ETV Bharat / business

ಭಾರತದಲ್ಲಿ ಸಗಟು ಹಣದುಬ್ಬರ ಮೈನಸ್​ 0.92ಕ್ಕೆ ಇಳಿಕೆ

ದೇಶದಲ್ಲಿನ ಸಗಟು ಹಣದುಬ್ಬರ ಇಳಿಕೆಯಾಗಿದೆ. ಸಗಟು ಬೆಲೆ ಸೂಚ್ಯಂಕ ಆಧರಿಸಿದ ಸಗಟು ಹಣದುಬ್ಬರವು ಏಪ್ರಿಲ್‌ನಲ್ಲಿ ಮೈನಸ್ 0.92 ಶೇಕಡಾರಷ್ಟು ಋಣಾತ್ಮಕ ಮಟ್ಟಕ್ಕೆ ಇಳಿಕೆಯಾಗಿದೆ.

author img

By

Published : May 15, 2023, 2:12 PM IST

Updated : May 15, 2023, 2:25 PM IST

India's wholesale inflation turns negative at (-) 0.92 pc for April

ನವದೆಹಲಿ : ಭಾರತದ ಸಗಟು ಬೆಲೆ ಸೂಚ್ಯಂಕ ಆಧರಿಸಿದ ಸಗಟು ಹಣದುಬ್ಬರವು, ಜುಲೈ 2020 ರ ನಂತರ ಮೊದಲ ಬಾರಿಗೆ ಏಪ್ರಿಲ್‌ನಲ್ಲಿ ಮೈನಸ್ 0.92 ಶೇಕಡಾರಷ್ಟು ಋಣಾತ್ಮಕ ಮಟ್ಟಕ್ಕೆ ಇಳಿಕೆಯಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿದ ಅಧಿಕೃತ ಅಂಕಿ - ಅಂಶಗಳು ತೋರಿಸಿವೆ. ಸಗಟು ಹಣದುಬ್ಬರ ಕಡಿಮೆಯಾಗುತ್ತಿದೆ.

ಫೆಬ್ರವರಿಯಲ್ಲಿ ಶೇಕಡಾ 3.85 ಇದ್ದ ಇದು ಮಾರ್ಚ್‌ನಲ್ಲಿ ಶೇಕಡಾ 1.34ಕ್ಕೆ ಕಡಿಮೆಯಾಗಿದೆ. ಒಟ್ಟಾರೆ ಸಗಟು ಹಣದುಬ್ಬರವು ಅಕ್ಟೋಬರ್‌ನಲ್ಲಿ 8.39 ರಷ್ಟಿತ್ತು ಮತ್ತು ಆಗಿನಿಂದಲೂ ಸತತವಾಗಿ ಕಡಿಮೆಯಾಗುತ್ತಿದೆ. ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಸೆಪ್ಟೆಂಬರ್ ವರೆಗೆ ಸತತವಾಗಿ 18 ತಿಂಗಳುಗಳವರೆಗೆ ಎರಡಂಕಿಯಲ್ಲಿತ್ತು ಎಂಬುದು ಗಮನಾರ್ಹ.

ಮುಖ್ಯವಾಗಿ ಆಹಾರ ಪದಾರ್ಥಗಳು, ಧಾನ್ಯಗಳು, ಗೋಧಿ, ತರಕಾರಿಗಳು, ಆಲೂಗಡ್ಡೆ, ಹಣ್ಣುಗಳು, ಮೊಟ್ಟೆ ಮಾಂಸ ಮತ್ತು ಮೀನು, ಖನಿಜಗಳು, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಉಕ್ಕು, ಇತರ ಪದಾರ್ಥಗಳ ಬೆಲೆ ಇಳಿಕೆ ಕಾರಣದಿಂದ ಏಪ್ರಿಲ್‌ನಲ್ಲಿ ಹಣದುಬ್ಬರ ಇಳಿಕೆಯಾಗಿದೆ.

ಈ ಮಧ್ಯೆ ಭಾರತದಲ್ಲಿ ಚಿಲ್ಲರೆ ಹಣದುಬ್ಬರ ಕೂಡ ಏಪ್ರಿಲ್‌ನಲ್ಲಿ ಶೇಕಡಾ 4.7ಕ್ಕೆ ಅಥವಾ 18 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಇದಕ್ಕೂ ಹಿಂದಿನ ತಿಂಗಳು ಇದು ಶೇಕಡಾ 5.7 ಆಗಿತ್ತು. ಭಾರತದ ಚಿಲ್ಲರೆ ಹಣದುಬ್ಬರವು ಸತತ ಮೂರು ತ್ರೈಮಾಸಿಕಗಳಲ್ಲಿ ಆರ್‌ಬಿಐನ ಶೇಕಡಾ 6 ಗುರಿಗಿಂತ ಹೆಚ್ಚಿತ್ತು ಮತ್ತು ನವೆಂಬರ್ 2022 ರಲ್ಲಿ ಮಾತ್ರ ಆರ್‌ಬಿಐನ ಸೌಕರ್ಯ ವಲಯಕ್ಕೆ ಮರಳಲು ಯಶಸ್ವಿಯಾಗಿದೆ.

