ಕ್ರೆಡಿಟ್ ಕಾರ್ಡ್ ಎಂದರೆ ಕೇವಲ ಹಣವನ್ನು ಬೇಕಾದಾಗ ಪಾವತಿ ಮಾಡುವ ಮಾರ್ಗ ಒಂದೇ ಅಲ್ಲ. ಈ ಕಾರ್ಡ್ ರಿವಾರ್ಡ್ ಪಾಯಿಂಟ್, ಕ್ಯಾಶ್ ಬ್ಯಾಕ್, ರಿಯಾಯಿತಿ ಸೇರಿದಂತೆ ಹಲವು ಪ್ರಯೋಜನ ಹೊಂದಿರುತ್ತದೆ. ಬ್ಯಾಕ್ಡ್ರಾಪ್ ಹೊರತಾಗಿ ಯಾವ ಕ್ರೆಡಿಟ್ ಕಾರ್ಡ್ ಅವಶ್ಯಕ, ಯಾವುದು ಸೂಕ್ತ ಎಂಬುದನ್ನು ನಿರ್ಧರಿಸುವುದು ಕೂಡ ಪ್ರಮುಖವಾಗಿದೆ. ಆದಾಯ ಮತ್ತು ಕ್ರೆಡಿಟ್ ಸ್ಕೋರ್ ಹೊಂದಿರುವ ವ್ಯಕ್ತಿ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ. ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಸಾಮರ್ಥ್ಯ ಕಾರ್ಡ್ ಆಧಾರದ ಮೇಲೆ ಹಣವನ್ನು ಕೂಡ ಪರಿಶೀಲಿಸಬೇಕು. ಅಧಿಕ ಮೊತ್ತದ ಕಾರ್ಡ್ ಅನ್ನು ನೀವು ನೋಡಿದರೆ, ಅದು ತಿರಸ್ಕೃತವಾಗುವ ಸಾಧ್ಯತೆ ಇರುತ್ತದೆ. ಜೊತೆಗೆ, ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೂ ಪರಿಣಾಮ ಬೀರುತ್ತದೆ.
ಕ್ರೆಡಿಟ್ ಕಾರ್ಡ್ ಬಳಕೆ ಹೇಗೆ?: ಕಾರ್ಡ್‌ನ ಆಯ್ಕೆಯಷ್ಟೇ ಕಾರ್ಡ್ ಬಳಕೆ ಕೂಡ ನಿರ್ಣಯಕವಾಗಿದೆ. ಒಂದು ವೇಳೆ ನೀವು ದ್ವಿಚಕ್ರ ವಾಹನ ಹೊಂದಿದ್ದರೆ, ಪೆಟ್ರೋಲ್ ಕ್ಯಾಶ್ ಬ್ಯಾಕ್ ಆಫರ್ ಮತ್ತು ರಿವಾರ್ಡ್ ಪಾಯಿಂಟ್ ಸೌಲಭ್ಯ ಬಗ್ಗೆ ಪರಿಶೀಲಿಸಿ. ಆನ್ಲೈನ್ ಮೂಲಕ ಹೆಚ್ಚಿನ ವಾಹಿವಾಟು ಮಾಡುವವರು ಕೂಡ ಇದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇನ್ನು ಕ್ರೆಡಿಟ್ ಕಾರ್ಡ್‌ನ ಕ್ಯಾಶ್ಬ್ಯಾಕ್ ಮತ್ತು ರಿಯಾಯಿತಿಗಳನ್ನು ಅರ್ಥಮಾಡಿಕೊಳ್ಳಲು ಕಾರ್ಡ್‌ನ ನಿಯಮ ಮತ್ತು ಷರತ್ತುಗಳನ್ನು ಓದುವುದು ಅವಶ್ಯಕವಾಗಿದೆ. ಇದಾದ ಬಳಿಕವೇ ಬ್ಯಾಕ್ ಅಥವಾ ಆರ್ಥಿಕ ಸಂಸ್ಥೆಗಳು ಕಾರ್ಡ್‌ಗೆ ನೀಡಿರುವ ಪ್ರಯೋಜನವನ್ನು ತಿಳಿಯಲು ಸಾಧ್ಯವಾಗುತ್ತದೆ.
