ವಾಷಿಂಗ್ಟನ್(ಅಮೆರಿಕ): ಸಾಮಾಜಿಕ ಮಟ್ಟದಲ್ಲಿ ಆರ್ಥಿಕ ಅಸಮಾನತೆಯನ್ನು ಬಡವರು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಅಥವಾ ಶ್ರೀಮಂತರು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ವಿವರಿಸಲಾಗುವುದಿಲ್ಲ ಎಂಬ ವಿಚಾರವನ್ನು ಅಧ್ಯಯನದ ಮೂಲಕ ಕಂಡುಕೊಳ್ಳಲಾಗಿದೆ.
ಕೊಲಂಬಿಯಾ ವಿಶ್ವವಿದ್ಯಾನಿಲಯದ ಮೇಲ್‌ಮ್ಯಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಂಶೋಧಕರ ನೇತೃತ್ವದ ಜಾಗತಿಕ ಅಧ್ಯಯನ ಮತ್ತು ಜರ್ನಲ್‌ನಲ್ಲಿ ಪ್ರಕಟವಾದ ಸೈಂಟಿಫಿಕ್ ರಿಪೋರ್ಟ್ಸ್, ಆರ್ಥಿಕ ಅಸಮಾನತೆಗೆ ಕಾರಣ ಏನು ಎಂಬುದನ್ನು ಹೀಗೆ ವಿವರಿಸಿದೆ. ’’ಬಡತನದಿಂದ ಹೊರಬಂದವರು ಸೇರಿದಂತೆ ಎಲ್ಲಾ ಆದಾಯದ ಹಂತಗಳಲ್ಲೂ ಕಳಪೆ ನಿರ್ಧಾರ ಹಾಗೂ ಉತ್ತಮ ಎರಡೂ ನಿರ್ಧಾರಗಳು ಇವೆ ಎಂಬುದನ್ನ ಕಂಡುಕೊಳ್ಳಲಾಗಿದೆ‘‘ ಎಂದು ಅದು ವಿವರಿಸಿದೆ.
ದೇಶಗಳಲ್ಲಿ ಆರ್ಥಿಕ ಅಸಮಾನತೆ ಹೆಚ್ಚುತ್ತಲೇ ಇದ್ದರೂ, ಅದನ್ನು ಪರಿಹರಿಸುವ ಪ್ರಯತ್ನಗಳು ಹೆಚ್ಚಾಗಿ ಆಗುತ್ತಿಲ್ಲ. ಒಂದೊಮ್ಮೆ ಮಾಡಿದರೂ ಅವು ಪರಿಣಾಮ ಬೀರಿಲ್ಲ ಎಂಬ ಅಂಶವನ್ನು ಪತ್ತೆ ಹಚ್ಚಲಾಗಿದೆ. ವಿಶೇಷವಾಗಿ ನಡವಳಿಕೆಯ ವಿಧಾನಗಳು ಈ ಅಂಶದಲ್ಲಿ ಒಳಗೊಂಡಿವೆ. ಇದು ಸಾಮಾನ್ಯವಾಗಿ ಅಧ್ಯಯನದ ವೇಳೆ ಹೆಚ್ಚಾಗಿ ಕಂಡು ಬಂದ ಅಂಶವಾಗಿದೆ. ಆದರೆ, ಇಲ್ಲಿಯವರೆಗೆ, ಕಡಿಮೆ-ಆದಾಯದ ವ್ಯಕ್ತಿಗಳ ನಡುವಿನ ಆಯ್ಕೆಯ ಮಾದರಿಗಳು ಮೇಲ್ಮುಖವಾದ ಆರ್ಥಿಕ ಚಲನಶೀಲತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ನಡವಳಿಕೆಯ ಮಧ್ಯಸ್ಥಿಕೆಗಳಿಗೆ ಅಡ್ಡಿ ಆಗಿದೆಯಾ ಎಂಬ ಅಂಶವನ್ನು ಈ ಅಧ್ಯಯನದ ವೇಳೆ ಪರೀಕ್ಷಿಸಲಾಗಿಲ್ಲ ಎಂದು ತಿಳಿದು ಬಂದಿದೆ.