ಹೊಂದಿಕೊಳ್ಳುವ ಹಣದುಬ್ಬರ ಗುರಿ ಚೌಕಟ್ಟಿನ ಅಡಿಯಲ್ಲಿ, ಸಿಪಿಐ ಆಧಾರಿತ ಹಣದುಬ್ಬರವು ಸತತವಾಗಿ ಮೂರು ತ್ರೈಮಾಸಿಕಗಳವರೆಗೆ 2 ರಿಂದ 6 ಶೇಕಡಾ ವ್ಯಾಪ್ತಿಯಿಂದ ಹೊರಗಿದ್ದರೆ ಬೆಲೆ ಏರಿಕೆಯನ್ನು ನಿರ್ವಹಿಸುವಲ್ಲಿ ಆರ್​ಬಿಐ ವಿಫಲವಾಗಿದೆ ಎಂದು ಪರಿಗಣಿಸಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್, ಏಪ್ರಿಲ್‌ನಲ್ಲಿ ತನ್ನ ಮೊದಲ ಹಣಕಾಸು ನೀತಿ ಪರಿಶೀಲನಾ ಸಭೆಯಲ್ಲಿ, ಪ್ರಮುಖ ಬೆಂಚ್​ಮಾರ್ಕ್ ಬಡ್ಡಿ ದರ ಆಗಿರುವ ರೆಪೋ ದರವನ್ನು (ಇತರ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ದರ) ಶೇಕಡಾ 6.5 ಮಟ್ಟಕ್ಕೆ ಸ್ಥಿರವಾಗಿ ಕಾಯ್ದುಕೊಂಡಿದೆ.

ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೇ 2022 ರಿಂದ ಆರ್​ಬಿಐ ಸಂಚಿತವಾಗಿ ರೆಪೊ ದರವನ್ನು 250 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದೆ. ಬಡ್ಡಿದರಗಳನ್ನು ಹೆಚ್ಚಿಸುವುದು ವಿತ್ತೀಯ ನೀತಿ ಸಾಧನವಾಗಿದ್ದು ಅದು ಸಾಮಾನ್ಯವಾಗಿ ಆರ್ಥಿಕತೆಯಲ್ಲಿ ಬೇಡಿಕೆಯನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಹಣದುಬ್ಬರ ದರ ಇಳಿಕೆಗೆ ಸಹಾಯವಾಗುತ್ತದೆ. ಸಗಟು ಬೆಲೆ ಸೂಚ್ಯಂಕವು (WPI) ಸಗಟು ಹಂತದಲ್ಲಿ ಸರಕುಗಳ ಬೆಲೆಯನ್ನು ಪ್ರತಿನಿಧಿಸುತ್ತದೆ.

ಅಂದರೆ ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುವ ಮತ್ತು ಗ್ರಾಹಕರ ಬದಲಿಗೆ ಸಂಸ್ಥೆಗಳ ನಡುವೆ ವ್ಯಾಪಾರ ಮಾಡುವ ಸರಕುಗಳನ್ನು ಇದು ಒಳಗೊಂಡಿದೆ. ಕೆಲವು ಆರ್ಥಿಕತೆಗಳಲ್ಲಿ ಡಬ್ಲ್ಯೂಪಿಐ ಅನ್ನು ಹಣದುಬ್ಬರದ ಅಳತೆಯಾಗಿ ಬಳಸಲಾಗುತ್ತದೆ. ಡಬ್ಲ್ಯೂಪಿಐ ಅನ್ನು ಭಾರತದಲ್ಲಿ ಹಣದುಬ್ಬರದ ಪ್ರಮುಖ ಅಳತೆಯಾಗಿ ಬಳಸಲಾಗುತ್ತದೆ. ವಿತ್ತೀಯ ನೀತಿಯ ಬದಲಾವಣೆಗಳು ಡಬ್ಲ್ಯೂಪಿಐಯಲ್ಲಿನ ಬದಲಾವಣೆಗಳಿಂದ ಹೆಚ್ಚು ಪ್ರಭಾವಿತವಾಗಿರುತ್ತವೆ.

ಇದನ್ನೂ ಓದಿ : ಕೋವಿಡ್​ ಎಮರ್ಜೆನ್ಸಿ ಅಂತ್ಯ: ವೈದ್ಯಕೀಯ ಸಾಧನ ಕಂಪನಿಗಳ ಮಾರಾಟ ಇಳಿಕೆ ಸಾಧ್ಯತೆ

Last Updated : May 15, 2023, 2:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.