ಅಧಿಕ ಮಿತಿ ಬಳಕೆ: ಕ್ರೆಡಿಟ್ ಕಾರ್ಡ್‌ನ ಹೆಚ್ಚಿನ ಲಿಮಿಟ್ ಹೊಂದಿದ್ಯಾ ಎಂಬುದನ್ನು ಮೊದಲು ತಿಳಿಯಿರಿ. ಬ್ಯಾಂಕ್‌ಗಳು ಆದಾಯ ಮತ್ತು ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಈ ಲಿಮಿಟ್ ಅನ್ನು ನಿರ್ಧರಿಸಿರುತ್ತದೆ. ಆದಾಗ್ಯೂ, ಕ್ರೆಡಿಟ್ ಕಾರ್ಡ್ಗಳು ವಿಧಿಸಿರುವ ಎಲ್ಲಾ ಕಾರ್ಡ್ ಲಿಮಿಟ್ ಬಳಕೆ ಮಾಡುವುದಲ್ಲ. ಬ್ಯಾಂಕ್‌ಗಳು ನಿಯತಕಾಲಿಕವಾಗಿ ನಿಮ್ಮ ಗರಿಷ್ಠ ಕ್ರೆಡಿಟ್ ಮಿತಿಯನ್ನು ಹೆಚ್ಚಿಸಲು ಅವಕಾಶ ನೀಡುತ್ತವೆ. ಈ ಅವಕಾಶವನ್ನು ಸಾಧ್ಯವಾದಷ್ಟು ಮಟ್ಟಿಗೆ ಬಳಸಿಕೊಳ್ಳಿ. ಹಾಗೆಂದ ಮಾತ್ರಕ್ಕೆ ನೀವು ಹೆಚ್ಚು ಖರ್ಚು ಮಾಡಬಹುದು ಎಂದಲ್ಲ. ಕಾರ್ಡ್ ಮಿತಿಯ ಶೇ 50ರಷ್ಟು ಬಳಕೆ ಮಾಡುವುದು ಉತ್ತಮ. ಉಳಿದ ಶೇ 50ರಷ್ಟನ್ನು ಆಸ್ಪತ್ರೆಗೆ ದಾಖಲಾಗುವ ವೇಳೆ ಸೇರಿದಂತೆ ಇನ್ನಿತರ ತುರ್ತು ಪರಿಸ್ಥಿತಿ ಸಮಯಕ್ಕಾಗಿ ಕಾಪಾಡಿಕೊಳ್ಳಬೇಕು.
ಬಜೆಟ್ ಆಧಾರದ ಮೇಲೆ..: ನಿಮ್ಮ ಆದಾಯದ ಬಜೆಟ್ ಆನುಸಾರ ಖರ್ಚು ಮಾಡುವುದು ಯಾವಾಗಲೂ ಉತ್ತಮ. ಅದೇ ರೀತಿ ಕ್ರೆಡಿಟ್ ಕಾರ್ಡ್ ಮೇಲೆ ಹಣ ಖರ್ಚು ಮಾಡುವಾಗಲೂ ಯೋಜನೆ ರೂಪಿಸಿ. ಉದಾಹರಣೆ, ನೀವು ಏನಾದರೂ ಕೊಳ್ಳಬೇಕು ಆದಾಗ ಕಾರ್ಡ್ ಬಳಕೆ ಮಾಡುವುದಾದರೆ, ಅದರ ಮೇಲೆ ಶೇ 10ರಷ್ಟು ರಿಯಾಯಿತಿ ಪಡೆಯಬಹುದು. ಹಾಗಾಗಿ, ಕಾರ್ಡ್‌ನ ಪ್ರಯೋಜನವನ್ನು ಆದಷ್ಟು ಮಟ್ಟಿಗೆ ಬಳಕೆ ಮಾಡುವುದು ಉತ್ತಮ.
ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿರಲಿ ಶಿಸ್ತು: "ಕ್ರೆಡಿಟ್ ಕಾರ್ಡ್ ಮೇಲೆ ಕೆಲವು ಬ್ಯಾಂಕ್‌ಗಳು ವಾರ್ಷಿಕ ಫೀಸ್ ನಿಗದಿಸುವುದಿಲ್ಲ. ಆದರೆ, ಇದಕ್ಕೆ ಮಿತಿ ಇರುತ್ತದೆ. ಈ ಲಾಭವನ್ನು ವರ್ಷಕ್ಕೆ ನೀವು ಕೆಲವು ನಿರ್ದಿಷ್ಟ ಹಣ ಬಳಕೆ ಮಾಡಿದಾಗ ಮಾತ್ರ ಪಡೆಯಬಹುದಾಗಿದೆ. ಕ್ರೆಡಿಟ್ ಕಾರ್ಡ್ ನೀವು ಬಳಸುತ್ತಿರುವಾಗ ಬಿಲ್ಗಳನ್ನು ಅವಧಿಗೆ ಮುನ್ನವೇ ಪಾವತಿ ಮಾಡಬೇಕು. ಕಾರ್ಡ್‌ನ ನಿಯಮಗಳನ್ನು ಶಿಸ್ತುಬದ್ದವಾಗಿ ಬಳಕೆ ಮಾಡಿದಾಗ ಮಾತ್ರ ನೀವು ಅದಕ್ಕೆ ನೀಡಿರುವ ಲಾಭದ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ" ಎನ್ನುತ್ತಾರೆ ಆಕ್ಸಿಸ್ ಬ್ಯಾಂಕ್ನ ಕಾರ್ಡ್ಸ್ ಅಂಡ್ ಪೇಮೆಂಟ್ ಅಧ್ಯಕ್ಷ ಸಂಜೀವ್ ಮೊಗೆ.
ಇದನ್ನೂ ಓದಿ: ನೀವು ಷೇರು ಹೂಡಿಕೆದಾರರೇ, ಈ ವಿಭಾಗದಲ್ಲಿ ಹೂಡಿಕೆ ಮಾಡಿದ 10ರಲ್ಲಿ 9 ಜನರಿಗೆ ನಷ್ಟ: ಸೆಬಿ ವರದಿ!