ನವದೆಹಲಿ: ಟ್ವಿಟರ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳನ್ನು ಟ್ವೀಟ್ ಮಾಡುತ್ತಿರುವ ಬಗ್ಗೆ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಭಾರತವು ಇದರ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿತ್ತು. ಪ್ರಮುಖ ಜಾಹೀರಾತು ಬ್ರ್ಯಾಂಡ್‌ಗಳ ಪ್ರಚಾರದ ಪೋಸ್ಟ್ಗಳಲ್ಲಿ ಚೈಲ್ಡ್ ಪೋರ್ನ್ ಟ್ವೀಟ್‌ಗಳು ಕಾಣಿಸಿಕೊಂಡಿದ್ದರಿಂದ ಅವು ಟ್ವಿಟರ್‌ನಿಂದ ಹೊರಬಂದಿವೆ ಎಂದು ವರದಿಯಾಗಿದೆ. ಇದಕ್ಕೆ ಮಸ್ಕ್ ಪ್ರತಿಕ್ರಿಯಿಸುವಾಗ ಈ ರೀತಿ ಹೇಳಿದ್ದಾರೆ.
ಚೈಲ್ಡ್ ಪೋರ್ನ್ ಟ್ವೀಟ್ಗೆ ಸಂಬಂಧಿಸಿದ ದೂರಿಗೆ ಟ್ವಿಟರ್ ನೀಡಿರುವ ಉತ್ತರ ಅಪೂರ್ಣವಾಗಿದೆ. ಅಲ್ಲದೇ ಇದು ಆಯೋಗಕ್ಕೆ ಸಮಾಧಾನ ತಂದಿಲ್ಲ ಎಂದು ಮಂಗಳವಾರ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಹೇಳಿದ ಬಳಿಕ ಮಸ್ಕ್ರಿಂದ ಈ ಪ್ರತಿಕ್ರಿಯೆ ಬಂದಿದೆ. ಈ ಬಗ್ಗೆ ಸರಿಯಾದ ರೀತಿಯಲ್ಲಿ ಉತ್ತರವನ್ನು ನೀಡಲು ಆಯೋಗವು ಸೆ.30ರವರೆಗೆ ಸಮಯ ನೀಡಿದೆ.
ಇದನ್ನೂ ಓದಿ: ಎಲಾನ್ ಮಸ್ಕ್- ಟ್ವಿಟರ್ ಫೈಟ್.. ಮೈಕ್ರೋಬ್ಲಾಗಿಂಗ್ನ ಭದ್ರತಾ ವೈಫಲ್ಯದ ಸಾಕ್ಷ್ಯ ನೀಡಲಿರುವ ಮಾಜಿ ಉದ್ಯೋಗಿ
ಆಯೋಗವು ಈ ವಿಷಯದಲ್ಲಿ ಎಫ್‌ಐಆರ್ ದಾಖಲಿಸುವಂತೆ ಕೋರಿ ದೆಹಲಿ ಪೊಲೀಸರಿಗೆ ಸಮನ್ಸ್ ಜಾರಿ ಮಾಡಿದೆ. ಮಕ್ಕಳ ಅಶ್ಲೀಲ ಮತ್ತು ಅತ್ಯಾಚಾರದ ವಿಡಿಯೋಗಳಲ್ಲಿ ಇರುವ ಮಕ್ಕಳು ಮತ್ತು ಮಹಿಳೆಯರನ್ನು ಗುರುತಿಸಿ ಸಹಾಯ ಮಾಡುವಂತೆ ಶಿಫಾರಸು ಮಾಡಿದೆ. ಟ್ವಿಟರ್‌ನಿಂದ ಟ್ವೀಟ್‌ಗಳನ್ನು ಏಕೆ ತೆಗೆದು ಹಾಕಿಲ್ಲ ಅಥವಾ ಈ ಬಗ್ಗೆ ವರದಿಯಾಕೆ ಮಾಡಿಲ್ಲ ಎಂಬುದನ್ನು ತಿಳಿಸುವಂತೆ ಆಯೋಗವು ಸೂಚಿಸಿದೆ.