ETV Bharat / business

ರಷ್ಯಾದಿಂದ ತೈಲ ಖರೀದಿಗೆ ಕೊಂಕು: ಯುರೋಪಿಯನ್ ಕೌನ್ಸಿಲ್​ ನಿರ್ಬಂಧಗಳನ್ನು ಮೊದಲು ಓದಿ- ಜೈಶಂಕರ್ ಚಾಟಿ

ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸಿ ಅದನ್ನು ಸಂಸ್ಕರಿಸಿ ಮಾರಾಟ ಮಾಡುವುದಕ್ಕೆ ನಿರ್ಬಂಧ ಹೇರಬೇಕೆಂದು ಯುರೋಪಿಯನ್ ಯೂನಿಯನ್ ನೀತಿ ವಿಭಾಗ ಮುಖ್ಯಸ್ಥ ಜೋಸೆಫ್ ಬೊರೆಲ್ ಹೇಳಿದ್ದಾರೆ. ಇದಕ್ಕೆ ವಿದೇಶಾಂಗ ಸಚಿವ ಜೈಶಂಕರ್ ತಿರುಗೇಟು ನೀಡಿದ್ದಾರೆ.

ಯುರೋಪಿಯನ್ ಕೌನ್ಸಿಲ್​ ನಿರ್ಬಂಧಗಳ ಬಗ್ಗೆ ಮೊದಲು ನೋಡಿ: ವಿದೇಶಾಂಗ ಸಚಿವ ಜೈಶಂಕರ್
Look at EU Council regulations Jaishankar on import of Russian oil
author img

By

Published : May 17, 2023, 1:32 PM IST

ಬ್ರುಸೆಲ್ಸ್​ (ಬೆಲ್ಜಿಯಂ) : ರಷ್ಯಾದ ಕ್ರೂಡ್​ನಿಂದ ತಯಾರಾದ ಭಾರತೀಯ ರಿಫೈನ್ಡ್​ ಉತ್ಪನ್ನಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಯುರೋಪಿಯನ್ ಯೂನಿಯನ್ ನೀತಿ ವಿಭಾಗ ಮುಖ್ಯಸ್ಥ ಜೋಸೆಫ್ ಬೊರೆಲ್ ಹೇಳಿದ್ದಾರೆ. ಇದಕ್ಕೆ ಭಾರತದ ವಿದೇಶಾಂಗ ಮಂತ್ರಿ ಎಸ್ ಜೈಶಂಕರ್ ಉತ್ತರ ನೀಡಿದ್ದು, ಮೊದಲಿಗೆ ಯುರೋಪಿಯನ್ ಕೌನ್ಸಿಲ್​ನ ನಿರ್ಬಂಧಗಳನ್ನು ಓದುವಂತೆ ಬೊರೆಲ್​ಗೆ ಹೇಳಿದ್ದಾರೆ. "ಯುರೋಪಿಯನ್ ಕೌನ್ಸಿಲ್ ನಿರ್ಬಂಧಗಳ ಬಗ್ಗೆ ನೋಡಿ. ರಷ್ಯಾದ ಕ್ರೂಡ್​ ಮೂರನೇ ದೇಶಗಳಲ್ಲಿ ಪರಿವರ್ತನೆಯಾಗುವುದರಿಂದ ಅದನ್ನು ರಷ್ಯಾದ ತೈಲ ಎಂದು ಹೇಳಲು ಆಗುವುದಿಲ್ಲ. ಕೌನ್ಸಿಲ್​ನ 833/2014 ನಿಯಮವನ್ನು ಮತ್ತೊಮ್ಮೆ ನೋಡುವಂತೆ ನಾನು ವಿನಂತಿ ಮಾಡುತ್ತೇನೆ" ಎಂದು ಜೈಶಂಕರ್ ತಿಳಿಸಿದ್ದಾರೆ.

ಭಾರತವು ರಷ್ಯಾದ ತೈಲವನ್ನು ಮರು ಮಾರಾಟ ಮಾಡುವುದಕ್ಕೆ ನಿರ್ಬಂಧ ವಿಧಿಸಬೇಕೆಂದು ಯುರೋಪಿಯನ್ ಯೂನಿಯನ್​ ಗುಂಪಿನ ಪ್ರಮುಖ ರಾಜತಾಂತ್ರಿಕ ವ್ಯಕ್ತಿಯು ಹೇಳಿದ ನಂತರ ಈ ಬೆಳವಣಿಗೆಗಳು ನಡೆದಿವೆ. "ಭಾರತವು ರಷ್ಯಾದ ತೈಲವನ್ನು ಖರೀದಿಸುತ್ತದೆ, ಇದು ಸಹಜವಾಗಿದೆ..." ಎಂದು ಯುರೋಪಿಯನ್ ಯೂನಿಯನ್​ನ ವಿದೇಶಾಂಗ ನೀತಿ ಮುಖ್ಯಸ್ಥ ಬೊರೆಲ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು. ಬ್ರಸೆಲ್ಸ್‌ನಲ್ಲಿ ನಡೆದ ಟ್ರೇಡ್ ಟೆಕ್ನಾಲಜಿ ಮಾತುಕತೆಯಲ್ಲಿ ಬೋರೆಲ್ ಜೈಶಂಕರ್ ಅವರನ್ನು ಭೇಟಿಯಾಗಿದ್ದರು. ಆದರೆ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಹಾಜರಿರಲಿಲ್ಲ.

