ಥೆಗಳ ಜತೆ ವ್ಯವಹರಿಸಿ ನಿಮ್ಮ ಹಣ ತೊಡಗಿಸಿ, ಉತ್ತಮ ಮ್ಯೂಚುವಲ್ ಫಂಡ್ಗಳಲ್ಲಿ ಹಣ ಹೂಡಿಕೆ ಮಾಡಿ. ನಿಮ್ಮ ಹಣವನ್ನು ಬ್ಯಾಂಕ್‌ಗಳಲ್ಲಿ ಅಥವಾ ಪೋಸ್ಟ್ ಆಫೀಸ್ ಠೇವಣಿಗಳಲ್ಲಿ ಹೂಡಿಕೆ ಮಾಡುವುದು ಉತ್ತಮ.