ETV Bharat / business

ವಿಶ್ವದ ಆರ್ಥಿಕ ಬೆಳವಣಿಗೆಯಲ್ಲಿ ಭಾರತ, ಚೀನಾ ಸಿಂಹಪಾಲು: ಐಎಂಎಫ್ ವರದಿ - ಚೀನಾ ಮತ್ತು ಭಾರತಗಳ ಆಶಾದಾಯಕ ಆರ್ಥಿಕ

ಚೀನಾ ಮತ್ತು ಭಾರತದ ಆರ್ಥಿಕ ಬೆಳವಣಿಗೆಯು ಈ ವರ್ಷ ಆಶಾದಾಯಕವಾಗಿರಲಿದೆ ಎಂದು ಐಎಂಎಫ್ ವರದಿ ತಿಳಿಸಿದೆ. ಒಟ್ಟಾರೆಯಾಗಿ ಏಷ್ಯಾ ಪೆಸಿಫಿಕ್ ವಲಯದ ಆರ್ಥಿಕ ಬೆಳವಣಿಗೆ ದರ ಶೇ 4.6ರ ಮಟ್ಟಕ್ಕೆ ಏರಿಕೆಯಾಗಲಿದೆ ಎಂದು ಅದು ಹೇಳಿದೆ.

IMF Report Says India China to contribute of Global Growth

author img

By

Published : May 2, 2023, 2:30 PM IST

ನವದೆಹಲಿ : ಏಷ್ಯಾ ಪೆಸಿಫಿಕ್ ವಲಯದಲ್ಲಿ ಈ ವರ್ಷ ಆರ್ಥಿಕ ಬೆಳವಣಿಗೆ ದರ ಶೇ 4.6ರ ಮಟ್ಟಕ್ಕೆ ಏರಿಕೆಯಾಗಲಿದೆ ಹಾಗೂ ಇದು ಮುಖ್ಯವಾಗಿ ಭಾರತ ಹಾಗೂ ಚೀನಾ ದೇಶಗಳ ಆರ್ಥಿಕತೆಯ ಬೆಳವಣಿಗೆಯಿಂದ ಸಾಧ್ಯವಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ. 2022ರಲ್ಲಿ ಏಷ್ಯಾ ಪೆಸಿಫಿಕ್ ವಲಯದ ಆರ್ಥಿಕ ಬೆಳವಣಿಗೆ ದರ ಶೇ 3.8 ಆಗಿತ್ತು.

ಈ ಕುರಿತು ಐಎಂಎಫ್ 'ರೀಜನಲ್ ಎಕನಾಮಿಕ್ ಔಟ್​ಲುಕ್ - ಏಷ್ಯಾ ಆ್ಯಂಡ್ ಪೆಸಿಫಿಕ್' ಹೆಸರಿನ ವರದಿಯನ್ನು ತಯಾರಿಸಿದ್ದು, ಮಂಗಳವಾರ ಇದನ್ನು ಬಿಡುಗಡೆ ಮಾಡಿದೆ. ಏಷ್ಯಾ ಪೆಸಿಫಿಕ್ ವಲಯವು ವಿಶ್ವದ ಆರ್ಥಿಕ ಬೆಳವಣಿಗೆಯ ಶೇ 70 ರಷ್ಟು ಪಾಲು ನೀಡಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. "ಏಷ್ಯಾ ಮತ್ತು ಪೆಸಿಫಿಕ್ 2023 ರಲ್ಲಿ ವಿಶ್ವದ ಅತ್ಯಂತ ಚಲನಶೀಲ ಆರ್ಥಿಕ ವಲಯವಾಗಿವೆ. ಪ್ರಧಾನವಾಗಿ ಚೀನಾ ಮತ್ತು ಭಾರತಗಳ ಆಶಾದಾಯಕ ಆರ್ಥಿಕ ಬೆಳವಣಿಗೆ ಗಮನಾರ್ಹವಾಗಿದೆ ಎಂದು ಐಎಂಎಫ್ ವರದಿ ಹೇಳಿದೆ.

ಏಷ್ಯಾ ಆರ್ಥಿಕತೆಯ ಚಲನಶೀಲತೆಗೆ ಪ್ರಾಥಮಿಕವಾಗಿ ಚೀನಾದಲ್ಲಿನ ಚೇತರಿಕೆ ಮತ್ತು ಭಾರತದಲ್ಲಿ ಚೇತರಿಸಿಕೊಳ್ಳುವ ಬೆಳವಣಿಗೆಗಳು ಕಾರಣವಾಗಿವೆ. ಆದರೆ ಏಷ್ಯಾದ ಉಳಿದ ಭಾಗಗಳಲ್ಲಿನ ಬೆಳವಣಿಗೆಯು ಇತರ ಪ್ರದೇಶಗಳಿಗೆ ಅನುಗುಣವಾಗಿ 2023 ರಲ್ಲಿ ಕೆಳಮಟ್ಟಕ್ಕೆ ಇಳಿಯುವ ನಿರೀಕ್ಷೆಯಿದೆ. ಏತನ್ಮಧ್ಯೆ, ಐಎಂಎಫ್ 2023 ಜಾಗತಿಕ ಆರ್ಥಿಕತೆಗೆ ಸವಾಲಿನ ವರ್ಷವಾಗಿದೆ ಎಂದು ವರದಿ ಹೇಳಿದೆ. ವಿತ್ತೀಯ ನೀತಿ ಬಿಗಿಗೊಳಿಸುವಿಕೆ (ಸ್ಥಿರವಾದ ಬಡ್ಡಿದರ ಹೆಚ್ಚಳದ ಮೂಲಕ) ಮತ್ತು ಉಕ್ರೇನ್‌ನಲ್ಲಿ ರಷ್ಯಾದ ಯುದ್ಧವು ಆರ್ಥಿಕ ಚಟುವಟಿಕೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಮುಂದುವರಿಸುವುದರಿಂದ ಜಾಗತಿಕ ಬೆಳವಣಿಗೆಯು ಕ್ಷೀಣಿಸುತ್ತಿದೆ.