ಜೈಶಂಕರ್ ಅವರೊಂದಿಗೆ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಕೇಂದ್ರ ವಾಣಿಜ್ಯೋದ್ಯಮ, ಕೌಶಲ್ಯಾಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಸಭೆಯಲ್ಲಿದ್ದರು. ಬಾಂಗ್ಲಾದೇಶ, ಸ್ವೀಡನ್ ಮತ್ತು ಬೆಲ್ಜಿಯಂ ಒಳಗೊಂಡ ಮೂರು ರಾಷ್ಟ್ರಗಳ ಭೇಟಿಯ ಕೊನೆಯ ಹಂತಕ್ಕಾಗಿ ಜೈಶಂಕರ್ ಸೋಮವಾರ ಬ್ರಸೆಲ್ಸ್‌ಗೆ ಆಗಮಿಸಿದರು. ಈ ಹಿಂದೆಯೂ ಜೈಶಂಕರ್ ಅವರು ರಷ್ಯಾದಿಂದ ಭಾರತಕ್ಕೆ ತೈಲ ಆಮದುಗಳನ್ನು ಸಮರ್ಥಿಸಿಕೊಂಡಿದ್ದರು, ಆದರೆ ಉಕ್ರೇನ್‌ನಲ್ಲಿನ ಮಿಲಿಟರಿ ಕ್ರಮವನ್ನು ಗಮನದಲ್ಲಿಟ್ಟುಕೊಂಡು ರಷ್ಯಾದೊಂದಿಗಿನ ತನ್ನ ವ್ಯಾಪಾರವನ್ನು ಕಡಿಮೆ ಮಾಡಲು ನವದೆಹಲಿಯ ಮೇಲೆ ಒತ್ತಡ ಹೇರಿದ್ದಕ್ಕಾಗಿ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಪರೋಕ್ಷವಾಗಿ ಟೀಕಿಸಿದ್ದರು.

ತನ್ನ ಅಗತ್ಯಗಳಿಗೆ ತಕ್ಕಂತೆ ಯುರೋಪ್ ರಾಷ್ಟ್ರಗಳು ನಡೆದುಕೊಳ್ಳುವಾಗ ಅದೇ ರೀತಿಯಲ್ಲಿ ಭಾರತ ಮಾಡಿದಾಗ ಅದನ್ನು ಹೇಗೆ ತಡೆಯುತ್ತೀರಿ ಎಂದು ಜೈಶಂಕರ್ ಪ್ರಶ್ನಿಸಿದ್ದರು. ಯುರೋಪಿಯನ್ ದೇಶಗಳಿಗೆ ಹೋಲಿಸಿದರೆ ರಷ್ಯಾದೊಂದಿಗಿನ ನಮ್ಮ ವ್ಯಾಪಾರವು ಬಹಳ ಕಡಿಮೆ ಮಟ್ಟದಲ್ಲಿದೆ. ಇದು USD 12 ರಿಂದ 13 ಶತಕೋಟಿ ಆಗಿದೆ. ನಾವು ರಷ್ಯನ್ನರಿಗೆ ಉತ್ಪನ್ನಗಳ ಗುಂಪನ್ನು ಸಹ ನೀಡಿದ್ದೇವೆ.. ಬೇರೆಯವರು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ವಿದೇಶಾಂಗ ಸಚಿವ ಜೈಶಂಕರ್ ಡಿಸೆಂಬರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಜರ್ಮನಿ ವಿದೇಶಾಂಗ ಸಚಿವರ ಜೊತೆಗಿದ್ದಾಗ ಹೇಳಿದ್ದರು. ರಷ್ಯಾದಿಂದ ಭಾರತಕ್ಕೆ ಬರುವ ಕಚ್ಚಾ ತೈಲದ ಆಮದುಗಳು ಮಾರ್ಚ್‌ನಲ್ಲಿ ದಿನಕ್ಕೆ 1.64 ಮಿಲಿಯನ್ ಬ್ಯಾರೆಲ್‌ಗಳ ಹೊಸ ಮಟ್ಟಕ್ಕೇರಿವೆ. ಈಗ ಭಾರತದ ಸಾಂಪ್ರದಾಯಿಕ ತೈಲ ಪೂರೈಕೆದಾರ ರಾಷ್ಟ್ರ ಇರಾಕ್‌ನಿಂದ ಖರೀದಿಸುವ ತೈಲಕ್ಕಿಂತಲೂ ದುಪ್ಪಟ್ಟು ಪ್ರಮಾಣದಲ್ಲಿ ರಷ್ಯಾ ಭಾರತಕ್ಕೆ ತೈಲ ಪೂರೈಸುತ್ತಿದೆ.

ಇದನ್ನೂ ಓದಿ : ನಿಷ್ಕ್ರಿಯ ಗೂಗಲ್ ಅಕೌಂಟ್​ ಡಿಲೀಟ್​: Google ಮಹತ್ವದ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.