ETV Bharat / business

IPL ಎಫೆಕ್ಟ್​: ಫ್ಯಾಂಟಸಿ ಸ್ಪೋರ್ಟ್ಸ್​ ಮಾರುಕಟ್ಟೆ 3,100 ಕೋಟಿ ರೂ.ಗೆ ಬೆಳೆಯುವ ನಿರೀಕ್ಷೆ - ರೆಡ್‌ಸೀರ್ ಸ್ಟ್ರಾಟಜಿ ಕನ್ಸಲ್ಟೆಂಟ್ಸ್

ಈ ವರ್ಷದ ಐಪಿಎಲ್ ಸೀಸನ್​ನಲ್ಲಿ ಫ್ಯಾಂಟಸಿ ಸ್ಪೋರ್ಟ್ಸ್​ ಮಾರುಕಟ್ಟೆ ಮತ್ತಷ್ಟು ಬೆಳೆಯುವ ನಿರೀಕ್ಷೆಯಿದೆ. ಈ ವರ್ಷ ಈ ಮಾರುಕಟ್ಟೆ 2900 ರಿಂದ 3100 ಕೋಟಿ ರೂಪಾಯಿ ಮಟ್ಟಕ್ಕೆ ಬೆಳೆಯುವ ಸಾಧ್ಯತೆ ಇದೆ.

Fantasy Sports revenue to rise 30 35 to Rs 2900 3100 cr this IPL season

author img

By

Published : Apr 5, 2023, 6:59 PM IST

ನವದೆಹಲಿ : ಪ್ರಸ್ತುತ ವರ್ಷ ನಡೆಯುತ್ತಿರುವ ಐಪಿಎಲ್ 2023 ಕ್ರಿಕೆಟ್ ಪಂದ್ಯಾವಳಿಯ ಋತುವಿನಲ್ಲಿ ಫ್ಯಾಂಟಸಿ ಕ್ರೀಡಾ ವಲಯದ (Fantasy sports) ಆದಾಯವು ಶೇಕಡಾ 30 ರಿಂದ 35 ರಷ್ಟು ಅಂದರೆ 2,900 ರಿಂದ 3,100 ಕೋಟಿ ವರೆಗೆ ಬೆಳೆಯುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ರೆಡ್‌ಸೀರ್ ಸ್ಟ್ರಾಟಜಿ ಕನ್ಸಲ್ಟೆಂಟ್ಸ್ ಬುಧವಾರ ಹೇಳಿದೆ. ಅಂಕಿಅಂಶಗಳ ಪ್ರಕಾರ 6.5 ರಿಂದ 7 ಕೋಟಿ ಬಳಕೆದಾರರು ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ವಹಿವಾಟು ನಡೆಸುವ ನಿರೀಕ್ಷೆಯಿದೆ. ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್‌ಫಾರ್ಮ್‌ಗಳ ಬಗ್ಗೆ ಜನರಲ್ಲಿ ಇತ್ತೀಚೆಗೆ ಹೆಚ್ಚಿನ ಜಾಗೃತಿ ಮೂಡಿದೆ ಹಾಗೂ ಅವರು ಇದಕ್ಕಾಗಿ ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆ ಎಂದು ರೆಡ್‌ಸೀರ್ ಸ್ಟ್ರಾಟಜಿ ಕನ್ಸಲ್ಟೆಂಟ್ಸ್ ಪಾಲುದಾರ ಉಜ್ವಲ್ ಚೌಧರಿ ಹೇಳಿದರು.

ನಾವು ಈಗ ಪ್ರಚಾರದಲ್ಲಿ ಬಾಲಿವುಡ್ ತಾರೆಯರನ್ನು ನೋಡುತ್ತಿದ್ದೇವೆ. ಕಾನೂನು ಚೌಕಟ್ಟು ಮತ್ತು ಜಿಎಸ್‌ಟಿ ಕುರಿತಾಗಿ ಈಗ ಉತ್ತಮ ಸ್ಪಷ್ಟತೆ ಇದೆ. ಗೂಗಲ್‌ನಿಂದ ಮತ್ತೊಂದು ಸಕಾರಾತ್ಮಕ ನಿಲುವು ತಳೆಯಲಾಗಿದೆ. ಅಲ್ಲಿ ಅದು ತನ್ನ ಪ್ರಾಯೋಗಿಕ ಕಾರ್ಯಕ್ರಮದ ಅಡಿಯಲ್ಲಿ ಪ್ಲೇಸ್ಟೋರ್‌ನಲ್ಲಿ ಕೆಲವು ಫ್ಯಾಂಟಸಿ ಪ್ಲಾಟ್‌ಫಾರ್ಮ್‌ಗಳಿಗೆ ಅನುಮತಿ ನಿಡಿದೆ. ಇವೆಲ್ಲವೂ ತುಂಬಾ ಸಕಾರಾತ್ಮಕ ಬೆಳವಣಿಗೆಗಳಾಗಿವೆ. ಈ ಎಲ್ಲದರೊಂದಿಗೆ ಭಾರತದಲ್ಲಿ ಫ್ಯಾಂಟಸಿ ಕ್ರೀಡೆಗಳ ಬಳಕೆದಾರರ ವಹಿವಾಟಿನಲ್ಲಿ ಶೇಕಡಾ 20 ರಿಂದ 30 ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದರು.