ಅಲ್ಲದೆ, ನಿರಂತರವಾದ ಹಣದುಬ್ಬರದ ಒತ್ತಡಗಳು ಮತ್ತು ಅಮೆರಿಕ ಹಾಗೂ ಯುರೋಪ್‌ನಲ್ಲಿನ ಇತ್ತೀಚಿನ ಹಣಕಾಸು ವಲಯದ ಸಮಸ್ಯೆಗಳು ಹೆಚ್ಚುವರಿ ಅನಿಶ್ಚಿತತೆಯನ್ನು ಉಂಟುಮಾಡಲಿದೆ ಎಂದು ವರದಿ ತಿಳಿಸಿದೆ. ತಂತ್ರಜ್ಞಾನ ಉದ್ಯಮದ ಪ್ರಮುಖ ಹಣಕಾಸು ಮೂಲವಾಗಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಕಳೆದ ಮಾರ್ಚ್​ 10 ರಂದು ದಿವಾಳಿಯಾಗಿರುವುದಾಗಿ ಘೋಷಿಸಿಕೊಂಡಿತು. ಇದರೊಂದಿಗೆ ಅಮೆರಿಕದ ಇನ್ನೂ ಹಲವಾರು ಬ್ಯಾಂಕ್​ಗಳು ಬಾಗಿಲು ಮುಚ್ಚಿದ್ದು, ಆರ್ಥಿಕ ಹಿಂಜರಿತವನ್ನು ಸೃಷ್ಟಿಸಿವೆ. ಫಸ್ಟ್​ ರಿಪಬ್ಲಿಕ್ ಬ್ಯಾಂಕ್ ಮೊನ್ನೆಯಷ್ಟೇ ಬಂದ್ ಆಗಿರುವುದು ಈ ಸರಣಿಯ ಮುಂದುವರಿಕೆಯಾಗಿದೆ.

ಕೋವಿಡ್ ಸಂಬಂಧಿತ ನಿರ್ಬಂಧಗಳನ್ನು ಈಗ ಚೀನಾ ಸಂಪೂರ್ಣವಾಗಿ ತೆರವು ಮಾಡಿದ್ದು, ಅದರ ಆರ್ಥಿಕತೆ ಪುಟಿದೇಳುತ್ತಿದೆ. ಇದರಿಂದ ಏಷ್ಯಾ ಪೆಸಿಫಿಕ್ ಪ್ರದೇಶದ ಬೆಳವಣಿಗೆಗೆ ಹೊಸ ಚೈತನ್ಯ ಮೂಡಿದೆ. ಆದಾಗ್ಯೂ, ಈ ಚಲನಶೀಲ ದೃಷ್ಟಿಕೋನದ ಕಾರಣದಿಂದ ಪ್ರದೇಶದಲ್ಲಿನ ನೀತಿ ನಿರೂಪಕರು ಮತ್ತಷ್ಟು ಬಿಗಿಯಾದ ವಿತ್ತೀಯ ಕ್ರಮಗಳನ್ನು ಕೈಗೊಳ್ಳಲಾರರು ಎಂದು ಹೇಳಲಾಗದು ಎಂದು ಐಎಂಎಫ್ ಎಚ್ಚರಿಸಿದೆ.

ಹಣದುಬ್ಬರವು ನಿಯಂತ್ರಣಕ್ಕೆ ಬರುವವರೆಗೆ ವಿತ್ತೀಯ ನೀತಿಯು ಬಿಗಿಯಾಗಿರಬೇಕು. ಆದರೆ ಈ ನಿಯಮ ಚೀನಾ ಮತ್ತು ಜಪಾನ್​ಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಈ ದೇಶಗಳಲ್ಲಿ ಉತ್ಪಾದನೆಯು ಅವುಗಳ ಸಾಮರ್ಥ್ಯಕ್ಕಿಂತ ಕಡಿಮೆಯಾಗಿದೆ ಮತ್ತು ಹಣದುಬ್ಬರದ ಆತಂಕ ಸದ್ಯಕ್ಕೆ ಇಲ್ಲ.

ಇದನ್ನೂ ಓದಿ : AI ತಂತ್ರಜ್ಞಾನದಿಂದ ಅಪಾಯ:'ಎಐ ಗಾಡ್​ಫಾದರ್' ಜೆಫ್ರಿ ಹಿಂಟನ್ ವಾರ್ನಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.