ಈ ಅಧ್ಯಯನವು 22 ಭಾಷೆಗಳಲ್ಲಿ ಆನ್‌ಲೈನ್ ಸಮೀಕ್ಷೆಗಳನ್ನು ಆಧರಿಸಿ ಮಾಡಲಾಗಿದೆ. ಏಷ್ಯಾ, ಯುರೋಪ್, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕಾದ 27 ದೇಶಗಳಿಂದ ಸುಮಾರು 5000 ಮಂದಿ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು 10 ವೈಯಕ್ತಿಕ ಕಾರಣಗಳು ಮೂಲಕ ಅಳೆಯಲಾಗುತ್ತದೆ. ಇದರಲ್ಲಿ (1) ತಾತ್ಕಾಲಿಕ ರಿಯಾಯಿತಿ, ದೊಡ್ಡ ಭವಿಷ್ಯದ ಲಾಭಗಳಿಗಿಂತ ತಕ್ಷಣದ ಹಣಹಾಸಿನ ಅಗತ್ಯತೆ. (2) ಅತಿಯಾಗಿ ಅಂದಾಜು ಮಾಡುವುದು, ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನೀವು ಉತ್ತಮ ಎಂದು ಭಾವಿಸುವುದು (3) ಮಿತಿಮೀರಿದ ಸ್ಥಾನ, ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನೀವು ಸರಾಸರಿ ವ್ಯಕ್ತಿಗಿಂತ ಉತ್ತಮ ಎಂದು ಯೋಚಿಸುವುದು ಮತ್ತು (4) ವಿಪರೀತತೆ, ಅಥವಾ "ಮಧ್ಯಮ ಆಯ್ಕೆಯನ್ನು" ತೆಗೆದುಕೊಳ್ಳುವುದು. ಹೀಗೆ 10 ಕಾರ್ಯಸೂಚಿಗಳ ಮೇಲೆ ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿತ್ತು.
ತಾತ್ಕಾಲಿಕ ರಿಯಾಯಿತಿಯು ವೈಯಕ್ತಿಕ ಹಣಕಾಸಿನ ಸಂದರ್ಭಗಳಿಗಿಂತ ವಿಶಾಲವಾದ ಸಾಮಾಜಿಕ ಆರ್ಥಿಕ ಪರಿಸರಕ್ಕೆ ಹೆಚ್ಚು ಸಂಬಂಧ ಹೊಂದಿದೆ ಎಂದು ಈ ಅಧ್ಯಯನ ಅಥವಾ ಸಮೀಕ್ಷೆ ತೋರಿಸುತ್ತಿದೆ.
"ವೈಯಕ್ತಿಕ ನಡವಳಿಕೆ ಮತ್ತು ನಿರ್ಧಾರ ಹಾಗೂ ತೆಗೆದುಕೊಂಡ ನಿರ್ಧಾರವು ಮೇಲ್ಮುಖವಾದ ಆರ್ಥಿಕ ಚಲನಶೀಲತೆಗೆ ನೇರವಾಗಿ ಸಂಬಂಧಿಸಿರಬಹುದು ಎಂಬ ಕಲ್ಪನೆಯನ್ನು ನಮ್ಮ ಸಂಶೋಧನೆ ತಿರಸ್ಕರಿಸುವುದಿಲ್ಲ. ಬದಲಿಗೆ, ಪಕ್ಷಪಾತದ ನಿರ್ಧಾರ ತೆಗೆದುಕೊಳ್ಳುವಿಕೆಯು ಜನಸಂಖ್ಯೆಯ ಮಟ್ಟದ ಆರ್ಥಿಕ ಅಸಮಾನತೆಯ ಗಮನಾರ್ಹ ಪ್ರಮಾಣವನ್ನು ಕೂಡಾ ಸಮೀಕ್ಷೆ ವಿವರಿಸುವುದಿಲ್ಲ ಎಂದು ನಾವು ಅಧ್ಯಯನದ ಸಂದರ್ಭದಲ್ಲಿ ಕಂಡುಕೊಂಡಿದ್ದೇವೆ ಎಂದು ಲೇಖಕ ಕೈ ರುಗ್ಗೇರಿ ಹೇಳಿದ್ದಾರೆ. ಕೊಲಂಬಿಯಾ ಸಾರ್ವಜನಿಕ ಆರೋಗ್ಯ ವಿಭಾಗದ, ಆರೋಗ್ಯ ನೀತಿ ಮತ್ತು ನಿರ್ವಹಣೆ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ರುಗ್ಗೇರಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನು ಓದಿ:Karnataka Budget: 2023-24ನೇ ಸಾಲಿನ ಬಜೆಟ್ಗೆ ಸಿಎಂ ಸಿದ್ದರಾಮಯ್ಯ ಕಸರತ್ತು: 3 ಹೊರೆಗಳ ತಲೆನೋವು