ಗೂಗಲ್ ತನ್ನ ಪ್ರಾಯೋಗಿಕ ಕಾರ್ಯಕ್ರಮದ ಅಡಿಯಲ್ಲಿ ಆಯ್ದ ಫ್ಯಾಂಟಸಿ ಕ್ರೀಡೆಗಳ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್​ನಲ್ಲಿ ಹಾಕಲು ಅನುಮತಿ ನಿಡಿದೆ. ಮುಖ್ಯವಾಗಿ ಡ್ರೀಮ್ 11, ಗೇಮ್ಸ್​ 24X7 ನ My11Circle, MPL ರಮ್ಮಿ ಮತ್ತು ಫ್ಯಾಂಟಸಿ ಕ್ರಿಕೆಟ್ ಮುಂತಾದ ದೊಡ್ಡ ಕಂಪನಿಗಳ ಆ್ಯಪ್​ಗಳು ಈಗ ಪ್ಲೇ ಸ್ಟೋರ್​ನಲ್ಲಿವೆ ಎಂದರು. ಪ್ರಸ್ತುತ ಐಪಿಎಲ್ ಋತುವಿನಲ್ಲಿ ಫ್ಯಾಂಟಸಿ ಕ್ರೀಡೆಗಳ ಒಟ್ಟು ಗೇಮಿಂಗ್ ಆದಾಯವು ರೂ. 2,900-ರೂ. 3,100 ಕೋಟಿಗೆ ತಲುಪುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದು ಭಾರತದಲ್ಲಿನ ಎಲ್ಲಾ ಫ್ಯಾಂಟಸಿ ಕ್ರಿಕೆಟ್ ವೇದಿಕೆಗಳನ್ನು ಒಳಗೊಂಡಿದೆ. ಕಳೆದ ವರ್ಷ ಐಪಿಎಲ್ ಋತುವಿಗೆ ಹೋಲಿಸಿದರೆ ಇದು ಸುಮಾರು 30 ರಿಂದ 35 ಶೇಕಡಾ ಹೆಚ್ಚಾಗಿದೆ ಎಂದು ಚೌಧರಿ ಹೇಳಿದರು.

IPL 2023 ಕ್ರಿಕೆಟ್ ಪಂದ್ಯಾವಳಿಯು ಮಾರ್ಚ್ 31 ರಂದು ಪ್ರಾರಂಭವಾಗಿದ್ದು ಮೇ ಅಂತ್ಯದವರೆಗೆ ಮುಂದುವರಿಯಲಿದೆ. ಕಳೆದ 4 ರಿಂದ 5 ವರ್ಷಗಳಲ್ಲಿ ಇದರ ಬಳಕೆದಾರರ ಸಂಖ್ಯೆ ಶೇ 20 ರಷ್ಟು ಬೆಳವಣಿಗೆಯಾಗಿದೆ. ನಮ್ಮ ಅಂದಾಜಿನ ಪ್ರಕಾರ ಪ್ರತಿ ಬಳಕೆದಾರನಿಂದ ಬರುವ ಸರಾಸರಿ ಆದಾಯವು ಐಪಿಎಲ್ 2022 ರಲ್ಲಿ ರೂ 410 ರಿಂದ ಐಪಿಎಲ್ 2023 ರಲ್ಲಿ ಪ್ರತಿ ಬಳಕೆದಾರರಿಗೆ ರೂ 440 ಕ್ಕೆ ಬೆಳೆಯುವ ನಿರೀಕ್ಷೆಯಿದೆ ಎಂದು ಚೌಧರಿ ತಿಳಿಸಿದರು. ರೆಡ್‌ಸೀರ್ ಪ್ರಕಾರ, ಫ್ಯಾಂಟಸಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ವರ್ಷಪೂರ್ತಿ ಗಳಿಸುವ ಸಂಪೂರ್ಣ ಆದಾಯದ 35 ರಿಂದ 40 ಪ್ರತಿಶತ ಆದಾಯ ಐಪಿಎಲ್ ಸೀಸನ್​ನಲ್ಲಿ ಬರುತ್ತದೆ.

ಫ್ಯಾಂಟಸಿ ಸ್ಪೋರ್ಟ್‌ಗಳು ಆನ್‌ಲೈನ್ ಮೂಲಕ ಆಡಲಾಗುವ ಊಹಾತ್ಮಕ ಆಟಗಳಾಗಿವೆ. ಇದರಲ್ಲಿ ನೈಜ ಕ್ರೀಡಾ ಆಟಗಾರರ ವರ್ಚುವಲ್ ತಂಡವನ್ನು ತಯಾರಿಸಲಾಗುತ್ತದೆ. ಫ್ಯಾಂಟಸಿ ಪಾಯಿಂಟ್‌ಗಳಾಗಿ ಪರಿವರ್ತಿಸಲಾದ ನೈಜ ಜೀವನದ ಅಂಕಿಅಂಶಗಳ ಆಧಾರದ ಮೇಲೆ ನೀವು ಅಂಕಗಳನ್ನು ಗಳಿಸುತ್ತೀರಿ. ನಿಮ್ಮ ಆಟಗಾರನು ನಿಜ ಜೀವನದಲ್ಲಿ ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾನೆಯೋ ನಿಮಗೆ ಅಷ್ಟು ಹೆಚ್ಚು ಫ್ಯಾಂಟಸಿ ಅಂಕಗಳು ಸಿಗುತ್ತವೆ.

ಇದನ್ನೂ ಓದಿ : ಹಾಲಿ ಚಾಂಪಿಯನ್ಸ್‌ ಗುಜರಾತ್ ಟೈಟಾನ್ಸ್ ಗೆಲುವಿನ ಓಟ: ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಪಾಂಡ್ಯ ಪಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.