ಟ್ವಿಟರ್ನಲ್ಲಿ ಬ್ಲೂಟಿಕ್ ಅಥವಾ ಪರಿಶೀಲಿಸಿದ ಟ್ವಿಟರ್ ಖಾತೆ ಪಡೆಯಲು 19.99 ಯಎಸ್ ಡಾಲರ್ ಕೊಡಬೇಕು ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಇದಕ್ಕೀಗ ಪ್ರತಿಕ್ರಿಯಿಸಿರುವ ಕಂಪೆನಿಯ ನೂತನ ಮಾಲೀಕ ಎಲೋನ್ ಮಸ್ಕ್, ಪ್ರತಿ ತಿಂಗಳಿಗೆ ಅಷ್ಟು ಬೇಡ, 8 ಯುಎಸ್ ಹಣ ಪಾವತಿಸಿ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಿ ಎಂದು ಬಳಕೆದಾರರಿಗೆ ತಿಳಿಸಿದ್ದಾರೆ.
-
Twitter’s current lords & peasants system for who has or doesn’t have a blue checkmark is bullshit.
— Elon Musk (@elonmusk) November 1, 2022 " class="align-text-top noRightClick twitterSection" data="
Power to the people! Blue for $8/month.
">Twitter’s current lords & peasants system for who has or doesn’t have a blue checkmark is bullshit.
— Elon Musk (@elonmusk) November 1, 2022
Power to the people! Blue for $8/month.Twitter’s current lords & peasants system for who has or doesn’t have a blue checkmark is bullshit.
— Elon Musk (@elonmusk) November 1, 2022
Power to the people! Blue for $8/month.
ಬ್ಲೂಟಿಕ್ಗೆ ಪೇಮೆಂಟ್ ಕೇಳಿರುವ ಮಸ್ಕ್, ಹೊಸ ಫೀಚರ್ಗಳನ್ನು ನೀಡುವ ಬಗ್ಗೆಯೂ ಮಂಗಳವಾರ ರಾತ್ರಿ ಸರಣಿ ಟ್ವೀಟ್ ಮಾಡಿದ್ದಾರೆ. 8 ಯುಎಸ್ ಡಾಲರ್ ಕೊಡುವ ಖಾತೆಗಳಿಗೆ ಸೀಮಿತ ಪ್ರತಿಕ್ರಿಯೆ, ಆದ್ಯತೆಯ ಮೇಲೆ ಸರ್ಚ್ ಮತ್ತು ಟ್ಯಾಗ್ ಮಾಡುವ ರೀತಿ, ಈ ಖಾತೆಗಳಿಗೆ ಹೆಚ್ಚು ಸಮಯದ ವಿಡಿಯೋಗಳನ್ನು ಹಾಕಲು ಅವಕಾಶ ಮತ್ತು ಜಾಹೀರಾತಿನ ಅವಕಾಶವನ್ನೆಲ್ಲ ಮಾಡಿಕೊಡುವುದಾಗಿ ಪ್ರಕಟಿಸಿದ್ದಾರೆ.
ಎಂಟು ಯುಎಸ್ ಡಾಲರ್ ಎಂದರೆ ಭಾರತದ 664 ರೂಪಾಯಿ. ಮೈಕ್ರೋಬ್ಲಾಗಿಂಗ್ ವೇದಿಕೆಯು ಕಳೆದ ವರ್ಷದ ಜೂನ್ ತಿಂಗಳಲ್ಲಿ ಬ್ಲೂಟಿಕ್ ಪರಿಚಯಿಸಿತ್ತು.
ಎಲೋನ್ ಮಸ್ಕ್ ಅವರು ಕಳೆದ ಶುಕ್ರವಾರ ಟ್ವಿಟರ್ ಕಂಪೆನಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡ ತಕ್ಷಣವೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಭಾರತೀಯ ಮೂಲದ ಪರಾಗ್ ಅಗರ್‌ವಾಲ್, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಮತ್ತು ಕಂಪನಿಯ ಕಾನೂನು ವ್ಯವಹಾರಗಳು ಮತ್ತು ನೀತಿ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನು ಕೆಲಸದಿಂದ ವಜಾಗೊಳಿಸಿದ್ದರು.
ಇದನ್ನೂ ಓದಿ: ಇನ್ನು ಟ್ವಿಟರ್ ಬ್ಲೂ ಟಿಕ್ ಫ್ರೀ ಅಲ್ಲ.. ಪ್ರತಿ ತಿಂಗಳು 20 ಡಾಲರ್ ನೀಡಬೇಕು..! ಭಾರತದಲ್ಲಿ ಅದರ ಮೊತ್ತ ಎಷ್ಟು ಗೊತ್ತಾ?