ನವದೆಹಲಿ: ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯ ಅಂದಾಜನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತಗ್ಗಿದೆ. 2022ನೇ ಆರ್ಥಿಕ ವರ್ಷದಲ್ಲಿ ಶೇ.6.8ಕ್ಕೆ ಇಳಿಕೆ ಮಾಡಿ ಮುನ್ಸೂಚನೆ ನೀಡಿದೆ. ಆದರೆ, ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಹೇಳಿದೆ.
ಇದೇ ಜುಲೈನಲ್ಲಿ ನೀಡಿದ್ದ ಪ್ರಸಕ್ತ ಆರ್ಥಿಕ ವರ್ಷಕ್ಕೆ ಭಾರತದ ಜಿಡಿಪಿಯು ಶೇ.7.4ರಷ್ಟು ಬೆಳವಣಿಗೆ ಕಾಣಲಿದೆ ಎಂದು ಮುನ್ಸೂಚನೆ ನೀಡಲಾಗಿತ್ತು. ಆದರೆ, ಈಗ 2022ನೇ ಸಾಲಿನಲ್ಲಿ ಶೇ.6.8ಕ್ಕೆ ಅಂದಾಜು ತಗ್ಗಿಸಲಾಗಿದೆ. ಅಲ್ಲದೇ, 2023ನೇ ಸಾಲಿಲ್ಲಿ ಮತ್ತಷ್ಟು ಇಳಿಕೆಯಾಗುವ ಅಂದಾಜು ಮಾಡಲಾಗಿದ್ದು, ಆ ಸಾಲಿನಲ್ಲಿ ಜಿಡಿಪಿ ಬೆಳವಣಿಗೆಯು ಶೇ.6.1ಕ್ಕೆ ಕುಸಿಯಲಿದೆ ಎಂದು ಐಎಂಎಫ್ ಹೇಳಿದೆ.
ವಿಶ್ವದ 3 ದೊಡ್ಡ ಆರ್ಥಿಕತೆಗಳಾದ ಯುಎಸ್, ಚೀನಾ ಮತ್ತು ಯೂರೋ ಪ್ರದೇಶಗಳು ಅದೇ ಸ್ಥಾನದಲ್ಲಿ ಮುಂದುವರೆಸುತ್ತವೆ. ಜಾಗತಿಕ ಹಣದುಬ್ಬರ ಈ ವರ್ಷ ಗರಿಷ್ಠ ಶೇ9.5ಕ್ಕೆ ತಲುಪುವ ನಿರೀಕ್ಷೆ ಇದ್ದು, 2024ರ ವೇಳೆಗೆ ಶೇ.4.1ಕ್ಕೆ ಕುಸಿಯಲಿದೆ ಎಂದು ಐಎಂಎಫ್ ಅಂದಾಜಿಸಿದೆ.
ಇದನ್ನೂ ಓದಿ: ಉಪಗ್ರಹ ತಯಾರಿಕೆ..ಭಾರತದತ್ತ ವಿದೇಶಿ ಕಂಪನಿಗಳ ನೋಟ.. 2025ರ ವೇಳೆಗೆ 3.2 ಶತಕೋಟಿ ಡಾಲರ್ ವ್ಯವಹಾರ ನಿರೀಕ್ಷೆ