ETV Bharat / business

ಹಬ್ಬದ ಸೀಸನ್​ನಲ್ಲಿ ಆಹಾರ ಪದಾರ್ಥ, ಸರಕು ಬೆಲೆಗಳು ಸ್ಥಿರ: ಕೇಂದ್ರ ಸರ್ಕಾರ ಭರವಸೆ - ದೇಶೀಯ ಮಾರುಕಟ್ಟೆಗಳಲ್ಲಿ ಬೆಲೆ ಸ್ಥಿರತೆ

ಹಬ್ಬದ ಋತುವಿನಲ್ಲಿ ಆಹಾರ ಮತ್ತು ಸರಕು ದರಗಳು ಸ್ಥಿರವಾಗಿರಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Food prices to remain stable during festive season: Centre

author img

By ETV Bharat Karnataka Team

Published : Oct 19, 2023, 6:33 PM IST

ನವದೆಹಲಿ: ಮುಂಬರುವ ಹಬ್ಬದ ಸೀಸನ್​ನಲ್ಲಿ ಎಲ್ಲಾ ಪ್ರಮುಖ ಆಹಾರ ಪದಾರ್ಥಗಳು ಮತ್ತು ಸರಕುಗಳ ಬೆಲೆಗಳು ಸ್ಥಿರವಾಗಿರುತ್ತವೆ ಎಂದು ಸರ್ಕಾರ ಗುರುವಾರ ಭರವಸೆ ನೀಡಿದೆ. ಬೆಲೆಗಳನ್ನು ನಿಯಂತ್ರಿಸಲು ಸರ್ಕಾರ ಲಭ್ಯವಿರುವ ಎಲ್ಲಾ ಸಾಧನಗಳನ್ನು ಬಳಸುತ್ತಿದೆ ಎಂದು ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಮಾಧ್ಯಮಗಳಿಗೆ ತಿಳಿಸಿದರು.

ಗೋಧಿ, ಅಕ್ಕಿ, ಖಾದ್ಯ ತೈಲಗಳು ಮತ್ತು ಸಕ್ಕರೆಯಂತಹ ಅಗತ್ಯ ವಸ್ತುಗಳ ಬೆಲೆಗಳು ಸ್ಥಿರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಕಳೆದ ಕೆಲ ತಿಂಗಳುಗಳಲ್ಲಿ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು. ಸಕ್ಕರೆ ಬೆಲೆಗಳು ಭಾರತದಲ್ಲಿ ಪ್ರತಿ ಕೆ.ಜಿ.ಗೆ 44 ರೂ. ಇದ್ದು, ವಿದೇಶಗಳಿಗೆ ಹೋಲಿಸಿದರೆ ಸಾಕಷ್ಟು ಅಗ್ಗವಾಗಿದೆ. ಆದರೆ ದೇಶದಲ್ಲಿ ಸಾಕಷ್ಟು ಸಕ್ಕರೆ ಲಭ್ಯವಾಗುವಂತೆ ನೋಡಿಕೊಳ್ಳಲು ಮತ್ತು ಬೆಲೆಗಳನ್ನು ನಿಯಂತ್ರಿಸಲು ಅಕ್ಕರೆ ರಫ್ತಿನ ಮೇಲಿನ ನಿರ್ಬಂಧಗಳು ಅಕ್ಟೋಬರ್ 31 ರ ನಂತರವೂ ಜಾರಿಯಲ್ಲಿರುತ್ತವೆ ಎಂದು ಚೋಪ್ರಾ ಹೇಳಿದರು.

ಸಕ್ಕರೆ ಬೆಲೆಗಳು ಸ್ಥಿರವಾಗಿರುವುದರಿಂದಲೇ 2022-23ನೇ ಸಾಲಿನಲ್ಲಿ ರೈತರಿಗೆ ಕಬ್ಬಿನ ಬಾಕಿಯನ್ನು ಶೇಕಡಾ 95 ರಷ್ಟು ಪಾವತಿಸಲು ಸಾಧ್ಯವಾಗಿದೆ. ಕಡಲೆಕಾಯಿ ಎಣ್ಣೆ ಹೊರತುಪಡಿಸಿ, ಖಾದ್ಯ ತೈಲ ಬೆಲೆಗಳು ಸಹ ಕಳೆದೊಂದು ವರ್ಷದಿಂದ ಕಡಿಮೆಯಾಗಿವೆ ಎಂದು ಅವರು ತಿಳಿಸಿದರು. ದೇಶೀಯ ಮಾರುಕಟ್ಟೆಗಳಲ್ಲಿ ಬೆಲೆ ಸ್ಥಿರತೆ ಮತ್ತು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಪಾರ್​ಬಾಯಿಲ್ಡ್​ ಅಕ್ಕಿಯ ಮೇಲಿನ ಶೇಕಡಾ 20 ರಷ್ಟು ರಫ್ತು ಸುಂಕವನ್ನು ಮಾರ್ಚ್ 31, 2024 ರವರೆಗೆ ವಿಸ್ತರಿಸಲಾಗಿದೆ ಎಂದು ಚೋಪ್ರಾ ಹೇಳಿದರು.

