ETV Bharat / business

2024ರಲ್ಲಿ ಸದೃಢ ಆರ್ಥಿಕ ಬೆಳವಣಿಗೆ, ಕಾರ್ಪೊರೇಟ್​ ಲಾಭ ಹೆಚ್ಚಳ: ಫಿಚ್

ದೇಶದ ಸದೃಢ ಆರ್ಥಿಕ ಪರಿಸ್ಥಿತಿಯಿಂದಾಗಿ ಕಾರ್ಪೊರೇಟ್ ಕಂಪನಿಗಳ ಲಾಭ ಹೆಚ್ಚಾಗಲಿದೆ ಎಂದು ಫಿಚ್ ರೇಟಿಂಗ್ ಭವಿಷ್ಯ ನುಡಿದಿದೆ.

India's economic growth sparks optimism as corporates anticipate profit surge

author img

By ETV Bharat Karnataka Team

Published : Dec 29, 2023, 5:13 PM IST

ನವದೆಹಲಿ: ದೇಶದ ಸದೃಢ ಆರ್ಥಿಕ ಬೆಳವಣಿಗೆಯಿಂದಾಗಿ ಭಾರತೀಯ ಕಾರ್ಪೊರೇಟ್​ ಕಂಪನಿಗಳ ಲಾಭ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಫಿಚ್ ರೇಟಿಂಗ್ಸ್ ಭವಿಷ್ಯ ನುಡಿದಿದೆ. ನಿಧಾನಗತಿಯ ಸಾಗರೋತ್ತರ ಮಾರುಕಟ್ಟೆಗಳಿಂದ ಉದ್ಭವಿಸುವ ಸವಾಲುಗಳ ಹೊರತಾಗಿಯೂ, ಮಾರ್ಚ್ 2025ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಶೇಕಡಾ 6.5 ಕ್ಕೆ ಅಂದಾಜಿಸಲಾದ ಜಿಡಿಪಿಯೊಂದಿಗೆ ಭಾರತವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಲಿದೆ. ನಿರೀಕ್ಷಿತ ಆರ್ಥಿಕ ವಿಸ್ತರಣೆಯು ವಿವಿಧ ಕ್ಷೇತ್ರಗಳಲ್ಲಿ ಬೇಡಿಕೆಯನ್ನು ಹೆಚ್ಚಿಸಲಿದೆ ಮತ್ತು ಇದು ಕಂಪನಿಗಳ ಲಾಭವನ್ನು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿಸಲಿದೆ ಎಂದು ಫಿಚ್ ತಿಳಿಸಿದೆ.

2025ರ ಹಣಕಾಸು ವರ್ಷದಲ್ಲಿ ಕಂಪನಿಗಳ ಲಾಭದಾಯಕತೆ ಏರಿಕೆಯಾಗಲಿದೆ ಎಂದು ಫಿಚ್ ರೇಟಿಂಗ್ಸ್ ಊಹಿಸಿದ್ದು, 2023ರ ಹಣಕಾಸು ವರ್ಷದ ಮಟ್ಟಕ್ಕೆ ಹೋಲಿಸಿದರೆ 290 ಬೇಸಿಸ್ ಪಾಯಿಂಟ್​ಗಳ ಹೆಚ್ಚಳವಾಗಬಹುದು ಎಂದು ಅಂದಾಜು ಮಾಡಿದೆ. ಲಾಭದ ಈ ಹೆಚ್ಚಳವು ಇನ್ಪುಟ್ ವೆಚ್ಚದ ಒತ್ತಡವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಭಾರತೀಯ ಕಾರ್ಪೊರೇಟ್​ಗಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲಿದೆ ಎಂದು ಫಿಚ್ ಹೇಳಿದೆ.

ಸಿಮೆಂಟ್, ವಿದ್ಯುತ್, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಉಕ್ಕು ಭಾರತದ ಆರ್ಥಿಕ ಆವೇಗದಿಂದ ಲಾಭ ಪಡೆಯಲಿರುವ ಪ್ರಮುಖ ಕ್ಷೇತ್ರಗಳಾಗಿವೆ. ಕೋವಿಡ್-19 ಸಾಂಕ್ರಾಮಿಕ ರೋಗದ ಹಿಂದಿನ ಮಟ್ಟಕ್ಕಿಂತ ಹೆಚ್ಚಿನ ಬೇಡಿಕೆ ದೇಶದಲ್ಲಿ ನಿರ್ಮಾಣವಾಗಲಿದೆ ಎಂಬುದನ್ನು 2023ರ ಹೈ-ಫ್ರೀಕ್ವೆನ್ಸಿ ಡೇಟಾ ಸೂಚಿಸುತ್ತದೆ ಎಂದು ಫಿಚ್ ತಿಳಿಸಿದೆ.