ಪಾರ್​ಬಾಯಿಲ್ಡ್​ ಅಕ್ಕಿಯ ಸೋಗಿನಲ್ಲಿ ಬೇರೆ ಯಾವುದೇ ರೀತಿಯ ಅಕ್ಕಿಯನ್ನು ರಫ್ತು ಮಾಡದಂತೆ ಕಟ್ಟುನಿಟ್ಟಾದ ತಪಾಸಣೆಗಳನ್ನು ಖಚಿತಪಡಿಸಿಕೊಳ್ಳಲು ಕಸ್ಟಮ್ಸ್ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಕೆಲ ಸ್ನೇಹಪರ ದೇಶಗಳಿಗೆ ಮಾತ್ರ ಅಕ್ಕಿ ರಫ್ತು ಮಾಡಲು ಅನುಮತಿ ನೀಡಲಾಗಿದೆ. ಒಎಂಎಸ್ಎಸ್ ಅಡಿಯಲ್ಲಿ ಸುಮಾರು 97,000 ಟನ್ ಅಕ್ಕಿಯನ್ನು ಮಾರಾಟ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಕಳೆದ ಕೆಲ ತಿಂಗಳುಗಳಿಂದ ಅಕ್ಕಿ ಹಣದುಬ್ಬರವು ಶೇಕಡಾ 11 ರಷ್ಟಿದ್ದರೂ, ಸುಗ್ಗಿಯ ಋತು ಪ್ರಾರಂಭವಾಗುವುದರೊಂದಿಗೆ ಇದು ತೀವ್ರವಾಗಿ ಕಡಿಮೆಯಾಗಬಹುದು ಎಂದು ಚೋಪ್ರಾ ವಿಶ್ವಾಸ ವ್ಯಕ್ತಪಡಿಸಿದರು.

ಗೋಧಿ ಬೆಲೆಗಳು ಸಹ ನಿಯಂತ್ರಣದಲ್ಲಿವೆ. ಕಳೆದ ಒಂದು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಶೇಕಡಾ 3.6 ರಷ್ಟಿದೆ. ಆದರೆ ಸಗಟು ಮಾರಾಟದಲ್ಲೂ ಗೋಧಿಯ ಹಣದುಬ್ಬರ ಶೇ 3.86ರಷ್ಟಿದೆ. ಸಾಕಷ್ಟು ದಾಸ್ತಾನು ಲಭ್ಯವಿರುವುದರಿಂದ ಗೋಧಿ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿಲ್ಲ. ಏಪ್ರಿಲ್ 2024 ರವರೆಗೆ 87 ಲಕ್ಷ ಟನ್ ಗೋಧಿ ದಾಸ್ತಾನು ಲಭ್ಯವಿರುತ್ತದೆ. ಅಲ್ಲದೆ 76 ಲಕ್ಷ ಟನ್ ಗೋಧಿ ಬಫರ್ ನಲ್ಲಿ ಲಭ್ಯವಿದ್ದು ಅದನ್ನು ಬಳಸಬಹುದು ಎಂದು ಚೋಪ್ರಾ ಮಾಹಿತಿ ನೀಡಿದರು.

ಇದನ್ನೂ ಓದಿ : ತನ್ನದೇ ನಿರ್ದೇಶಕರ ಕಂಪನಿಗಳಿಗೆ ಸಾಲ; ಐಸಿಐಸಿಐ ಬ್ಯಾಂಕ್​ಗೆ ₹12 ಕೋಟಿ ದಂಡ ವಿಧಿಸಿದ ಆರ್​ಬಿಐ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.