ಮೂಲಸೌಕರ್ಯ ವೆಚ್ಚದಲ್ಲಿ ತೀವ್ರ ಹೆಚ್ಚಳದಿಂದ ಉಕ್ಕಿನ ಬೇಡಿಕೆ ಹೆಚ್ಚಾಗಲಿದೆ. ಹಾಗೆಯೇ 2023ರಲ್ಲಿ ಅತ್ಯುತ್ತಮ ಬೆಳವಣಿಗೆ ಕಂಡ ವಾಹನ ವಲಯವು ತನ್ನ ಬೆಳವಣಿಗೆಯನ್ನು ಕಾಪಾಡಿಕೊಳ್ಳುವ ನಿರೀಕ್ಷೆಯಿದೆ. ಮಾಹಿತಿ ತಂತ್ರಜ್ಞಾನ (ಐಟಿ) ಸೇವೆಗಳ ಕ್ಷೇತ್ರದಲ್ಲಿ ಯುಎಸ್ ಮತ್ತು ಯೂರೋಜೋನ್​ನಿಂದ ಬೇಡಿಕೆ ಕಡಿಮೆಯಾದರೂ ಬೆಳವಣಿಗೆ ಸ್ಥಿರವಾಗಿರಲಿದೆ ಎಂದು ಫಿಚ್ ನಿರೀಕ್ಷಿಸಿದೆ. ಐಟಿ ಸೇವಾ ಉದ್ಯಮದಲ್ಲಿ ಉದ್ಯೋಗಿಗಳ ಕೆಲಸ ತೊರೆಯುವಿಕೆ ಕಡಿಮೆಯಾಗಲಿರುವುದರಿಂದ ಲಾಭ ಏರಿಕೆಯಾಗಲಿದೆ.

ತೈಲ ಮಾರುಕಟ್ಟೆ ಕಂಪನಿಗಳು ಮುಂದಿನ ದಿನಗಳಲ್ಲಿ ಮಧ್ಯಮ ಮಟ್ಟಕ್ಕಿಂತ ಹೆಚ್ಚಿನ ಸುಸ್ಥಿರ ಲಾಭ ಪಡೆಯುವ ಸಾಧ್ಯತೆಯಿದೆ. ಹಣಕಾಸು ವರ್ಷ 23ರ ನಂತರದಲ್ಲಿ ಕಚ್ಚಾ ತೈಲ ಬೆಲೆಗಳು ಕಡಿಮೆಯಾಗಿರುವುದರಿಂದ ಈ ಕಂಪನಿಗಳ ಲಾಭ ಹೆಚ್ಚಾಗಲಿದೆ. ಹೀಗಾಗಿ ಇದು ಈ ವಲಯಕ್ಕೆ ಸಕಾರಾತ್ಮಕ ಬೆಳವಣಿಗೆಯಾಗಿದೆ.

ಇನ್ನು ದೂರಸಂಪರ್ಕ ಕ್ಷೇತ್ರದಲ್ಲಿ ನಡೆಯುತ್ತಿರುವ ಏಕೀಕರಣವು ಭಾರತದ ಅಗ್ರ ಎರಡು ದೂರಸಂಪರ್ಕ ಕಂಪನಿಗಳಿಗೆ ಆರೋಗ್ಯಕರ ಲಾಭಾಂಶಕ್ಕೆ ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಭಾರತವು ತನ್ನ ಆರ್ಥಿಕ ಬೆಳವಣಿಗೆಯನ್ನು ವಿಸ್ತರಿಸುವ ಪ್ರಯತ್ನದಲ್ಲಿರುವ ಈ ಸಂದರ್ಭದಲ್ಲಿ ಕಾರ್ಪೊರೇಟ್ ಲಾಭದಾಯಕತೆಯ ನಿರೀಕ್ಷಿತ ಹೆಚ್ಚಳವು ರಾಷ್ಟ್ರದ ವ್ಯಾಪಾರ ವಹಿವಾಟು ಕ್ಷೇತ್ರಕ್ಕೆ ಆಶಾದಾಯಕವಾಗಿರಲಿದೆ ಎಂದು ಫಿಚ್ ರೇಟಿಂಗ್ಸ್​ ಹೇಳಿದೆ.

ಇದನ್ನೂ ಓದಿ: ಟಾಟಾ ಮೋಟಾರ್ಸ್​ ಷೇರು ಮೌಲ್ಯ ಒಂದೇ ವರ್ಷದಲ್ಲಿ ದ್ವಿಗುಣ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.